ಕಾಂಗ್ರೆಸ್ ನಲ್ಲಿ ಉತ್ತಮ ನಾಯಕರೇ ಇಲ್ಲ, ಕೈಪಾಳಯ ಮೂರು ಶಾಪಗಳಿಂದ ಬಳಲುತ್ತಿದೆ: ನಳಿನ್ ಕುಮಾರ್ ಕಟೀಲ್

ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸ್ಪರ್ಧೆಗಳಿಯುತ್ತಿದ್ದು, ಕಾಂಗ್ರೆಸ್ ಪಾಳಯದಲ್ಲಿ ಉತ್ತಮ ನಾಯಕತ್ವವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೋಮವಾರ ಹೇಳಿದ್ದಾರೆ. 

Published: 12th January 2021 08:28 AM  |   Last Updated: 12th January 2021 08:28 AM   |  A+A-


Nalin Kumar Kateel

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

Posted By : Manjula VN
Source : Online Desk

ಮೈಸೂರು: ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸ್ಪರ್ಧೆಗಳಿಯುತ್ತಿದ್ದು, ಕಾಂಗ್ರೆಸ್ ಪಾಳಯದಲ್ಲಿ ಉತ್ತಮ ನಾಯಕತ್ವವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೋಮವಾರ ಹೇಳಿದ್ದಾರೆ. 

ಬಿಜೆಪಿ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಷ್ಟೇ ಆಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಜನರ ತಿರಸ್ಕಾರದ ಯೋಜನೆಗಳನ್ನು ಜಾರಿ ಮಾಡಿದ್ದರು. ಹಾಗಾಗಿ ಇಡೀ ರಾಜ್ಯದ ಜನರೇ ಸಿದ್ದರಾಮಯ್ಯ ಅವರನ್ನು ತಿರಸ್ಕಾರ ಮಾಡಿದರು ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಗ್ರಾಮ ಸ್ವರಾಜ್ ಅಂಶಗಳಿಲ್ಲ. ಬದಲಿಗೆ ಕೇವಲ ನಾಲ್ಕು ಮಂದಿಯ ಜನ್ಮ, ತಿಥಿಯ ಕಾರ್ಯಕ್ರಮವಿದೆ. ಅದೊಂದು ಬಗೆಯಲ್ಲಿ ತಿಥಿ ಪಕ್ಷ ಎಂದು ಟೀಕಿಸಿದ್ದಾರೆ. 

ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ ಹಾಗೂ ರಾಮರಾಜ್ಯ ಕಲ್ಪನೆಯನ್ನು ಕಾಂಗ್ರೆಸ್ ಸಾಕಾರಗೊಳಿಸಲಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಗಾಂ ಶಾಪ ತಟ್ಟಿದೆ. ಆದರೆ, ಬಿಜೆಪಿ ರಾಮರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ. ರಾಮಮಂದಿರ ನಿರ್ಮಾಣ ಕೈಗೆತ್ತಿಕೊಂಡಿದೆ.

ಕಾಂಗ್ರೆಸ್ ಎಂದೂ ಅಂಬೇಡ್ಕರ್ ಅವರನ್ನ ಗೆಲ್ಲಿಸಲಿಲ್ಲ. ಮಂತ್ರಿ ಮಾಡಲಿಲ್ಲ. ಆದರೆ, ಅಂಬೇಡ್ಕರ್ ಭಾವಚಿತ್ರ ಹಾಕಿ ಕಾಂಗ್ರೆಸ್ ಪಕ್ಷ ಮತ ಕೇಳಿತು. ಹೀಗಾಗಿ ಅವರ ಶಾಪ ತಟ್ಟಿದೆ. ಇನ್ನು ಹಿಂದೆ ಕಾಂಗ್ರೆಸ್ ಹಸು ಮತ್ತು ಕರು, ಜೋಡೆತ್ತು ಚಿಹ್ನೆಯಿಂದ ಮತ ಪಡೆದಿತ್ತು. ಅದೇ ಪಕ್ಷ ಗೋಹತ್ಯೆ ಮಾಡಿದವರ ಬೆಂಗಾವಲಾಗಿ ನಿಂತಿತು. ಆದ್ದರಿಂದ ಆ ಗೋ ಶಾಪ ಕಾಂಗ್ರೆಸ್ ಗೆ ತಟ್ಟಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ನಾಮ ಆಗಲಿದೆ ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ಪ್ರತಿ ಚುನಾವಣೆಗೊಂದು ಕ್ಷೇತ್ರದಲ್ಲಿ ನಿಲ್ಲುತ್ತಿದ್ದಾರೆ. ಚಾಮುಂಡೇಶ್ವರಿಯಿಂದಲೂ ಜನ ಓಡಿಸಿದರು. ಅವರ ಅಧಿಕಾರಾವಧಿಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಯೇ ನಡೆಯಿತು. ಈ ಶಾಪವೂ ಕಾಂಗ್ರೆಸ್‌ ತಟ್ಟಲಿದೆ ಎಂದು ತಿಳಿಸಿದ್ದಾರೆ. 

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp