'ಹೊರಟ್ಟಿ ಸಭಾಪತಿಯಾಗದಿದ್ದರೆ ದೇಶ ಮುಳುಗಿ ಹೋಗುತ್ತಾ? ಯಾರದೋ ಸ್ವಾರ್ಥಕ್ಕಾಗಿ ಪಕ್ಷದ ಹಿತ ಬಲಿ ಕೊಡಬೇಡಿ'!
ನಮ್ಮಲ್ಲಿ ಎರಡು ನಿಲುವು ಬೇಡ. ಯಾ ವುದಾದರೂ ಒಂದು ನಿಲುವು ಇರಲಿ. ನಮ್ಮಲ್ಲಿ ದ್ವಂದ್ವ ನಿಲುವು ಬೇಡವೇ ಬೇಡ ಎಂದು ಶಾಸಕ ಶಿವಲಿಂಗೇಗೌಡ ಅವರು ವರಿಷ್ಠರ ಮುಂದೆಯೇ ಸ್ಪಷ್ಟ ನಿಲುವು ತಾಳುವಂತೆ ಒತ್ತಾಯಿಸಿದ್ದಾರೆ.
Published: 08th January 2021 10:08 AM | Last Updated: 08th January 2021 12:09 PM | A+A A-

ಬಸವರಾಜ ಹೊರಟ್ಟಿ
ಬೆಂಗಳೂರು: ರಾಷ್ಟ್ರೀಯ ಪಕ್ಷ ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಎಂದು ಮಾಧ್ಯಮಗ ಳಲ್ಲಿ, ರಾಜಕೀಯ ವಲಯಗಳಲ್ಲಿ ಒಂದಷ್ಟು ಮಾತುಗಳು ಕೇಳಿ ಬಂದವು. ನಮ್ಮಲ್ಲಿ ಎರಡು ನಿಲುವು ಬೇಡ. ಯಾ ವುದಾದರೂ ಒಂದು ನಿಲುವು ಇರಲಿ. ನಮ್ಮಲ್ಲಿ ದ್ವಂದ್ವ ನಿಲುವು ಬೇಡವೇ ಬೇಡ ಎಂದು ಶಾಸಕ ಶಿವಲಿಂಗೇಗೌಡ ಅವರು ವರಿಷ್ಠರ ಮುಂದೆಯೇ ಸ್ಪಷ್ಟ ನಿಲುವು ತಾಳುವಂತೆ ಒತ್ತಾಯಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕರೆದಿರುವ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು,ನಾವು ಬರುತ್ತೆವೆಂದು ಬಿಜೆಪಿಗೆ ಯಾರು ಅರ್ಜಿ ಹಾಕಿದ್ದರು. ಬಿಜೆಪಿ ಜೊತೆ ಸಖ್ಯ ಬೆಳೆಸುತ್ತೇವೆ ಅಂತಾ ಏಕೆ ಹೇಳಬೇಕಾಗಿತ್ತು. ಬಸವ ರಾಜ್ ಹೊರಟ್ಟಿ ಅವರಿಗೆ ಯಾರು ಸ್ವತಂತ್ರ ಕೊಟ್ಟವರು. ಯಾಕೆ ಮೈತ್ರಿ ಅಂತಾ ಹೇಳಬೇಕಾಯ್ತು, ಅವರ ಹೇಳಿ ಕೆಯಿಂದ ಏನೆಲ್ಲಾ ಆಯ್ತು ನೋಡಿ. ಮನನೊಂದು ಇದನ್ನು ಮಾತನ್ನಾಡುತ್ತಿದ್ದೇನೆ ಎಂದು ಬಸವರಾಜ್ ಹೊರಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅರಸೀಕೆರೆಯಲ್ಲಿ ಹೆಚ್ಚಿನ ಬೆಂಬಲಿತರು ಗೆದ್ದಿದ್ದಾರೆ. 35 ರಲ್ಲಿ 33 ಗ್ರಾಮ ಪಂಚಾಯ್ತಿಗಳಲ್ಲಿ ನಮ್ಮ ಬೆಂಬಲಿತರು ಗೆದ್ದಿದ್ದಾರೆ. ನಮ್ಮ ಸಿದ್ಧಾಂತಲ್ಲೇ ನಾವು ಸಾಗಬೇಕು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ನಮ್ಮದು. ನಾವು 5 ವರ್ಷ ಸಿಎಂ ಸ್ಥಾನ ಒಪ್ಪಿಕೊಳ್ಳಬಾರದಿತ್ತು. ಎರಡೂವರೆ ವರ್ಷಕ್ಕೆ ಒಪ್ಪಿಕೊಳ್ಳಬೇಕಿತ್ತು. ಕುಮಾರಸ್ವಾಮಿ ಅವರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿದರು. ಅದೇ ಕಾರಣಕ್ಕೆ 14 ತಿಂಗಳು ಮಾತ್ರ ಸಿಎಂ ಆಗಬೇಕಾಯ್ತು ಎಂದರು.
‘ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಸುಮ್ಮನಿರಿಸಿ, ಬಿಜೆಪಿ ಜತೆ ಸಖ್ಯ ಬೆಳೆಸುತ್ತೇವೆಂದು ಹಿರಿಯ ಮುಖಂಡ ಬಸವರಾಜ್ ಹೊರಟ್ಟಿ ಹೇಳುವ ಅಗತ್ಯ ಇರಲಿಲ್ಲ. ಅವರು ಸಭಾಪತಿಯಾಗದಿದ್ದರೆ ದೇಶ ಮುಳುಗಿ ಹೋಗುತ್ತಾ? ಯಾರದ್ದೊ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿ ಕೊಡಬಾರದು' ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.