ಸಂಘರ್ಷ ಮತ್ತು ಸಂಘಟನೆ ಮೂಲಕ ಪಕ್ಷ ಸಜ್ಜು: ಕಳೆದುಕೊಂಡ ವಿಧಾನಸಭೆ ಕ್ಷೇತ್ರಗಳ ಪಡೆಯಲು ಕಾಂಗ್ರೆಸ್ ಸಿದ್ಧತೆ

2018ರ ವಿಧಾನ ಸಭೆ ಚುನಾವಣೆಯಲ್ಲಿ ಕಳೆದು ಕೊಂಡ ಸ್ಥಾನಗಳನ್ನು ಮರು ಪಡೆಯಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ, ಹೀಗಾಗಿ 2023 ರ ವಿಧಾನಸಭೆ ಚುನಾವಣೆಗಾಗಿ  ಸುಮಾರು 100 ರ್ಯಾಲಿಗಳನ್ನು ನಡೆಸಲು ಸಿದ್ಧತೆ ನಡೆಸಿದೆ.

Published: 22nd February 2021 09:51 AM  |   Last Updated: 22nd February 2021 12:23 PM   |  A+A-


Shiva kumar

ಶಿವಕುಮಾರ್

The New Indian Express

ಬೆಂಗಳೂರು: 2018ರ ವಿಧಾನ ಸಭೆ ಚುನಾವಣೆಯಲ್ಲಿ ಕಳೆದು ಕೊಂಡ ಸ್ಥಾನಗಳನ್ನು ಮರು ಪಡೆಯಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ, ಹೀಗಾಗಿ 2023 ರ ವಿಧಾನಸಭೆ ಚುನಾವಣೆಗಾಗಿ  ಸುಮಾರು 100 ರ್ಯಾಲಿಗಳನ್ನು ನಡೆಸಲು ಸಿದ್ಧತೆ ನಡೆಸಿದೆ.

ಕಾಂಗ್ರೆಸಿ ಪಕ್ಷದ ಈ 100 ರ್ಯಾಲಿಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿದೆ. ಕಳೆದ ವಿಧಾನಸಭೆ ಚುನಾವನಣೆಯಲ್ಲಿ ಕಾಂಗ್ರೆಸ 80 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಹಲವು ಶಾಸಕರ ರಾಜಿನಾಮೆಯಿಂದಾಗಿ  ಸದ್ಯ 67ಕ್ಕೆ ಬಂದು ನಿಂತಿದೆ. 2019ರಲ್ಲಿ ನಜೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 2 ಸ್ಥಾನ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಯಿತು.

2020ರಲ್ಲಿ ನಡೆದ 2 ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಸೋಲನುಭವಿಸಿತ್ತು. ಹೀಗಾಗಿ ಹಿಂದಿನ ಚುನಾವಣೆಗಳ ಸೋಲಿನ ಕಹಿಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಹೈಕಮಾಂಡ್ ಮುಂಬರುವ ಚುನಾವಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯಾದ್ಯಂತ ಸಂಚರಿಸಲಿದ್ದಾರೆ. ಈ ವರ್ಷ ಸುಮಾರು 100 ಸ್ಥಳಗಳಿಗೆ ಪ್ರವಾಸ ಮಾಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವೈಫಲ್ಯಗಳನ್ನು ನಾವು ಜನರಿಗೆ ತೋರಿಸುತ್ತೇವೆ,  ಜನರನ್ನು ಸಂಪರ್ಕಿಸುತ್ತೇವೆ, ಇದರಿಂದ ಪಕ್ಷ ಸಂಘಟನೆಗೆ ಸಹಾಯವಾಗುತ್ತದೆ. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್  ಚುನಾವಣೆಗೆಇದರಿಂದ ಸಹಾಯವಾಗಲಿದೆ ಎದು ಹೇಳಿದ್ದಾರೆ, ಈ ವರ್ಷ ಸಂಘರ್ಷ ಮತ್ತು ಸಂಘಟನೆಗೆ ಹೆಚ್ಚು ಆದ್ಯತೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಪಕ್ಷವು 2018 ರಲ್ಲಿ ಕಳೆದುಕೊಂಡ 100 ವಿಧಾನಸಭಾ ಕ್ಷೇತ್ರಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸೇರಿದಂತೆ  ಹಲವು ನಾಯಕರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. 

ರ್ಯಾಲಿಯಲ್ಲಿ ಅವರು ಹೊಸ ಕೃಷಿ ಕಾನೂನುಗಳ ದೋಷಗಳು, ಇತರ ಸಮಸ್ಯೆಗಳು ಮತ್ತು ಬೆಲೆ ಏರಿಕೆ ಮುಂತಾದ ಸಮಸ್ಯೆಗಳ ಬಗ್ಗೆ ದನಿ ಎತ್ತಲಿದ್ದಾರೆ.

ತಂಡವು ಒಂದು ವಾರದಲ್ಲಿ 3-4 ಕ್ಷೇತ್ರಗಳಿಗೆ ಭೇಟಿ ನೀಡಲಿದ್ದು, ಸ್ಥಳೀಯ ಮುಖಂಡರನ್ನು ಭೇಟಿಯಾಗುವುದರ ಹೊರತಾಗಿ ಅವರು ಧಾರ್ಮಿಕ ಮುಖಂಡರೊಂದಿಗೆ ಸಂವಹನ ನಡೆಸಲಿದ್ದಾರೆ. ಈ ರ್ಯಾಲಿಗಳ ಹೊರತಾಗಿ, ಪಕ್ಷದ ವಿವಿಧ ವಿಭಾಗಗಳು (ಮಹಿಳೆಯರು, ಎಸ್‌ಸಿಗಳು / ಎಸ್‌ಟಿಗಳು, ಅಲ್ಪಸಂಖ್ಯಾತರು, ಯುವಕರು, ಇತರರು) ರಾಜ್ಯದಾದ್ಯಂತ 16-20 ಸಮಾವೇಶಗಳನ್ನು ಆಯೋಜಿಸಲಿದ್ದಾರೆ.

ಸಿದ್ದರಾಮಯ್ಯ ಕೂಡ ಅಹಿಂದಾ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಸಂಕ್ಷಿಪ್ತ ರೂಪ) ರ್ಯಾಲಿಯನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ. ಆಡಳಿತಾರೂ ಬಿಜೆಪಿಯೂ ಸಹ ಕಳೆದ ಚುನಾವಣೆಯಲ್ಲಿ ಸೋತ ಆ ಕ್ಷೇತ್ರಗಳಲ್ಲಿನ ಮತದಾರರನ್ನು ಸೆಳೆಯಲು ಇದೇ ರೀತಿಯ ತಂತ್ರವನ್ನು ಅನುಸರಿಸುತ್ತಿದೆ. 
 


Stay up to date on all the latest ರಾಜಕೀಯ news
Poll
Students greet each other, relieved that their SSLC examinations

SSLC ಪರೀಕ್ಷೆ ಫಲಿತಾಂಶ: 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್; ಧಾರಾಳವಾಗಿ ಅಂಕ ನೀಡಿರುವ ಈ ಮೌಲ್ಯಮಾಪನ ರೀತಿ ಸರಿಯೇ?


Result
ಸರಿ
ಸರಿಯಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp