ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ? ಸುಧಾಕರ್ ವಿರುದ್ಧ ಶಾಸಕ ರೇಣುಕಾಚಾರ್ಯ ವಾಗ್ದಾಳಿ

ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ ಎಂದು ಶಾಸಕ ರೇಣುಕಾಚಾರ್ಯ ಸಚಿವ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.

Published: 26th February 2021 02:56 PM  |   Last Updated: 26th February 2021 02:56 PM   |  A+A-


renukacharya

ರೇಣುಕಾಚಾರ್ಯ

Posted By : Srinivasamurthy VN
Source : UNI

ಬೆಂಗಳೂರು: ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ ಎಂದು ಶಾಸಕ ರೇಣುಕಾಚಾರ್ಯ ಸಚಿವ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ ಐದಾರು ಸಚಿವರು ಕೈಗೆ ಸಿಗುವುದಿಲ್ಲ. ನಾನು ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ನಾವೇನು ಬಿಟ್ಟಿ ಬಿದ್ದಿದ್ದೀವಾ ಎಂದು ಶಾಸಕ ರೇಣುಕಾಚಾರ್ಯ ಕೆಲ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಮುಖವಾಗಿ  ಸಚಿವ ಸುಧಾಕರ್ ವಿರುದ್ಧ ಕಿಡಿಕಾರಿದ ಅವರು, ಕೆಲವು ಸಚಿವರು ಕೈಗುವುದಿಲ್ಲ . ಅವರ ಪಿ.ಎ ಗಳು ಪಿ.ಎಸ್ ಗಳು ಫೋನ್ ರಿಸೀವ್ ಮಾಡುವುದಿಲ್ಲ. ಕಾಂಗ್ರೆಸ್ ಜೆಡಿಎಸ್ ನಿಂದ ಬಂದ ಎಲ್ಲ ಸಚಿವರು ಹೀಗೆ ಎಂದು ನಾನು ಹೇಳುವುದಿಲ್ಲ ಆದರೆ ಕೆಲವರು ಮಾತ್ರ ನಮಗೆ ಕೈಗೆ ಸಿಗುವುದಿಲ್ಲ ಕೆಲಸ ಮಾಡುವುದು ಇಲ್ಲ ಎಂದು ಆರೋಪಿಸಿದರು.

ನಾನು ಹತ್ತಾರು ಭಾರಿ ಭೇಟಿ ಆಗಿ ಪತ್ರ ಬರೆದಿದ್ದೇನೆ, ಏನೂ ಪ್ರಯೋಜನವಾಗಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಿ ಆಗುವ ಮಾತೇ ಇಲ್ಲ. ನಾನು ಧರಣಿ ಮಾಡುವ ಮಟ್ಟಕ್ಕೂ ಹೋಗಿದ್ದೇನೆ . ಪಾಪ ನಮ್ಮ ಅನೇಕ ಬಾಯಿ ಇಲ್ಲದ ಶಾಸಕರಿದ್ದಾರೆ, ಅವರ ಕೆಲಸಗಳೂ ಆಗಬೇಕು. ಆದರೆ ಐದಾರು ಸಚಿವರು ಕೈಗೆ ಸಿಗುವುದಿಲ್ಲ ಎಂದೂ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಸಚಿವ ಡಾ.ಕೆ.ಸುಧಾಕರ್ ನನ್ನ ಫೋನ್ ಸ್ವೀಕರಿಸುತ್ತಿಲ್ಲ.  ಸುಧಾಕರ್ ಪಿಎಗಳು ಸಹ ನನ್ನ ಫೋನ್ ಸ್ವೀಕರಿಸುತ್ತಿಲ್ಲ.  ಸುಧಾಕರ್​ಗೆ ಎರಡೆರಡು ಖಾತೆ ಕೇಳುವುದಕ್ಕೆ ಆಗುತ್ತದೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವುದಕ್ಕೆ ಇವರಿಗೆ ಆಗಲ್ವಾ? ಡಾ.ಕೆ.ಸುಧಾಕರ್ ಒಬ್ಬರಿಂದಲೇ ಈ ಸರ್ಕಾರ ಬಂದಿಲ್ಲ. ಇವರಷ್ಟೇ ಅಲ್ಲ ಐದರಿಂದ ಆರು ಸಚಿವರು ಶಾಸಕರ ಕೈಗೇ ಸಿಗುತ್ತಿಲ್ಲ. ಇವರೇನು ಬಿಟ್ಟಿ ಗೆದ್ದು ಬಂದಿಲ್ಲ. ನಾನು ಎರಡು ಭಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಪಕ್ಷ ಸಂಘಟನೆಯ ಕೆಲಸ ಮಾಡಿ ಮೂರು ಭಾರಿ ಗೆದ್ದಿದ್ದೇನೆ. ಆದರೆ ಪಕ್ಷಕ್ಕಾಗಿ ಕೆಲವರ ಕೊಡುಗೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ನನಗೆ ಅವಮಾನ ಮಾಡಿದ್ದಾರೆ, ಇದನ್ನು ಖಂಡಿಸುತ್ತೇನೆ ಎಂದು ಆಕ್ರೋಶದಿಂದ ಹೇಳಿದ್ದಾರೆ.

Stay up to date on all the latest ರಾಜಕೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp