ಧರ್ಮೇಗೌಡರ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ: ಸಲೀಂ ಅಹಮದ್  

ವಿಧಾನ ಪರಿಷತ್‌ನಲ್ಲಿ ನಡೆದ ಘಟನೆ ಹಾಗೂ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣಕ್ಕೆ ಸರ್ಕಾರವೇ ನೇರ ಹೊಣೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ

Published: 05th January 2021 08:46 AM  |   Last Updated: 05th January 2021 12:20 PM   |  A+A-


Saleem Ahmed

ಸಲೀಂ ಅಹ್ಮದ್

Posted By : Shilpa D
Source : The New Indian Express

ಮಂಗಳೂರು: ವಿಧಾನ ಪರಿಷತ್‌ನಲ್ಲಿ ನಡೆದ ಘಟನೆ ಹಾಗೂ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣಕ್ಕೆ ಸರ್ಕಾರವೇ ನೇರ ಹೊಣೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾನೂನು– ನಿಯಮಾವಳಿ ಉಲ್ಲಂಘಿಸಿ ಸಭಾಧ್ಯಕ್ಷರನ್ನು ಕೆಳಗಿಳಿಸುವ ತರಾತುರಿ ಸರ್ಕಾರಕ್ಕೆ ಏಕೆ ಬೇಕಿತ್ತು? ಉಪಸಭಾಪತಿಗಳಿಗೆ ಮಧ್ಯರಾತ್ರಿ ಕರೆ ಮಾಡಿ ಸಭಾಪತಿಗಳ ಪೀಠವನ್ನು ಅಲಂಕರಿಸುವಂತೆ ಹೇಳಿದ್ದು ಯಾಕೆ?’ ಎಂದು ಪ್ರಶ್ನಿಸಿದರು. 

‘ಸಭಾಪತಿಗಳ ಅನುಮತಿ ಇಲ್ಲದೇ ಸದನಕ್ಕೂ ಯಾರೂ ಕಾಲಿಡುವುದಿಲ್ಲ. ಇದು ಸಂಸ್ಕೃತಿ. ಆದರೆ, ಅಂತಹ ಸಭಾಪತಿಗಳೇ ಬಾರದ ಹಾಗೆ ಬೀಗ ಹಾಕಿದ್ದು ಯಾಕೆ? ಖುದ್ದು ಉಪಮುಖ್ಯಮಂತ್ರಿ ಮತ್ತು ಕಾನೂನು ಸಚಿವರೇ ಕಾನೂನು ಉಲ್ಲಂಘಿಸಿದ್ದು ಖೇದಕರ’ ಎಂದು ವಿಷಾಧ ವ್ಯಕ್ತ ಪಡಿಸಿದರು.

ಸದನದ ಘಟನೆಯಿಂದ ದೇಶದಲ್ಲೇ ತಲೆತಗ್ಗಿಸುವಂತಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾನು ಕಾಂಗ್ರೆಸ್‌ ಸದಸ್ಯರನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ಈ ಬೆಳವಣಿಗೆಗೆ ಸರ್ಕಾರವೇ ನೇರ ಹೊಣೆ’ ಎಂದು ಅವರು ಆರೋಪಿಸಿದರು.

ಇನ್ನೂ ಕಾಂಗ್ರೆಸ್  ಕೇಡರ್ ಆಧರಿತ ಪಕ್ಷವಾಗಿದೆ, ಮುಂದಿನ ದಿನಗಳಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವುದಾಗಿ ತಿಳಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 25 ಮಂದಿ ತಂಡ ರಚಿಸಲಾಗುವುದು ಮತ್ತು ಈ ತಂಡ ಜನವರಿ 25 ರಿಂದ ಪಕ್ಷದ ತತ್ವ ,ಸಿದ್ದಾಂತದ ಅನ್ವಯ ಕೆಲಸ ಮಾಡಲಿಗದೆ ಎಂದು ಹೇಳಿದರು.


Stay up to date on all the latest ರಾಜಕೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp