ಪಂಚಮಸಾಲಿ ಮೀಸಲಾತಿ: ಕಾಶಪ್ಪನವರ್, ಯತ್ನಾಳ್ ರಿಂದ ದಿಕ್ಕುತಪ್ಪಿಸುವ ಕೆಲಸ- ಸಚಿವರ ವಾಗ್ದಾಳಿ
ಪಂಚಮಸಾಲಿ ಮೀಸಲಾತಿ ವಿಚಾರವನ್ನು ಕೆಲವರು ವೈಯಕ್ತಿಕವಾಗಿ, ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡು ಸಮಾಜ ಧಿಕ್ಕು ತಪ್ಪಿಸಿರುವುದು ಬಹಳ ದುರದೃಷ್ಟಕರ ಎಂದು ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಸಮಾಜದ....
Published: 22nd February 2021 02:53 PM | Last Updated: 22nd February 2021 02:53 PM | A+A A-

ಪಂಚಮಸಾಲಿ ಮೀಸಲಾತಿ ಹೋರಾಟ
ಬೆಂಗಳೂರು: ಪಂಚಮಸಾಲಿ ಮೀಸಲಾತಿ ವಿಚಾರವನ್ನು ಕೆಲವರು ವೈಯಕ್ತಿಕವಾಗಿ, ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡು ಸಮಾಜ ಧಿಕ್ಕು ತಪ್ಪಿಸಿರುವುದು ಬಹಳ ದುರದೃಷ್ಟಕರ ಎಂದು ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಸಮಾಜದ ಮುಖಂಡರಾದ ಸಂಗಣ್ಣ ಕರಡಿ, ಕಳಕಪ್ಪ ಬಂಡಿ. ವಿರೂಪಾಕ್ಷಪ್ಪ ಬಳ್ಳಾರಿ,ಮೋಹನ್ ಲಿಂಬಿಕಾಯಿ ದೂರಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು ಜಯಮೃತ್ಯುಂಜಯ ಸ್ವಾಮಿಗಳು ಕಳೆದ ಜನವರಿ 14 ರಿಂದ ಪಂಚಮಸಾಲಿ ಸಮಾಜವನ್ನು 2 ಎಗೆ ಸೇರಿಸಲು ಒತ್ತಾಯಿಸಿ ಪಾದಯಾತ್ರೆ ನಡೆಸಿದ್ದರು. ಪಾದಯಾತ್ರೆ ಗೆ ಅಭೂತಪೂರ್ವ ಸಮಾವೇಶ ನಡೆಸಿದ್ದಾರೆ.ಪಂಚಮಸಾಲಿ ಸಮಾಜದ ಯುವಕರು,ಹಿರಿಯರು,ಮಹಿಳೆಯರು ಭಾಗವಹಿಸಿದ್ದರು..
ಆದರೆ ಕೆಲವರು ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಂಡು ಧಿಕ್ಕು ತಪ್ಪಿಸುವ ಕೆಲಸ ಮಾಡಿರುವುದು ದುರದೃಷ್ಟಕರ. ಹಕ್ಕೋತ್ತಾಯ 2ಎ ಗೆ ಸೇರ್ಪಡೆ ಮಾಡುವುದು ಮುಖ್ಯ ಉದ್ದೇಶ. ಸಂವಿಧಾನದ ನಿಯಮಗಳಡಿ ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು.
ಪಂಚಮಸಾಲಿ ಸಮಾಜದ ಮನವಿಯಂತೆ ಆಯೋಗಕ್ಕೆ ಸರ್ಕಾರ ಶಿಫಾರಸ್ಸು ಮಾಡಿದೆ. ಜನರನ್ನು ದಾರಿ ತಪ್ಪಿಸಿದ್ದು, ವಿಜಯಾನಂದ ಕಾಶಪ್ಪನವರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಪ್ರಚೋದನಕಾರಿ ಭಾಷಣ ಮಾಡಿರುವುದು ಸಹ ಸಮುದಾಯಕ್ಕೆ ಕಳಂಕ ತಂದಿದೆ. ಸಮಾಜದ ಮುಂದೆ ಯಾರೂ ದೊಡ್ಡವರಲ್ಲ. ಸಮಾಜಕ್ಕಿಂತ ಮೇಲೆ ಯಾರೂ ಇಲ್ಲ. ಕಾಶಪ್ಪನವರ್ ಈ ಸಮುದಾಯಕ್ಕೆ ನೀಡಿದ ಕೊಡುಗೆ ಏನು? ಯಡಿಯೂರಪ್ಪ ಹಿಂದೆ 2ಬಿ ಸೇರಿಸಿ ಸಮಾಜದ ಬದ್ದತೆ ಪ್ರದರ್ಶಿಸಿದ್ದಾರೆ.
2016ರಲ್ಲಿ ಪಂಚಮಸಾಲಿ 2ಎ ವರ್ಗಕ್ಕೆ ಸೇರಿಸುವ ಅರ್ಜಿ ರದ್ದಾಗಿದೆ. ಆದರೆ ಜಯ ಮೃತ್ಯುಂಜಯ ಸ್ವಾಮಿಗಳನ್ನು ಹಿಡಿತದಲ್ಲಿಟ್ಟುಕೊಂಡು, ಎತ್ತಿಕಟ್ಟಿ, ದಾರಿ ತಪ್ಪಿಸಿದ್ದಾರೆ. ಬಸವ ಕಲ್ಯಾಣ ಟ್ರಸ್ಟ್ ಸಭೆ ಕರೆದಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಕೆಲ ನಾಯಕರ ವರ್ತನೆಗೆ ಸಚಿವರು ಚಾಟಿ ಬೀಸಿದರು.