ಗ್ರಾಮ ಪಂಚಾಯಿತಿ ಮಟ್ಟದ ರಾಜಕೀಯಕ್ಕೂ ತಲುಪಿದ ದೇವರ ಮೇಲೆ ಪ್ರಮಾಣ, ರೆಸಾರ್ಟ್ ರಾಜಕೀಯ, ಫ್ಯಾಮಿಲಿ ಟ್ರಿಪ್!

ರೆಸಾರ್ಟ್ ರಾಜಕಾರಣಕ್ಕೆ ಕರ್ನಾಟಕ ಪ್ರಸಿದ್ದಿ. ಕೇವಲ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್‌ ಸದಸ್ಯರುಗಳಿಗೆ ಮಾತ್ರ ಸೀಮಿತವಾಗಿದ್ದ ರೇಸಾರ್ಟ್‌ ರಾಜಕಾರಣ ಈಗ ಗ್ರಾಮ ಪಂಚಾಯಿತಿ ಸದಸ್ಯರ ಮಟ್ಟಕ್ಕೂ ಬಂದು ನಿಂತಿದೆ.

Published: 12th February 2021 10:49 AM  |   Last Updated: 12th February 2021 12:38 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: ರೆಸಾರ್ಟ್ ರಾಜಕಾರಣಕ್ಕೆ ಕರ್ನಾಟಕ ಪ್ರಸಿದ್ದಿ. ಕೇವಲ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್‌ ಸದಸ್ಯರುಗಳಿಗೆ ಮಾತ್ರ ಸೀಮಿತವಾಗಿದ್ದ ರೇಸಾರ್ಟ್‌ ರಾಜಕಾರಣ ಈಗ ಗ್ರಾಮ ಪಂಚಾಯಿತಿ ಸದಸ್ಯರ ಮಟ್ಟಕ್ಕೂ ಬಂದು ನಿಂತಿದೆ.

ಬೇರೆ ರಾಜ್ಯಗಳ ಶಾಸಕರನ್ನು ಕರೆ ತಂದು ಕರ್ನಾಟಕದ  ರೆಸಾರ್ಟ್ ಗಳಲ್ಲಿ ಕೂರಿಸಿ  ಹಲವು ಪ್ರಮುಖ ಪಕ್ಷಗಳು ರಾಜಕೀಯ ಮಾಡುತ್ತಿದ್ದವು, ಆದರೆ ಬದಲಾದ ಪರಿಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಸದಸ್ಯರ ಕುಟುಂಬಸ್ಥರನ್ನು ಪುಣ್ಯ ಕ್ಷೇತ್ರಗಳಿಗೆ , ದೇವಾಲಯಗಳಿಗೆ ಅಥವಾ ಪ್ರವಾಸಿ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ. 

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರದ ಕಾರಣ ಆಕಾಂಕ್ಷಿಗಳು ಈ ರೀತಿಯ ಟ್ರಿಕ್ಸ್ ಮಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ  ಪಕ್ಷದ ನಾಯಕರು  ಜಿಪಿಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಕಾಂಕ್ಷಿಗಳಲ್ಲಿ ಶೇ. 80 ರಷ್ಟು ಆಕಾಂಕ್ಷಿಗಳಿದ್ದಾರೆ,  ಚುನಾಯಿತ ಪಂಚಾಯತ್ ಸದಸ್ಯರೊಂದಿಗೆ ವಿವಿಧ ಸ್ಥಳಗಳಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. 

ಚಿಂಚೋಳಿ ತಾಲೂಕಿನ ಹಸರಗುಂಡಗಿ  ಗ್ರಾಮ ಪಂಚಾಯತ್ ನ 10 ಸದಸ್ಯರನ್ನು ಪಂಚಾಯತಿ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕರೆದೊಯ್ಯಲಾಗಿತ್ತು, ಫೆಬ್ರವರಿ 5 ರಂದು ಅಧ್ಯಕ್ಷ ಸ್ಥಾನದು ಚುನಾವಣೆ ದಿನ ವಾಪಸ್ ಕರೆದುಕೊಂಡು ಬರಲಾಗಿತ್ತು..

ಬಿಜೆಪಿಯಿಂದ ತಮ್ಮ ಸದಸ್ಯರನ್ನು ರಕ್ಷಿಸಿಕೊಳ್ಳಲು ಚಿತ್ತಾಪುರ ತಾಲೂಕಿನ ಕಾಂಗ್ರೆಸ್ ಸದಸ್ಯರು ಪ್ರವಾಸಕ್ಕೆ ತೆರಳಿದ್ದರು ಎಂದು ಚಿತ್ತಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹಬೂಬ್ ಸಾಬ್ ಹೇಳಿದ್ದಾರೆ.

ಗದಗ ಮತ್ತು ಧಾರವಾಡದ ಅನೇಕ ಗ್ರಾಮ ಪಂಚಾಯಿತಿ ಸದಸ್ಯರು ಗೋವಾ ಮತ್ತು ಮಹಾರಾಷ್ಟ್ರದಂತಹ ರಾಜ್ಯದ ಹೊರಗಿನ ರೆಸಾರ್ಟ್‌ಗಳಲ್ಲಿ ಬೀಡು ಬಿಟ್ಟಿದ್ದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಮೊದಲ ನಡೆಯಬೇಕಿತ್ತು, ಆದರೆ ಮೀಸಲಾತಿ ಪಟ್ಟಿಯಲ್ಲಿನ ವಿಳಂಬವು ಅವರ ಯೋಜನೆಗಳನ್ನು ಸ್ವಲ್ಪ ದೂರವಿಟ್ಟಿತು. 

ನನ್ನ ಗೆಲುವಿನ  ಆನಂದಿಸಲು ಅನುಭವಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಈಗ ಮೀಸಲಾತಿ ಪಟ್ಟಿ ನನ್ನ ಪರವಾಗಿದೆ ಮತ್ತು ನಾನು ಅಧ್ಯಕ್ಷನಾಗಲು ಬಯಸುತ್ತೇನೆ, ಆದರೆ ಕೆಲವರು ನನ್ನ ತಂಡವನ್ನು ಅಪಹರಿಸುವ ಸಾಧ್ಯತೆಯಿರುವುದರಿಂದ ನಾವು ಇಲ್ಲಿಗೆ ಬಂದಿದ್ದೇವೆ, ನಾವು ಗೋವಾದ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೇವೆ ”ಎಂದು ಗದಗದ ಚಬ್ಬಿ ಗ್ರಾಮದ ಜಿಪಿ ಸದಸ್ಯರೊಬ್ಬರು ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಪ್ರತಿ ಮತವೂ ನಿರ್ಣಾಯಕವಾಗಿದ್ದು, ಬಿಜೆಪಿ ಎಂಇಎಸ್ ಜೊತೆ ಕೈಜೋಡಿಸಿತ್ತು ಮತ್ತು ಈಗಾಗಲೇ ಅವರ ಬೆಂಬಲಿಗರನ್ನು ಹಿಮ್ಮೆಟ್ಟಿಸಿತ್ತು ಮತ್ತು ನನ್ನ ಕೆಲವು ಬೆಂಬಲಿಗರನ್ನು ಬೇಟೆಯಾಡಿದ್ದರಿಂದ ನನ್ನನ್ನು ಬೆಂಬಲಿಸುವ ಸದಸ್ಯರನ್ನು ಕರೆದುಕೊಂಡು ಹೋಗಬೇಕಾಯಿತು. ಎದುರಾಳಿ ಕ್ರಿಕೆಟ್ ಆಡುತ್ತಿರುವಾಗ ನಾನು ಫುಟ್ ಬಾಲ್ ಆಡಲು ಸಾಧ್ಯವಿಲ್ಲ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ತಿಳಿಸಿದ್ದಾರೆ.

ಇನ್ನೂ ದೇವಾಲಯಕ್ಕೆ ಸದಸ್ಯರನ್ನು ಕರೆದುಕೊಂಡು ಹೋಗಿ ಅಲ್ಲಿ ಅಂದರೆ ದೇವರ ಬಳಿ ಆಣೆ ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆ, ಅಭ್ಯರ್ಥಿಗೆ ಸಾಕ್ಷಿ ನಿಷ್ಠೆಯಾಗಿ ಪ್ರತಿಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಅರಸಿಕೆರೆ ಜೆಡಿಎಸ್ ಶಾಸಕ ಕೆಎಲ್ ಶಿವಲಿಂಗೇಗೌಡ ತಮ್ಮ ಕ್ಷೇತ್ರದಿಂದ ಹೊಸದಾಗಿ ಚುನಾಯಿತರಾದ  ಗ್ರಾಮ ಪಂಚಾಯತಿ ಸದಸ್ಯರನ್ನು ಗುರು ಜೇನಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟದ ದೇವಸ್ಥಾನದಲ್ಲಿ ಪ್ರತಿಕ್ಷೆ ಮಾಡಿಸಿದ್ದ ವಿಡಿಯೋ ಜನವರಿಯಲ್ಲಿ ವೈರಲ್ ಆಗಿತ್ತು.

ಚುನಾಯಿತ ಪ್ರತಿನಿಧಿಗಳನ್ನು ಈ ರೀತಿ ಕರೆದೊಯ್ಯುವುದು ಸರಿಯಲ್ಲ, ಇದನ್ನು ಇಲ್ಲಿಗೆ ನಿನಲ್ಲಿಸಬೇಕು, ಪ್ರತಿನಿದಿಗಳನ್ನು ಕಮ್ಮ ಕ್ಷೇತ್ರದಿಂದ ದೂರವಿಡಬಾರದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್ ತಿಳಿಸಿದ್ದಾರೆ.

Stay up to date on all the latest ರಾಜಕೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp