ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿ.ವೈ. ವಿಜಯೇಂದ್ರ ಟಾಂಗ್

ದೇಶದ್ರೋಹಿ,ಮತಾಂಧ ಉಗ್ರಗಾಮಿಗಳ ಹುಟ್ಟಡಗಿಸಿ, ಕಾಶ್ಮೀರ ರಕ್ಷಿಸಿ, ಭಾರತದ ಸಾರ್ವಭೌಮತೆ, ಬಲಿಷ್ಠತೆಯನ್ನು ಸಾರಿದ ಬಿಜೆಪಿ ಬದ್ಧತೆ, ಸಾಮರ್ಥ್ಯ ಏನೆಂಬುದು ಜನತೆಗೆ ತಿಳಿದಿದೆ ಎಂದು ಬಿಜೆಪಿ ಯುವ ನಾಯಕ ಬಿ. ವೈ. ವಿಜಯೇಂದ್ರ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

Published: 23rd February 2021 01:17 PM  |   Last Updated: 23rd February 2021 02:10 PM   |  A+A-


vijayendra

ವಿಜಯೇಂದ್ರ

Posted By : Shilpa D
Source : UNI

ಬೆಂಗಳೂರು: ದೇಶದ್ರೋಹಿ, ಮತಾಂಧ ಉಗ್ರಗಾಮಿಗಳ ಹುಟ್ಟಡಗಿಸಿ, ಕಾಶ್ಮೀರ ರಕ್ಷಿಸಿ, ಭಾರತದ ಸಾರ್ವಭೌಮತೆ, ಬಲಿಷ್ಠತೆಯನ್ನು ಸಾರಿದ ಬಿಜೆಪಿ ಬದ್ಧತೆ, ಸಾಮರ್ಥ್ಯ ಏನೆಂಬುದು ಜನತೆಗೆ ತಿಳಿದಿದೆ ಎಂದು ಬಿಜೆಪಿ ಯುವ ನಾಯಕ ಬಿ. ವೈ. ವಿಜಯೇಂದ್ರ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ನಿಮ್ಮ ಕಾಂಗ್ರೆಸ್ ನ ಅಂಗಸಂಸ್ಥೆಗಳೇ ಆಗಿರುವ ಪಿಎಎಫ್ ಐ – ಎಸ್ ಡಿಪಿಐ ಸಂಘಟನೆಗಳಿಗೆ ಮುಕ್ತಿ ಹಾಡುವ ಕಾಲ ಶೀಘ್ರದಲ್ಲೇ ಬರಲಿದೆ, ನೋಡುತ್ತೀರಿ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ಸಂಘಟನೆಗಳ ಪೋಷಣೆ ಕಾಂಗ್ರೆಸ್ ನ ಹೊಣೆ’ ಎಂಬಂತೆ ಅವುಗಳ ಮೇಲಿದ್ದ ಕ್ರಿಮಿನಲ್ ಕೇಸ್ ಗಳನ್ನು ನಿಮ್ಮ ಅಧಿಕಾರವಧಿಯಲ್ಲಿ ವಾಪಸ್ಸು ಪಡೆದುಕೊಂಡಿರಿ. ಈ ಪಾಪ ಕಾರ್ಯಕ್ಕೆ ರಾಜ್ಯದ ಜನತೆ ನಿಮಗೆ ತಕ್ಕ ಪಾಠಕಲಿಸಿದ್ದನ್ನು ನೀವು ಮರೆತಂತೆ ಕಾಣುತ್ತದೆ. ಎಲ್ಲವನ್ನೂ ರಾಜಕೀಯದ ಹಳದಿ ಕಣ್ಣಿನಿಂದ ನೋಡಬೇಡಿ  ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Stay up to date on all the latest ರಾಜಕೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp