ಜಾರಕಿಹೊಳಿಯನ್ನು ನಾವೇ ಮಂತ್ರಿ ಮಾಡಿದ್ದು, ಮಂದಿರ ನಿರ್ಮಾಣಕ್ಕೆ 2 ಲಕ್ಷ ರು. ನೀಡಿದ್ದೇನೆ: ಲಕ್ಷ್ಮಿ ಹೆಬ್ಬಾಳ್ಕರ್

ರಮೇಶ್ ಜಾರಕಿಹೊಳಿಯನ್ನು ನಾವೇ ಮಂತ್ರಿ ಮಾಡಿದ್ದೇವೆ. ಮಂತ್ರಿ ಮಾಡುವಂತೆ ನಾವೇ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದೇವೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್  ತಿರುಗೇಟು ನೀಡಿದ್ದಾರೆ.

Published: 24th February 2021 10:10 AM  |   Last Updated: 24th February 2021 12:39 PM   |  A+A-


Laxmi hebbalkar

ಲಕ್ಷ್ಮಿ ಹೆಬ್ಬಾಳ್ಕರ್

Posted By : Shilpa D
Source : Online Desk

ಬೆಳಗಾವಿ: ರಮೇಶ್ ಜಾರಕಿಹೊಳಿಯನ್ನು ನಾವೇ ಮಂತ್ರಿ ಮಾಡಿದ್ದೇವೆ. ಮಂತ್ರಿ ಮಾಡುವಂತೆ ನಾವೇ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದೇವೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್  ತಿರುಗೇಟು ನೀಡಿದ್ದಾರೆ

ಲಕ್ಷ್ಮೀ ಹೆಬ್ಬಾಳ್ಕರ್ ಗೆಲ್ಲಿಸಿದ್ದು ನಾನೇ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದ್ವೇಷದ ರಾಜಕಾರಣ ಯಾರಿಗೂ ಶೋಭೆ ತರುವುದಿಲ್ಲ. ಅಭಿವೃದ್ಧಿ ಪರ ರಾಜಕಾರಣ ಬೆಂಬಲಿಸಬೇಕು. ದೇವರು ಅವರಿಗೆ ಒಳ್ಳೆಯದನ್ನ ಮಾಡಲಿ ಎಂದು ಹೇಳಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್​ನ ಬಸ್ ನಿಲ್ದಾಣದಲ್ಲಿ ಹುಡುಕಬೇಕಾಗುತ್ತೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ತಿರುಗೇಟು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ನಾನು ರಾಮನ ಭಕ್ತೆ, ರಾಮಮಂದಿರಕ್ಕೆ 2 ಲಕ್ಷ ಕೊಟ್ಟಿದ್ದೇನೆ. ರಾಮನ ಪಕ್ಷದಲ್ಲಿ ಒಬ್ಬ ಮಹಿಳೆ ಬಗ್ಗೆ ಆಡುತ್ತಿರುವ ಮಾತುಗಳನ್ನು ಜನ ನೋಡುತ್ತಿದ್ದಾರೆ. ಆಕೆ, ಈಕೆ ಎನ್ನುವುದು, ಬಸ್ ನಿಲ್ದಾಣದಲ್ಲಿ ಹುಡುಕಬೇಕು, ಹಾಸ್ಪಿಟಲ್‌ಗೆ ಅಡ್ಮಿಟ್ ಮಾಡಬೇಕು ಎನ್ನುವುದು ಶೋಭೆ ತರುವ ವಿಚಾರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Stay up to date on all the latest ರಾಜಕೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp