ಸಂಪುಟದಲ್ಲಿ ಬೆಂಗಳೂರು-ಬೆಳಗಾವಿಗೆ ಸಿಂಹಪಾಲು: 5 ಪರಿಷತ್ ಸದಸ್ಯರಿಗೆ ಸ್ಥಾನ; ಒಕ್ಕಲಿಗ-ಲಿಂಗಾಯತರದ್ದೇ ಪಾರುಪತ್ಯ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಎರಡು ಸಮುದಾಯಗಳು ರಾಜಕೀಯ ಪ್ರಾಬಲ್ಯ ಹೊಂದಿವೆ. ಜೊತೆಗೆ ಶೇ.15.5 ರಷ್ಟು ವಿಧಾನ ಪರಿಷತ್ ಸದಸ್ಯರು ಈ ಬಾರಿ ಸಂಪುಟದಲ್ಲಿ ಸ್ಥಾನ ಪಡೆದಿದ್ದು ರಾಜ್ಯದ ಇತರ ಪ್ರದೇಶಗಳಿಗೆ ಅನ್ಯಾಯವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
Published: 14th January 2021 08:36 AM | Last Updated: 14th January 2021 08:36 AM | A+A A-

ಬಿಜೆಪಿ ನಾಯಕರು
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಎರಡು ಸಮುದಾಯಗಳು ರಾಜಕೀಯ ಪ್ರಾಬಲ್ಯ ಹೊಂದಿವೆ. ಜೊತೆಗೆ ಶೇ.15.5 ರಷ್ಟು ವಿಧಾನ ಪರಿಷತ್ ಸದಸ್ಯರು ಈ ಬಾರಿ ಸಂಪುಟದಲ್ಲಿ ಸ್ಥಾನ ಪಡೆದಿದ್ದು ರಾಜ್ಯದ ಇತರ ಪ್ರದೇಶಗಳಿಗೆ ಅನ್ಯಾಯವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
33 ಮಂದಿಯ ಸಚಿವ ಸಂಪುಟದಲ್ಲಿ ಸಿಎಂ ಯಡಿಯೂರಪ್ಪ ಸೇರಿದಂತೆ 7 ಲಿಂಗಾಯತ ಮತ್ತು 7 ಒಕ್ಕಲಿಗ ಶಾಸಕರು ಸಚಿವ ಸ್ಥಾನ ಪಡೆದಿದ್ದಾರೆ. ಅಂದರೆ ಸಂಪುಟದ ಶೇ,51.51 ರಷ್ಟು, ಎರಡು ಸಮುದಾಯಗಳು ರಾಜಕೀಯವಾಗಿ ಪ್ರಾಬಲ್ಯ ಹೊಂದಿದ್ದು, ರಾಜ್ಯದ ಜನಸಂಖ್ಯೆಯ ಶೇ.32 ರಷ್ಟಿದೆ.ಎರಡು ಜಾತಿಗಳ ಅತಿಯಾದ ಪ್ರಾತಿನಿಧ್ಯವು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರಲ್ಲಿ ಚಡಪಡಿಕೆ ಸೃಷ್ಟಿಸಿದೆ.
ಸಂಪುಟದಲ್ಲಿ ಅಸಮತೋಲನ ಕೇವಲ ಜಾತಿಗೆ ಮಾತ್ರ ಸೀಮಿತವಾಗಿಲ್ಲ, ದಾವಣಗೆರೆ ಜಿಲ್ಲೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮತ್ತು ಮೈಸೂರಿನ ಎಸ್ ಎ ರಾಮದಾಸ್ ತಮ್ಮ ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡದೇ ಪ್ರಾದೇಶಿಕ ಅಸಮತೋಲನ ಸೃಷ್ಟಿಸಿದ್ದಾರೆಂದು ಆರೋಪ ಮಾಡಿದ್ದಾರೆ.
ಕ್ಯಾಬಿನೆಟ್ ಮಂತ್ರಿಗಳಲ್ಲಿ ಎಂಟು ಮಂದಿ ಬೆಂಗಳೂರಿನವರು ಮತ್ತು ಬೆಳಗಾವಿ ಪ್ರದೇಶದ ಐವರು ಮಂತ್ರಿಮಂಡಲದ ಶೇಕಡಾ 39.9 ರಷ್ಟಿದ್ದಾರೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಶಾಸಕರುಗಳಿಗೆ ನ್ಯಾಯ ಒದಗಿಸುವ ಸಲುವಾಗಿ ಬಿಎಸ್ ಯಡಿಯೂರಪ್ಪ ಮಾಡಿದ ನಿರ್ಧಾರದಿಂದ ಪ್ರಾದೇಶಿಕ ಮತ್ತು ಜಾತಿ ಅಸಮತೋಲನ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಜಾತಿ ಮತ್ತು ಪ್ರಾದೇಶಿಕ ಅಸಮತೋಲನದ ಹೊರತಾಗಿಯೂ ಐವರು ವಿಧಾನ ಪರಿಷತ್ ಸದಸ್ಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಸೋತವರನ್ನು ಮಂತ್ರಿ ಮಾಡಿದ್ದಾರೆ, ಜೊತೆಗೆ ಹೋರಾಡಿ ಗೆದ್ದವರನ್ನು ಕಾಯುವಂತೆ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಚ್ರೀಯ ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರು ಬೇಸರ ವ್ಯಕ್ತ ಪಡಿಸಿದ್ದಾರೆ.
ಸಿಪಿ ಯೋಗೇಶ್ವರ್, ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಒಟ್ಟು ಐವರು ಪರಿಷತ್ ಸದಸ್ಯರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. 33 ಸದಸ್ಯರ ಸಂಪುಟದಲ್ಲಿ 12 ಶಾಸಕರು ಜೆಡಿಎಸ್ ಮತ್ತು ಕಾಂಗ್ರೆಸ್ ತೊರೆದು ಬಂದವರಾಗಿದ್ದಾರೆ.