ಗೆಲುವು ಖಂಡಿತಾ ನನ್ನದೇ, ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂಬುದಷ್ಟೇ ಕುತೂಹಲ: ಸೂರಜ್ ರೇವಣ್ಣ
ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಹಾಸನ ಜಿಲ್ಲೆಯಲ್ಲಿ ಗೆಲುವು ಖಂಡಿತಾ ನಮ್ಮದೇ, ಎಷ್ಟು ಅಂತರದಲ್ಲಿ ಗೆಲ್ಲುತ್ತೇವೆ ಎಂದು ನೋಡುವುದಷ್ಟೇ ಕುತೂಹಲ, ಜಿಲ್ಲೆಯಲ್ಲಿ ಗೆದ್ದು ನಾವು ಮಾದರಿ ಅನ್ನಿಸಿಕೊಳ್ಳಬೇಕು ಎಂದು ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಹೇಳಿದ್ದಾರೆ.
Published: 10th December 2021 12:48 PM | Last Updated: 10th December 2021 12:48 PM | A+A A-

ಸೂರಜ್ ರೇವಣ್ಣ
ಹಾಸನ: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಹಾಸನ ಜಿಲ್ಲೆಯಲ್ಲಿ ಗೆಲುವು ಖಂಡಿತಾ ನಮ್ಮದೇ, ಎಷ್ಟು ಅಂತರದಲ್ಲಿ ಗೆಲ್ಲುತ್ತೇವೆ ಎಂದು ನೋಡುವುದಷ್ಟೇ ಕುತೂಹಲ, ಜಿಲ್ಲೆಯಲ್ಲಿ ಗೆದ್ದು ನಾವು ಮಾದರಿ ಅನ್ನಿಸಿಕೊಳ್ಳಬೇಕು ಎಂದು ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಹೇಳಿದ್ದಾರೆ.
ಇಂದು ಹಾಸನದಲ್ಲಿ ಮತದಾನ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷವನ್ನು ಟೀಕೆ ಮಾಡುವವರಿಗೆ, ರಾಜ್ಯಕ್ಕೆ ಜಿಲ್ಲೆಯಿಂದ ಸಂದೇಶ ಕಳುಹಿಸಬೇಕು. ಈ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸ್ಪರ್ಧಿಸಿದ್ದೇನೆ, ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ಜೆಡಿಎಸ್ ನವರದ್ದು ಮತ್ತೆ ಕುಟುಂಬ ರಾಜಕಾರಣ ಎಂದು ಕಾಂಗ್ರೆಸ್ ನಾಯಕರು ಅದರಲ್ಲೂ ಸಿದ್ದರಾಮಯ್ಯನವರು ಟೀಕಿಸುತ್ತಿದ್ದಾರೆ, ಈ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ, ಕನಕಪುರ ಇತ್ಯಾದಿ ಕಡೆಗಳಲ್ಲಿ ನೋಡಿಕೊಂಡು ಬಂದರೆ ಗೊತ್ತಾಗುತ್ತದೆ, ಎಲ್ಲೆಲ್ಲಿ ಎಷ್ಟು ಮಂದಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು, ಅಣ್ಣ-ತಮ್ಮ, ಅಪ್ಪ-ಮಗ ರಾಜಕೀಯ ಮಾಡುತ್ತಿದ್ದಾರೆ, ಮೊದಲು ಅವರದ್ದು ನೋಡಿಕೊಳ್ಳಲಿ, ಆಮೇಲೆ ನಮ್ಮನ್ನು ಟೀಕೆ ಮಾಡಲಿ ಎಂದು ತಿರುಗೇಟು ನೀಡಿದರು.