ಕರ್ನಾಟಕ ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ಗೆ ಬಿಜೆಪಿಗಿಂತ ಶೇ.5.9 ರಷ್ಟು ಹೆಚ್ಚು ಮತ!

ರಾಜ್ಯ ವಿಧಾನಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಸಮಬಲ ಪಡೆದಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ವಿಧಾನಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಸಮಬಲ ಪಡೆದಿವೆ.

ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ, ಆದರೆ ಮತ ಹಂಚಿಕೆಯ ವಿಷಯಕ್ಕೆ ಬಂದಾಗ ಅಚ್ಚರಿ ವಿಷಯ ಬೆಳಕಿಗೆ ಬಂದಿದೆ,  ಸ್ಪರ್ಧಿಸಿದ್ದ ಆರು ಸ್ಥಾನಗಳಲ್ಲಿ 2 ರಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್ ಶೆ.43. 17 ರಷ್ಟು ಮತ ಪಡೆದಿದೆ.

ಒಟ್ಟು ಚಲಾವಣೆಯಾದ 98,774 ಮತಗಳಲ್ಲಿ (ಶೇ 99.7 ರಷ್ಟು ಮತದಾನವಾಗಿದೆ), ಕಾಂಗ್ರೆಸ್ 44,225 ಮತಗಳನ್ನು ಗಳಿಸಿತು,   ಶೇಕಡಾ  44.7 ರಷ್ಚು ಮತಗಳ ಹಂಚಿಕೆಯಾಗಿದೆ. ಬಿಜೆಪಿಯ 38,394 ಮತಗಳು, ಅಂದರೆ ಸುಮಾರು 38.8 ರಷ್ಟು ಮತ ಪಡೆದಿದೆ.

ಸ್ಥಳೀಯ ಸಂಸ್ಥೆಗಳ ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಮತದಾರರ ಮನವೊಲಿಸುವ ಮೂಲಕ ಕಾಂಗ್ರೆಸ್ 5.9 ರಷ್ಟು ಹೆಚ್ಚು ಮತಗಳನ್ನು ಗಳಿಸಿದೆ. ಎರಡೂ ಪಕ್ಷಗಳು ಸ್ಪರ್ಧಿಸಿದ್ದ 20 ಸ್ಥಾನಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ  ಸರಾಸರಿ 2,212 ಮತಗಳು ಮತ್ತು  ಬಿಜೆಪಿಗೆ 1,919 ಮತಗಳು ದೊರೆತಿವೆ.

ಹಲವು ಸ್ಥಾನಗಳನ್ನು ಕಾಂಗ್ರೆಸ್ ಭಾರೀ ಅಂತರದಿಂದ ಗೆದ್ದುಕೊಂಡಿದೆ. ಬೆಳಗಾವಿ, ಹುಬ್ಬಳ್ಳಿ ಮತ್ತು ವಿಜಯಪುರದಲ್ಲಿ ಪಕ್ಷದ ಅಭ್ಯರ್ಥಿಗಳಾದ ಚನ್ನರಾಜ್ ಹಟ್ಟಿಹೊಳಿ (3,718 ಮತ) ಸಲೀಂ ಅಹ್ಮದ್ (3,334) ಮತ್ತು ಸುನೀಲಗೌಡ ಪಾಟೀಲ್ (3,245) ಅವರು ನಿರಾಯಾಸವಾಗಿ ಗೆಲುವು ಸಾಧಿಸಿದ್ದಾರೆ. ತುಮಕೂರಿನಲ್ಲಿ ಪಕ್ಷದ ಅಭ್ಯರ್ಥಿ 1,085 ಮತಗಳಿಂದ ಜಯಗಳಿಸಿದರೆ, ಉಭಯ ಸದಸ್ಯ ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ  946 ಮತಗಳ ಅಂತರದಲ್ಲಿ ಗೆಲುವು  ಸಾಧಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ ಚಿಕ್ಕಮಗಳೂರು ಸೇರಿದಂತೆ ಬಿಜೆಪಿ ಗೆದ್ದಿರುವ ಕೆಲವು ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಕಡಿಮೆಯಾಗಿದೆ. ದಕ್ಷಿಣ ಕನ್ನಡ-ಉಡುಪಿ ದ್ವಿಸದಸ್ಯ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (3,672) ಬಿಜೆಪಿಗೆ ಅತಿ ಹೆಚ್ಚು ಮತಗಳು ಚಲಾವಣೆಯಾಗಿವೆ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಕಳಪೆ ಪ್ರದರ್ಶನ ನೀಡಿರುವುದು ಬಿಜೆಪಿಯ ಮತ ಹಂಚಿಕೆ ಮೇಲೆ ಪರಿಣಾಮ ಬೀರಿದೆ. ಬಿಜೆಪಿ ಅಭ್ಯರ್ಥಿ ಬೂಕನಕೆರೆ ಮಂಜು 50 ಮತ ಪಡೆದಿದ್ದರೇ ಹಾಸನದಲ್ಲಿ ಎಚ್ಎಂ ವಿಶ್ವನಾಥ್ 421 ಮತಗಳನ್ನು ಪಡೆದಿದ್ದಾರೆ.

ನಾವು ಉತ್ತಮ ಅಂತರದಿಂದ ಗೆದ್ದು ಹಲವು ಸ್ಥಾನಗಳಲ್ಲಿ ಕಡಿಮೆ ಅಂತರದಲ್ಲಿ ಸೋತಿರುವುದರಿಂದ ನಮ್ಮ ಮತಗಳ ಪ್ರಮಾಣ ಬಿಜೆಪಿಗಿಂತ ಹೆಚ್ಚಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಹೇಳಿದ್ದಾರೆ. ಆದರೆ ಕೆಪಿಸಿಸಿ ಮಾಧ್ಯಮ ವಿಭಾಗವು ತನ್ನದೇ ಲೆಕ್ಕಾಚಾರದ ಆಧಾರದ ಮೇಲೆ ಪಕ್ಷವು ಶೇಕಡಾ 48 ರಷ್ಟು ಮತಗಳನ್ನು ಗಳಿಸಿದ್ದು ಬಿಜೆಪಿ ಶೇಕಡಾ 41 ರಷ್ಟು ಮತಗಳನ್ನು ಪಡೆದಿದೆ ಎಂದು ತಿಳಿಸಿದೆ.

ಸ್ಪರ್ಧಿಸಿದ ಆರು ಸ್ಥಾನಗಳಲ್ಲಿ ಜೆಡಿಎಸ್ ಶೇ. 43.17  ಮತಗಳನ್ನು ಗಳಿಸಿದೆ, ಅಂದರೆ ಈ ಸ್ಥಾನಗಳಲ್ಲಿ ಬಿಜೆಪಿಗೆ ಪರ್ಯಾಯವಾಗಿದೆ.ಬೆಳಗಾವಿ ಉಭಯ ಸದಸ್ಯ ಸ್ಥಾನದಿಂದ 2,552 ಮತಗಳಿಂದ ಗೆದ್ದಿದ್ದ ಲಖನ್ ಜಾರಕಿಹೊಳಿ ಮತ್ತು ಧಾರವಾಡದಲ್ಲಿ ಮಲ್ಲಿಕಾರ್ಜುನ ಹಾವೇರಿ (1,217 ಮತ) ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಪಕ್ಷೇತರರು ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com