ಕೇಳಿದ ಪ್ರಶ್ನೆಗೆ ಸಂಬಂಧವಿಲ್ಲದ ಉತ್ತರ: ಚರ್ಚೆಗೆ ಅವಕಾಶವಿಲ್ಲವೆಂದಾದರೇ ಅಧಿವೇಶನಕ್ಕೇಕೆ ಬರಬೇಕು? ಕೃಷ್ಣ ಭೈರೇಗೌಡ

ಬೆಳಗಾವಿ ಅಧಿವೇಶನದಲ್ಲಿ ಖಜಾನೆ ಪೀಠ ಅಪೂರ್ಣ ಮತ್ತು ಬೇಜವಾಬ್ದಾರಿ ಉತ್ತರ ನೀಡುತ್ತಿದೆ ಎಂದು ಕಾಂಗ್ರೆಸ್ ಶಾಸಕರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ

ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಖಜಾನೆ ಪೀಠ ಅಪೂರ್ಣ ಮತ್ತು ಬೇಜವಾಬ್ದಾರಿ ಉತ್ತರ ನೀಡುತ್ತಿದೆ ಎಂದು ಕಾಂಗ್ರೆಸ್ ಶಾಸಕರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ನಾವು ಸಮಸ್ಯೆಗಳಿರುವ ವಿಷಯವನ್ನು ಪ್ರಸ್ತಾಪಿಸಲು ಬಯಸಿದರೇ ಅವರು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ಕಿಡಿ ಕಾರಿದರು.

ಎಸ್‌ಸಿ/ಎಸ್‌ಟಿ ಐದು ಅಭಿವೃದ್ಧಿ  ನಿಗಮಗಳಿಗೆ ಹಂಚಿಕೆ ಬಗ್ಗೆಕೇಳಿದ ಗಂಭೀರ ಪ್ರಶ್ನೆಗಳಿಗೆ ದೊರೆತ ಉತ್ತರ ನೀರಸವಾಗಿದೆ, ಚರ್ಚೆಯ್ನು ತಪ್ಪಿಸಲು ಸರ್ಕಾರ ಸ್ಪಷ್ಟವಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬೈರೇಗೌಡ ಅವರಿಗೆ ಮಾತನಾಡಲು ಅವಕಾಶ ನೀಡದೆ ಸದನವನ್ನು ಮುಂದೂಡಿದರು.

ಐದು ಎಸ್‌ಸಿ/ಎಸ್‌ಟಿ ನಿಗಮಗಳಿಗೆ 2017-18ರಲ್ಲಿ 1,383 ಕೋಟಿ ರೂ., 2018-19ರಲ್ಲಿ 1,286 ಕೋಟಿ ರೂ. ಮತ್ತು 2020-2021ರಲ್ಲಿ ಕೇವಲ 281 ಕೋಟಿ ರೂ.ಗಳಷ್ಟಿದ್ದ ಹಂಚಿಕೆ ಮಾಡಲಾಗಿದೆ. 1,000 ಕೋಟಿ ರೂ.ಗಿಂತ ಹೆಚ್ಚ ಹಣ ಕಡಿಮೆ ಮಾಡಲಾಗಿದೆ.  ಈ ಸಂಬಂಧ ಸದನದಲ್ಲಿ ಚರ್ಚೆಯಾಗಬೇಕಾಗಿತ್ತು, ಆದರೆ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ ಎಂದು ಕೃಷ್ಣ ಭೈರೇಗೌಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ನಾವು ಕೇಳಿದ ಪ್ರಶ್ನೆಗಳಿಗೆ ಸಂಬಂಧವಿಲ್ಲದ ಉತ್ತರಗಳನ್ನು ನೀಡುತ್ತಾರೆ. ಅಕಾಲಿಕ ಮಳೆಯಿಂದ ಅಪಾರ ನಷ್ಟಕ್ಕೀಡಾದ ರೈತರಿಗೆ ಆಸರೆ ನೀಡದೆ, ಹಲವು ಮನೆಗಳನ್ನು ಕಳೆದುಕೊಂಡರೂ ಪರಿಹಾರ ನೀಡಲಿಲ್ಲ, ನಿರುದ್ಯೋಗ ಪ್ರಮಾಣ ಹೆಚ್ಚಿದೆ, ಅಭಿವೃದ್ಧಿ ಕಾಣುತ್ತಿಲ್ಲ. ಈ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಕೆಲವು ಮಸೂದೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆಸಿ ಮಾಧುಸ್ವಾಮಿ. ಅವರು ಯಾವ ರೀತಿಯ ಉತ್ತರಗಳನ್ನು ಬಯಸುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದರು.

ಕೃಷ್ಣ ಭೈರೇಗೌಡ ಅವರ ಪ್ರಶ್ನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ, ಮುಂದಿನ ದಿನಗಳಲ್ಲಿ ಈ ಹಣವನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com