ಸಿದ್ದರಾಮಯ್ಯ ನೀಡುವ ಸಲಹೆಗಳನ್ನು ಪಾಲಿಸುತ್ತೇವೆ: ಸಿಎಂ ಯಡಿಯೂರಪ್ಪ
ಚಿಕ್ಕಬಳ್ಳಾಪುರ ಜಿಲೆಟಿನ್ ಪ್ರಕರಣ ಕಾನೂನುಬಾಹಿರವಾಗಿ ನಡೆದಿದ್ದು, ಇದು ರಾಜ್ಯದಲ್ಲಿ ನಡೆದಿರುವ ಎರಡನೇ ಘಟನೆಯಾಗಿದೆ. ಇಂತಹ ಘಟನೆಗಳನ್ನು ತಪ್ಪಿಸಲು ಪ್ರತಿಪಕ್ಷಗಳು ನೀಡುವ ಸಲಹೆಗಳನ್ನು...
Published: 23rd February 2021 06:26 PM | Last Updated: 23rd February 2021 06:26 PM | A+A A-

ಯಡಿಯೂರಪ್ಪ
ಬೆಂಗಳೂರು: ಚಿಕ್ಕಬಳ್ಳಾಪುರ ಜಿಲೆಟಿನ್ ಪ್ರಕರಣ ಕಾನೂನುಬಾಹಿರವಾಗಿ ನಡೆದಿದ್ದು, ಇದು ರಾಜ್ಯದಲ್ಲಿ ನಡೆದಿರುವ ಎರಡನೇ ಘಟನೆಯಾಗಿದೆ. ಇಂತಹ ಘಟನೆಗಳನ್ನು ತಪ್ಪಿಸಲು ಪ್ರತಿಪಕ್ಷಗಳು ನೀಡುವ ಸಲಹೆಗಳನ್ನು ರಚನಾತ್ಮಕವಾಗಿ ಸ್ವೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.
ಘಟನಾ ಸ್ಥಳದ ಬಗ್ಗೆ ಗೃಹ ಸಚಿವರು ಸೇರಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಇಂತಹ ಘಟನೆಗಳ ತಡೆಗೆ ಏನ್ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಸಮಾಲೋಚನೆ ನಡೆಸಲಾಗುತ್ತಿದೆ. ತಪ್ಪಿಸ್ಥರು ಯಾರೇ ಆದರೂ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತೇವೆ. ಇನ್ನುಮುಂದೆ ಇಂತಹ ಪ್ರಕಟನಗಳಿಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ನಿರ್ಲಕ್ಷ್ಯತನದಿಂದಾದ ಘಟನೆ ನಡೆದಿದ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಇರುವುದೇ ಆರೋಪ ಮಾಡಲು ಎಂದರು.
ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ. ಇಂತಹ ಪ್ರಕರಣಗಳ ತಡೆಗೆ ಸಿದ್ದರಾಮಯ್ಯ ಬೇಕಿದ್ದರೆ ಸರ್ಕಾರಕ್ಕೆ ಸಲಹೆಗಳನ್ನು ಕೊಡಲಿ. ಸಲಹೆಗಳ ಆಧಾರದ ಮೇಲೆ ನಾವು ಬಿಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.