ಯೋಗೇಶ್ವರ್ ಒಬ್ಬ ಫ್ರಾಡ್: ವಿಶ್ವನಾಥ್ ಗರಂ; ಮಂತ್ರಿ ಸ್ಥಾನ ಸಿಗದಿದ್ದಕ್ಕೆ ರೇಣುಕಾಚಾರ್ಯ ಅಳಲು; ಸತೀಶ್ ರೆಡ್ಡಿ ಆಕ್ರೋಶ

ಸಂಪುಟ ವಿಸ್ತರಣೆ ವಿಸ್ತರಣೆ ಯಾಗುತ್ತಿರುವ ಬೆನ್ನಲ್ಲೇ ನಿರೀಕ್ಷೆಯಂತೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ.

Published: 13th January 2021 12:36 PM  |   Last Updated: 13th January 2021 01:05 PM   |  A+A-


Vishwanth and renukacharya

ವಿಶ್ವನಾಥ್ ಮತ್ತು ರೇಣುಕಾಚಾರ್ಯ

Posted By : Shilpa D
Source : Online Desk

ಬೆಂಗಳೂರು: ಸಂಪುಟ ವಿಸ್ತರಣೆ ವಿಸ್ತರಣೆ ಯಾಗುತ್ತಿರುವ ಬೆನ್ನಲ್ಲೇ ನಿರೀಕ್ಷೆಯಂತೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ.

ಸಂಪುಟ ವಿಸ್ತರಣೆಗಾಗಿ ಮಂದಿ ಶಾಸಕರ ಹೆಸರನ್ನು ರಾಜಭವನಕ್ಕೆ ಕಳುಹಿಸಿದ  ಬೆನ್ನಲ್ಲೇ ಆಕಾಂಕ್ಷಿಗಳ ಆಕ್ರೋಶದ ಕಟ್ಟೆಯೊಡೆದಿದೆ. ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನ ಸಿಗದಿದ್ದಕ್ಕೆ ಮಾಜಿ ಸಚಿವ ಎಚ್ ವಿಶ್ವನಾಥ್ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದಾರೆ.

ಸಂಪುಟ ವಿಸ್ತರಣೆಯಲ್ಲಿ ಯೋಗೇಶ್ವರ್ ಅವರಿಗೆ ಸ್ಥಾನ ನೀಡಿರುವುದಕ್ಕೆ ಬಹಿರಂಗವಾಗಿಯೇ ಅಕ್ರೋಶ ವ್ಯಕ್ತ ಪಡಿಸಿದ್ದಾರೆ. ಯೋಗೇಶ್ವರ್ ಒಬ್ಬ ಫ್ರಾಡ್, ಅವನಿಗೆ ಏಕೆ ಸ್ಥಾನ ನೀಡಿದ್ದೀರಾ,   ಅವನೇನಾದರೂ ರಾಜಿನಾಮೆ ನೀಡಿ ಬಂದಿದ್ದಾನಾ? ಅಥವಾ ಯಡಿಯೂರಪ್ಪ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದುಕೊಂಡಿದ್ದಾನಾ , ಯಡಿಯೂರಪ್ಪನವರೇ ನೀವು ಕೊಟ್ಟ ಮಾತಿಗೆ ತಪ್ಪಿದ್ದೀರಾ, ಸಿದ್ದಲಿಂಗೇಶ್ವರ ನಿಮಗೆ ಒಳ್ಳೆಯದು ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ  ಶಾಸಕ ರೇಣುಚಾರ್ಯ ನೇರವಾಗಿ ಬೇಸರ ವ್ಯಕ್ತಪಡಿಸಲು ಸಾಧ್ಯವಾಗದೆ ತಮ್ಮ ಅಳಲನ್ನು ಸುದ್ದಿಗಾರರ ಮುಂದೆ ತೋಡಿಕೊಂಡಿದ್ದಾರೆ. ಹೊನ್ನಾಳಿ ಕ್ಷೇತ್ರದ ಜನರೇ ನನಗೆ ದೇವರು, ನನ್ನ ಕ್ಷೇತ್ರದ ಜನ ನನ್ನ ಕೈ ಹಿಡಿದಿದ್ದಾರೆ. ನನಗೆ ಸಚಿವ ಸ್ಥಾನ ಸಿಗದಿರೋದಕ್ಕೆ ಕ್ಷೇತ್ರದ ಜನರೇ ಮುಂದೆ ಉತ್ತರ ಕೊಡ್ತಾರೆ. ಒಂದು ಬಾರಿ ನಾನು ಸೋತೆ ಅದು ನನ್ನ ಸ್ವಯಂ ಕೃತ ಅಪರಾಧ, ನನಗೆ ಸಾಮರ್ಥ್ಯ ಇಲ್ಲ, ಅಸಮರ್ಥ ನಾನು ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ನಾನು ಸೋತಾಗಲೂ 63 ಸಾವಿರ ಮತ ಪಡೆದಿದ್ದೆ. ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಲಾಬಿ ಮಾಡುವುದಿದ್ದರೆ ಬೆಂಗಳೂರಿನಲ್ಲೇ ಇರಬಹುದಿತ್ತು. ಆದರೆ, ಕ್ಷೇತ್ರದ ಜನರ ಬಳಿ ಇದ್ದೆ ಎಂದಿದ್ದಾರೆ. 

ಸಚಿವ ಸ್ಥಾನವೆಂದರೆ ಬರೀ ಬೆಂಗಳೂರು, ಬೆಳಗಾವಿಗಷ್ಟೇ ಸೀಮಿತವಾ? ರಾಜ್ಯದಲ್ಲಿ ಇವೇ ಎರಡು ಊರು ಇರುವುದಾ? ಭೌಗೋಳಿಕವಾಗಿ ಮಧ್ಯ ಕರ್ನಾಟಕದ ದಾವಣಗೆರೆ ಕಡೆಗಣಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಅನಂತಕುಮಾರ್  ಇಲ್ಲದಿರುವಿಕೆ ಎದ್ದು ಕಾಣುತ್ತಿದೆ ಎಂದು ಬೊಮ್ಮನಹಳ್ಳಿ ಶಾಸದ ಸತೀಶ್ ರೆಡ್ಡಿ ಕಿಡಿಕಾರಿದ್ದಾರೆ.
 


Stay up to date on all the latest ರಾಜಕೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp