ಮಂದಿರ ನಿರ್ಮಾಣದ ಲೆಕ್ಕ ಕೇಳಲು ಸಿದ್ದರಾಮಯ್ಯ ಯಾರು? ಎಂದ ಬಿಜೆಪಿ; ಈಶ್ವರಪ್ಪ ಹಾರಾಟ ಭಾಷಣಕ್ಕೆ ಸೀಮಿತ ಎಂದ ಕಾಂಗ್ರೆಸ್!

ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಹಣ ನೀಡುವುದಿಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂಕೋರ್ಟ್ ತೀರ್ಪಿಗೆ ಗೌರವವಿಲ್ಲದೆ ಮಾತನಾಡಿದ್ದಾರೆ.

Published: 19th February 2021 02:09 PM  |   Last Updated: 19th February 2021 04:02 PM   |  A+A-


Eshwarappa

ಈಶ್ವರಪ್ಪ

Posted By : Shilpa D
Source : UNI

ರಾಯಚೂರು: ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಹಣ ನೀಡುವುದಿಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವವಿಲ್ಲದೆ ಮಾತನಾಡಿದ್ದಾರೆ ಜೊತೆಗೆ ಮಂದಿರ ನಿರ್ಮಾಣದ ಲೆಕ್ಕ ಕೇಳಲು ಸಿದ್ದರಾಮಯ್ಯ ಯಾರು ಎಂದು  ಸಚಿವ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಮಂತ್ರಾಲಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೂಲಿ ಮಾಡುವ ಜನ 10 ರೂಪಾಯಿ ನೀಡಿದ್ದಾರೆ ಅವರು ಲೆಕ್ಕ ಕೇಳಬಹುದು ಹಣ ಕೊಡದಿರುವ ಸಿದ್ದರಾಮಯ್ಯ ಅವರಿಗೆ ಲೆಕ್ಕೆ ಕೇಳುವ ನೈತಿಕ ಹಕ್ಕು ಇಲ್ಲ ಎಂದು ಸಚಿವರು ಲೇವಡಿ ಮಾಡಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಸೋಲಿಸಲು ವಿಜಯೇಂದ್ರ ಹಣ ನೀಡಿದ್ದಾರೆ ಎಂಬ ಬಸನಗೌಡ ಯತ್ನಾಳರ ಆರೋಪದ ಬಗ್ಗೆ ನಾನು ಹೇಗೆ ಉತ್ತರಿಸಲಿ. ಇಲ್ಲಿ ಯತ್ನಾಳರೂ ಇಲ್ಲ, ಹಣ ಕೊಟ್ಟಿರುವ ಆರೋಪ ಹೊತ್ತಿರುವ ವಿಜಯೇಂದ್ರ ಅವರು ಇಲ್ಲ ಈ ಸಂದರ್ಭದಲ್ಲಿ ನಾನೇನು ಹೇಳಲಾರೆ ಆದರೆ, ಯತ್ನಾಳ್ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ, ಮತ್ತು ಕೇಂದ್ರದ ನಾಯಕರು ಇದರ ಬಗ್ಗೆ ತೀರ್ಮಾನಗೊಳ್ಳುತ್ತಾರೆ ಅಂತ ಹೇಳಿದರು. 

ಪಿ ಎಂಜಿಎಸ್ವೈ ಯೋಜನೆಯಲ್ಲಿ ಕೇಂದ್ರ 5600 ಕಿಮೀ ರಸ್ತೆ ಕಾಮಗಾರಿಗೆ ಅನುಮೋದನೆ ನೀಡಿದ್ದು ಮೂರು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಮನೆಗೆ ಗಂಗೆ ಯೋಜನೆಯು ರಾಜ್ಯ ಸರ್ಕಾರದಿಂದ 4000 ಮತ್ತು ಕೇಂದ್ರದ 4000 ಕೋಟಿ ರೂ. ಅನುದಾನದಲ್ಲಿ ಆರಂಭಿಸಲಾಗಿದೆ ಜಲಧಾರೆ ಯೋಜನೆಯು ಮುಂದುವರಿದಿದೆ ಎಂದು ಹೇಳಿದರು. 

ಇನ್ನೂ ಪಂಚಮಸಾಲಿಗೆ ಮೀಸಲಾತಿ ನೀಡಲು ಕುರಿತು ಸಂಪುಟದಲ್ಲಿ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಈ ಕುರಿತು ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ವರದಿ ಪಡೆದ ನಂತರ ಮುಂದಿನ ತೀರ್ಮಾನ ಮಾಡಲಾಗುವುದು ಎಂದರು. 

ಕುರುಬ ಸಮುದಾಯವನ್ನು ಎಸ್ಟಿ ಗೆ ಸೇರಿಸುವ ಸಚಿವ ಈಶ್ವರಪ್ಪ ಅವರ ಮಾತು ಬರೀ ಭಾಷಣಕ್ಕೆ ಮಾತ್ರ ಸೀಮಿತ ಎಂದು ಮಾಜಿ ಮೇಯರ್ ಹುಚ್ಚಪ್ಪ ಗುಡುಗಿದ್ದಾರೆ. 

ಹಿಂದೆ ಕುರುಬ ಸಮಾವೇಶ ಮಾಡಿದ್ದು ಬಿಟ್ಟರೆ ಅದರ ಬಳಿಕ ಈಶ್ವರಪ್ಪ ಸಮುದಾಯದ ಮೀಸಲಾತಿ ಬಗ್ಗೆ ಏಕೆ ಸ್ಪಷ್ಟವಾಗಿ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಕುರುಬ ಸಮುದಾಯದ ಪರ ಯಾವಾಗಲೂ ಬೆನ್ನಿಗೆ ನಿಂತಿರುವುದು ಸಿದ್ದರಾಮಯ್ಯರೇ ಹೊರತು ಈಶ್ವರಪ್ಪ ಅಲ್ಲ, ಸಿದ್ದರಾಮಯ್ಯನವರಿಗಿರುವ ಜ್ಞಾನಕ್ಕೆ ಇತರೆ ಸಮುದಾಯದವರೇ ಹಾಡಿ ಹೊಗಳುತ್ತಾರೆ.ಸಿದ್ದರಾಮಯ್ಯ ಅವರನ್ನು ನಾಯಕ ಎಂದು ಎಲ್ಲಾ ಸಮುದಾಯವೇ ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ.

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp