ಕರ್ನಾಟಕಕ್ಕೆ ಗುಜರಾತ್ ಮಾದರಿ ಸಂಪುಟ ಪುನರ್ ರಚನೆ ಅಗತ್ಯವಿದೆ: ಎಂ.ಪಿ. ರೇಣುಕಾಚಾರ್ಯ
ಕಳೆದ ಮೂರು ಅವಧಿಗೆ ಸಚಿವರಾಗಿದ್ದವರು ತಾವಾಗಿಯೇ ಪದವಿಯಿಂದ ಕೆಳಕ್ಕಿಳಿದು ಪಕ್ಷದ ಬಲವರ್ಧನೆಯ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
Published: 30th December 2021 09:59 AM | Last Updated: 30th December 2021 01:04 PM | A+A A-

ಬುಧವಾರ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ.ಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ
ಬೆಂಗಳೂರು: ಎರಡು ಮೂರು ಬಾರಿ ಗೆದ್ದಿರುವ ಶಾಸಕರು ಬಿಜೆಪಿ ಅಧಿಕಾರಾವಧಿಯುದ್ದಕ್ಕೂ ಮಂತ್ರಿ ಸ್ಥಾನದ ಆಕಾಂಕ್ಷೆಯನ್ನು ಹೊತ್ತುಕೊಂಡಿರುತ್ತಾರೆ ಎಂದು ಹೇಳಿರುದ ಸಿ.ಎಂ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ರಾಜ್ಯದಲ್ಲಿ ಗುಜರಾತ್ ಮಾದರಿಯ ಸಂಪುಟ ಪುನರ್ ರಚನೆಯ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟ ಅಭಿವೃದ್ಧಿ: ಸಿಎಂ ಬೊಮ್ಮಾಯಿ
ಕಳೆದ ಮೂರು ಅವಧಿಗೆ ಸಚಿವರಾಗಿದ್ದವರು ತಾವಾಗಿಯೇ ಪದವಿಯಿಂದ ಕೆಳಕ್ಕಿಳಿದು ಪಕ್ಷದ ಬಲವರ್ಧನೆಯ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಆ ಮೂಲಕ ಇತರ ಆಕಾಂಕ್ಷಿಗಳಿಗೆ ಅವಕಾಶವಾಗುತ್ತದೆ ಎಂದು ಖುದ್ದು ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ರೇಣುಕಾಚಾರ್ಯ ಹೇಳಿದ್ದಾರೆ.
ಇದನ್ನೂ ಓದಿ: ಎರಡು ದಿನ ಡಿಸಿ, ಸಿಇಒಗಳ ಜೊತೆ ಸಿಎಂ ಸಭೆ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಯತ್ನ