ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲರೂ ಗೌರವ ನೀಡಬೇಕು: ಯತ್ನಾಳ್ ಗೆ ಬಿ.ಸಿ. ಪಾಟೀಲ್ ತಿರುಗೇಟು

ಮುಖ್ಯಮಂತ್ರಿ ಸ್ಥಾನ ಗೌರವಯುತವಾಗಿದ್ದು , ಸಿಎಂ ಯಡಿಯೂರಪ್ಪ ಅವರಿಗೆ ಎಲ್ಲರೂ ಗೌರವ ಕೊಡಬೇಕು ಎಂದು ಸಿಎಂ ವಿರೋಧಿ ಬಣದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ನೇರ ಚಾಟಿ ಬೀಸಿದ್ದಾರೆ.

Published: 22nd February 2021 02:09 PM  |   Last Updated: 22nd February 2021 04:14 PM   |  A+A-


BC patil

ಬಿ ಸಿ ಪಾಟೀಲ್

Posted By : Shilpa D
Source : UNI

ವಿಜಯಪುರ: ಮುಖ್ಯಮಂತ್ರಿ ಸ್ಥಾನ ಗೌರವಯುತವಾಗಿದ್ದು , ಸಿಎಂ ಯಡಿಯೂರಪ್ಪ ಅವರಿಗೆ ಎಲ್ಲರೂ ಗೌರವ ಕೊಡಬೇಕು ಎಂದು ಸಿಎಂ ವಿರೋಧಿ ಬಣದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ನೇರ ಚಾಟಿ ಬೀಸಿದ್ದಾರೆ.

ವಿಜಯಪುರ ತಾಲೂಕಿನ ಇಟ್ಟಂಗಿಹಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ,ಮೀಸಲಾತಿ ಸಭೆಯಲ್ಲಿ ಯತ್ನಾಳ್ ಅಷ್ಟೇ ಭಾಗವಹಿಸಿಲ್ಲ. ಬೇರೆ ಬೇರೆ ಸಮುದಾಯದವರೂ ಭಾಗವಹಿಸಿದ್ದಾರೆ.ಆದರೆ ಸಿಎಂ ಸ್ಥಾನ ಗೌರವಯುತ ಸ್ಥಾನ, ಅದಕ್ಕೆ ಗೌರವ ಕೊಡಬೇಕು ಎಂದರು 

ಮೀಸಲಾತಿ ಸಿಗದಿದ್ದರೆ ಸಮುದಾಯದ ಶಾಸಕರು, ಸಚಿವರು ರಾಜೀನಾಮೆ ನೀಡಬೇಕು ಎಂದು ಯತ್ನಾಳ ಹೇಳಿಕೆ ನೀಡಿರುವುದು ಯತ್ನಾಳ್ ಅವರ ವೈಯಕ್ತಿಕ ಅಭಿಪ್ರಾಯ. ದೆಹಲಿಗೆ ಅವರನ್ನು ಏಕೆ ಕರೆಸಿಕೊಂಡಿದ್ದರು ಎಂಬುದನ್ನು ಯತ್ನಾಳ್ ಅವರಿಗೇ ಕೇಳಬೇಕು ಎಂದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡದಿದ್ದರೆ ಸಮಾಜದ ಸಚಿವರು, ವಿವಿಧ ನಿಗಮ, ಮಂಡಳಿ ನೇಮಕಗೊಂಡವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ನಿಲುವುಗಳಿರುತ್ತವೆ. ರಾಜೀನಾಮೆ ನೀಡುವಂತೆ ಯಾರೂ ಬಲವಂತ ಮಾಡಲಾಗದು ಎಂದರು. ಮೀಸಲಾತಿ ಸಿಗದಿದ್ದರೆ ಸಮುದಾಯದ ಶಾಸಕರು, ಸಚಿವರು ರಾಜೀನಾಮೆ ನೀಡಬೇಕು ಎಂದು ಹೇಳಿಕೆ ನೀಡಿರುವುದು ಬಸನಗೌಡ ಪಾಟೀಲ್‌ ಯತ್ನಾಳ್ ಅವರ ವೈಯಕ್ತಿಕ ಅಭಿಪ್ರಾಯ. 

ರಾಜೀನಾಮೆ ಕೊಡುವವರು ಅದಕ್ಕೆ ಬದ್ಧರಾಗಿರಬೇಕು. ಯತ್ನಾಳ್ ಹೇಳಿದ ಮಾತ್ರಕ್ಕೆ ರಾಜೀನಾಮೆ ಕೊಡಬೇಕು ಎಂಬುದೇನಿಲ್ಲ ಎಂದು ಸೂಚ್ಯವಾಗಿ ಹೇಳಿದರು. ಇದು ಜಾತ್ಯಾತೀತ ರಾಷ್ಟ್ರ, ಅವರವರ ಸಮುದಾಯಗಳಿಗೆ ಬೇಡಿಕೆ ಸಲ್ಲಿಸುವುದು ಅವರವರ ಹಕ್ಕು ಎಂದ ಮಾತ್ರಕ್ಕೆ ಈ ರೀತಿ ಬೇರೆಯವರ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ತಿಳಿಸಿದರು.

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp