ಜನವರಿ 12 ರಂದು ಆನ್ ಲೈನ್ ಮೂಲಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ

ರಾಜ್ಯ ‘ಯುವ ಕಾಂಗ್ರೆಸ್‌’ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಆಂತರಿಕ ಚುನಾವಣೆ ಪೈಪೋಟಿ ತೀವ್ರಗೊಂಡಿದೆ. ಪಟ್ಟಕ್ಕಾಗಿ ನಾಲ್ವರಲ್ಲಿ ಪೈಪೋಟಿ ನಡೆಯುತ್ತಿದ್ದು ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುವುದು ಕುತೂಹಲ ಕೆರಳಿಸಿದೆ.

Published: 05th January 2021 10:55 AM  |   Last Updated: 05th January 2021 12:20 PM   |  A+A-


Congress logo

ಕಾಂಗ್ರೆಸ್ ಲೋಗೋ

Posted By : Shilpa D
Source : The New Indian Express

ಬೆಂಗಳೂರು: ರಾಜ್ಯ ‘ಯುವ ಕಾಂಗ್ರೆಸ್‌’ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಆಂತರಿಕ ಚುನಾವಣೆ ಪೈಪೋಟಿ ತೀವ್ರಗೊಂಡಿದೆ. ಪಟ್ಟಕ್ಕಾಗಿ ನಾಲ್ವರಲ್ಲಿ ಪೈಪೋಟಿ ನಡೆಯುತ್ತಿದ್ದು ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುವುದು ಕುತೂಹಲ ಕೆರಳಿಸಿದೆ.

ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಚುನಾವಣೆಗೆ ಡಿಸೆಂಬರ್‌ 31 ರಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿತ್ತು. ಜನವರಿ 7 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜನವರಿ 12 ರಂದು  ಚುನಾವಣೆ ನಡೆಯಲಿದೆ. ಕೋವಿಡ್‌ ಕಾರಣಕ್ಕಾಗಿ ಈ ಬಾರಿ ಆನ್‌ಲೈನ್‌ನಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಇರುವ ಒಟ್ಟು 4.50 ಲಕ್ಷ ಸದಸ್ಯರು ಈ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಮೂಲಕ ತಮ್ಮ ಅಧ್ಯಕ್ಷನನ್ನು ಆಯ್ಕೆ ಮಾಡಲಿದ್ದಾರೆ.

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಸದ್ಯ ಕಣದಲ್ಲಿ ಎನ್‌ಎಸ್‌ಯುಐ ಅಧ್ಯಕ್ಷ ಎಚ್‌ಎಸ್‌ ಮಂಜುನಾಥ್ ಗೌಡ, ಮಾಜಿ ಸಚಿವ ಎಂಆರ್‌ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ, ಶಾಸಕ ಎನ್‌ಎ ಹ್ಯಾರಿಸ್ ಪುತ್ರ ಮುಹಮ್ಮದ್ ನಲಪಾಡ್‌ ಹಾಗೂ ಮಿಥುನ್ ರೈ ಹೆಸರು ಮುಂಚೂಣಿಯಲ್ಲಿದೆ. ಈ ಪೈಕಿ ಎಚ್‌ಎಸ್ ಮಂಜುನಾಥ್ ಗೌಡ ಹಾಗೂ ಮುಹಮ್ಮದ್ ನಲಪಾಡ್‌ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಉಳಿದಂತೆ ಭವ್ಯಾ, ಸೈಯದ್ ಖಾಲಿದ್ ಹಾಗೂ ಸಂದೀಪ ನಾಯಕ ಹೆಸರುಗಳು ಕೂಡಾ ಕೇಳಿಬರುತ್ತಿವೆ.

ಇದು 2011 ರಲ್ಲಿ ನಡೆದ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮತ್ತು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ನಡುವೆ 2011 ರಲ್ಲಿ ನಡೆದ ತೀವ್ರ ಸ್ಪರ್ಧೆ ಏರ್ಪಟ್ಟಿದ್ದ ಚುನಾವಣೆಯಿಂದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಬಂದ ಬದಲಾವಣೆಯಾಗಿದೆ. ಬೆಂಗಳೂರಿನ ಬಿ ವಿ ಶ್ರೀನಿವಾಸ್ ಪ್ರಸ್ತುತ ರಾಷ್ಟ್ರೀಯ ಐವೈಸಿ ಅಧ್ಯಕ್ಷರಾಗಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಬಾರಿ ಆನ್ ಲೈನ್ ನಲ್ಲಿ ಮತದಾನ ನಡೆಯಲಿದೆ.

ಅನೇಕ ಯುವ ಕಾಂಗ್ರೆಸ್ ಅಧ್ಯಕ್ಷರು ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಕಾಂಗ್ರೆಸ್ ನಾಯಕರು ಚುನಾವಣೆಯನ್ನು ತೀವ್ರವಾಗಿ ಗಮನಿಸುತ್ತಿದ್ದಾರೆ.  ನಾವು ನೇರ ಚುನಾವಣೆ ನಡೆಸಿ ಪ್ರಜಾಪ್ರಭುತ್ವವನ್ನು ಜೀವಂತವಾಗಿಡಬೇಕು ಎಂಬುದು ನಮ್ಮ ನಾಯಕ ರಾಹುಲ್ ಗಾಂಧಿಯವರ ದೃಷ್ಟಿಕೋನ. ಈ ಚುನಾವಣೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಲಾಗುವುದು. ಮತದಾರರು ಯುವ ಕಾಂಗ್ರೆಸ್‌ನಲ್ಲಿ ಸದಸ್ಯರಾಗಿ ಸೇರಿಕೊಂಡವರಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಕೇರಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಅಧ್ಯಕ್ಷೀಯ ಚುನಾವಣೆಗಳನ್ನು ಯುವ ಕಾಂಗ್ರೆಸ್ ಪೂರ್ಣಗೊಳಿಸಿದೆ.  ಹಿಮಾಚಲ ಪ್ರದೇಶದಲ್ಲಿ ಯಾವುದೇ ಚುನಾವಣೆ ನಡೆಯಲಿಲ್ಲ, ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ನೋಂದಾಯಿಸುವಲ್ಲಿ ಯಶಸ್ವಿಯಾದ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಕೇರಳದಲ್ಲಿ, ಶಾಸಕರನ್ನು ಐವೈಸಿ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಮಾಡಲಾಯಿತು.  ಕರ್ನಾಟಕದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷರನ್ನು ಸಾಮಾನ್ಯವಾಗಿ ನಾಮನಿರ್ದೇಶನ ಮಾಡಲಾಗಿತ್ತು.

ಸಂದೀಪ್ ನಾಯಕ್: ರಾಯಚೂರು ಮಾಜಿ  ಸಂಸದ ಬಿ.ವಿ.ನಾಯಕ್ ಅವರ ಆಪ್ತ ಸಂಬಂಧಿ ಮತ್ತು ಡಿಸಿಸಿ ಅಧ್ಯಕ್ಷ

ಮೊಹಮ್ಮದ್ ಖಾಲಿದ್: ದಾವಣಗೆರೆ  ಯೂತ್ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿದ್ದರು

ಭವ್ಯಾ: ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಯುವ ಕಾಂಗ್ರೆಸ್ ಎಸ್ ಸಿ ಘಟಕದ ಉಪಾಧ್ಯಕ್ಷೆ ಇವರು ಕೂಡ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕ ಅಭ್ಯರ್ಥಿಗಳಾಗಿದ್ದಾರೆ.

Stay up to date on all the latest ರಾಜಕೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp