ಕಾಂಗ್ರೆಸ್ ದೇಶದಲ್ಲಿ ಉಳಿಯಬಾರದು,ಕಾಂಗ್ರೆಸ್ ದೇಶಕ್ಕೆ ಮಾರಕ : ಮುಖ್ಯಮಂತ್ರಿ ಯಡಿಯೂರಪ್ಪ

ಕಾಂಗ್ರೆಸ್ ಈ ದೇಶದಲ್ಲಿ ಉಳಿಯಬಾರದು.ಕಾಂಗ್ರೆಸ್ ಪಕ್ಷದ ದೇಶಕ್ಕೆ ಮಾರಕ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿ ಕಾರಿದರು.

Published: 13th January 2021 08:49 PM  |   Last Updated: 13th January 2021 08:49 PM   |  A+A-


ಇಂದು ಬೆಂಗಳೂರಿನಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ

Posted By : Raghavendra Adiga
Source : UNI

ಬೆಂಗಳೂರು: ಕಾಂಗ್ರೆಸ್ ಈ ದೇಶದಲ್ಲಿ ಉಳಿಯಬಾರದು.ಕಾಂಗ್ರೆಸ್ ಪಕ್ಷದ ದೇಶಕ್ಕೆ ಮಾರಕ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿ ಕಾರಿದರು.

ಅರಮನೆ ಮೈದಾನದಲ್ಲಿ ನಡೆದ ಜನಸೇವಕ ಸಮಾರೋಪ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು,ಕ ರ್ನಾಟಕ ಕಾಂಗ್ರಸ್ ಮುಕ್ತವಾಗಬೇಕು.ಮಹಾತ್ಮ ಗಾಂಧಿಯವರ ಕನಸು ನನಸು ಮಾಡಲು ಇಲ್ಲಿ ನಾವು ನೀವೆ ಲ್ಲಾ ಬಂದಿದ್ದೇವೆ.ಜಗತ್ತು ಮೆಚ್ಚುವ ಮಹಾನಾಯಕ ಮೋದಿ.ದೇಶವಿದೇಶ ಸುತ್ತಿ ಬಂದ್ರೂ ವಿಶ್ರಾಂತಿ ಮಾಡಿಲ್ಲ ಮೋದಿ.ಜಗತ್ತಿಗೇ ಮಾರ್ಗದರ್ಶನ ನೀಡುವ ನಾಯಕ ಪ್ರಧಾನಿ ಮೋದಿ.ಪ್ರಪಂಚದಲ್ಲೇ ದೊಡ್ಡ ಪಕ್ಷ ಬಿಜೆಪಿ.ಅ ವರ ಪರಿಶ್ರಮ ಬಹಳ ದೊಡ್ಡದು.ಅವರ ಹೋರಾಟದ ಮುಂದೆ ನಮ್ಮದು ಏನೂ ಇಲ್ಲ.ಆಯ್ಕೆ ಆಗಿರೋ ಸದ ಸ್ಯರು ನಿಮ್ಮ ಊರಿಗೆ ತೆರಳಿ ಹಿರಿಯರ ಆಶೀರ್ವಾದ ಪಡೆಯಿರಿ.ಪಕ್ಷ ಸಂಘಟನೆಗೆ ಅವರ ಸಹಕಾರ ಕೇಳಿ ಎಂದು ಅವರು ಕರೆ ನೀಡಿದರು. 

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಾವ ಬಗೆಯಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಅದೇ ಬಗೆಯಲ್ಲಿ ಪ್ರತಿಯಿಬ್ಬರು ಪಕ್ಷ ಕಟ್ಟುವ ಕೆಲಸ ಮಾಡಬೇಕು. ಚಿನ್ಹೆ ಇಲ್ಲದೆ ಗೆದ್ದ ನಾವು ಜಿಲ್ಲಾ ಪಂಚಾಯತ್ ಅನ್ನೂ ಗೆಲ್ಲಬೇಕು. ಪಕ್ಷ ಸಂಘಟನೆ ಮಾಡಬೇಕು, ಅದಕ್ಕಾಗಿ ಎಲ್ಲಿಗೇ ಕರೆದರೂ ಬರುತ್ತೇನೆ, ಆ ಮೂಲಕ ಕಾಂಗ್ರೆಸ್ ಗೆ ಒಂದು ಸಂದೇಶ ನಿಡಬೇಕಿದೆ ಎಂದರು.

ಅತಿ ಹೆಚ್ಚು ಸದಸ್ಯರನ್ನ ಹೊಂದಿದ ಪಕ್ಷ ನಮ್ಮದು. ಅತಿ ಹೆಚ್ಚು ಸಂಸದರನ್ನು ಹೊಂದಿದ ಪಕ್ಷದಲ್ಲಿ ನಾವಿದ್ದೇವೆ, ಪಂಚಾಯತಿ ಸದಸ್ಯರಾದ ನೀವು ಹಳ್ಳಿಗಳಿಗೆ ಸರ್ಕಾರಿ ಯೋಜನೆ ತಲುಪಿಸಬೇಕು. ಯಾವುದೇ ಭ್ರಷ್ಟಾಚಾರವಾಗದಂತೆ ಕೆಲಸ ಮಾಡಬೇಕು, ಹಳ್ಳಿಗಳಲ್ಲಿ ಕೆಲಸ ಮಾಡಿ ಯುವ ಮೋರ್ಚಾ ಗಟ್ಟಿಗೊಳಿಸಬೇಕು. ಪರಿಶಿಷ್ಟ ಜಾತಿ, ಪ<ಗಡ ಒಗ್ಗೂಡಿಸುವ ಕೆಲಸ ಆಗನೇಕು. ಮತದಾರರು ನಮ್ಮ ಪ್ರಭುಗಳು ಅವರ ಆಶಯದಿಂದ ನಾವಿಲ್ಲಿದ್ದೇವೆ. ಅವರ ಋಣ ತೀರಿಸಬೇಕು ಎಂದು ಕರೆ ನಿಡಿದರು.

ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ವಿಧಾನಸಭೆ ಚುನಾವಣೆಯಲ್ಲಿಯೂ ನಮ್ಮದೇ ಪರಿಶ್ರಮದಿಂದ ೧೫೦ಕ್ಕೂ ಹೆಚ್ಚು ಸೀಟು ಗೆಲ್ಲಬೇಕಿದೆ.ನಾಡು, ರಾಜ್ಯ ಕಟ್ಟುವ ಕೆಲಸ ಮಾಡಬೇಕು.  ಸಾಧನೆ ಮಾತಾಗಬೇಕು, ಮಾತೇ ಸಾಧನೆಯಾಗಬಾರದು ಇದನ್ನು ಅಳವಡಿಸಿಕೊಂಡಾಗ ಪ್ರಧಾನಿ ಮೋದಿ ಆಶಯ ಪೂರೈಸಲಿದೆ ಎಂದರು. 

Stay up to date on all the latest ರಾಜಕೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp