ಧರ್ಮೇಗೌಡ ಸಾವಿನಿಂದ ತೆರವಾಗಿರುವ ಪರಿಷತ್ ಸ್ಥಾನಕ್ಕೆ ಮಾರ್ಚ್ 15 ರಂದು ಚುನಾವಣೆ

ರಾಜ್ಯದ ವಿಧಾನ ಪರಿಷತ್ ಸದಸ್ಯರಾಗಿದ್ದಂತ ಧರ್ಮೇಗೌಡ ನಿಧನದಿಂದ ತೆರವಾಗಿದ್ದಂತ  ಪರಿಷತ್ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಮಾರ್ಚ್ 15ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶವನ್ನು ಘೋಷಣೆ ಮಾಡುವುದಾಗಿ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿದೆ.

Published: 18th February 2021 02:09 PM  |   Last Updated: 18th February 2021 06:33 PM   |  A+A-


File image

ಸಂಗ್ರಹ ಚಿತ್ರ

Posted By : Shilpa D
Source : Online Desk

ನವದೆಹಲಿ: ರಾಜ್ಯದ ವಿಧಾನ ಪರಿಷತ್ ಸದಸ್ಯರಾಗಿದ್ದಂತ ಧರ್ಮೇಗೌಡ ನಿಧನದಿಂದ ತೆರವಾಗಿದ್ದಂತ  ಪರಿಷತ್ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಮಾರ್ಚ್ 15ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶವನ್ನು ಘೋಷಣೆ ಮಾಡುವುದಾಗಿ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿದೆ.

ವಿಧಾನಸಭೆ ಸದಸ್ಯರಿಂದ ಈ ಸ್ಥಾನದ ಆಯ್ಕೆ ನಡೆಯಲಿದ್ದು, ಮಾರ್ಚ್‌ 15ರಂದು ಮತದಾನ ನಿಗದಿಪಡಿಸಲಾಗಿದೆ. ಫೆಬ್ರವರಿ 25ರಂದು ಈ ಸಂಬಂಧ ಅಧಿಸೂಚನೆ ಹೊರಬೀಳಲಿದೆ. 

ನಾಮಪತ್ರ ಸಲ್ಲಿಕೆಗೆ ಮಾರ್ಚ್‌ 4 ಕೊನೆಯ ದಿನವಾಗಿದ್ದು, 5ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.  ನಾಮಪತ್ರ ಹಿಂದಕ್ಕೆ ಪಡೆಯಲು ಮಾರ್ಚ್‌ 8 ಕೊನೆಯ ದಿನವಾಗಿದೆ. ಮತದಾನವು 15ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 4ರವರೆಗೆ ನಡೆಯಲಿದ್ದು, ಸಂಜೆ 5ಕ್ಕೆ ಮತ ಎಣಿಕೆ ಕಾರ್ಯ ನಿಗದಿ ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.


Stay up to date on all the latest ರಾಜಕೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp