ಪಕ್ಷ ಪುನರ್ರಚನೆ, ಬಲವರ್ಧನೆಗಾಗಿ ಜ.18ಕ್ಕೆ ಜೆಡಿಎಸ್ ಸಭೆ

ಜೆಡಿಎಸ್ ಸ್ಥಾನ ಕೆಳಗಿರಬಹುದು ಆದರೆ ಎಂದಿಗೂ ಹೊರಗುಳಿಯುವಿದಿಲ್ಲ ಎನ್ನುವುದನ್ನು ಖಚಿತವಾಗಿಸಲು ಸೋಮವಾರ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ 35 ಉನ್ನತ  ಮುಖಂಡರು ಒಟ್ಟಾಗಿ ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

Published: 17th January 2021 08:34 AM  |   Last Updated: 17th January 2021 08:47 AM   |  A+A-


ಎಚ್ ಡಿ ಕುಮಾರಸ್ವಾಮಿ

Posted By : Raghavendra Adiga
Source : The New Indian Express

ಬೆಂಗಳೂರು: ಜೆಡಿಎಸ್ ಸ್ಥಾನ ಕೆಳಗಿರಬಹುದು ಆದರೆ ಎಂದಿಗೂ ಹೊರಗುಳಿಯುವಿದಿಲ್ಲ ಎನ್ನುವುದನ್ನು ಖಚಿತವಾಗಿಸಲು ಸೋಮವಾರ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ 35 ಉನ್ನತ  ಮುಖಂಡರು ಒಟ್ಟಾಗಿ ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌ಡಿ ದೇವೇಗೌಡ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ವಿಧಾನಸಭೆಯಉಪಾಧ್ಯಕ್ಷ ಬಂಡೆಪ್ಪ ಕಾಶಂಪೂರ್, ಪಕ್ಷದ ರಾಜ್ಯಾಧ್ಯಕ್ಷ  ಎಚ್‌.ಕೆ.ಕುಮಾರಸ್ವಾಮಿ, ಮಾಜಿ ಶಾಸಕ ಮತ್ತು ವಕ್ತಾರ ವೈಎಸ್‌ವಿ ದತ್ತ, ಎಂಎಲ್‌ಸಿ ಬಸವರಾಜ್ ಹೊರಟ್ಟಿ ಮತ್ತಿತರ ಶಾಸಕರು, ಎಂಎಲ್‌ಸಿಗಳು ಮತ್ತು ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ, “ನಾವು ಪಕ್ಷದ ಮೂಲ ಘಟಕವನ್ನು ಪುನರ್ರಚಿಸಲು ಯೋಜಿಸಿದ್ದೇವೆ ಮತ್ತು ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು,  ಯುವಕರು ಮತ್ತು ಇತರರ ಸಹಯೋಗವನ್ನೂ ಹೊಂದಿದ್ದೇವೆ. ಪಕ್ಷದ ರಚನಾತ್ಮಕ ಸ್ಥಾನಗಳಿಂದ ಪಕ್ಷದ ಬಗೆಗೆ ಅಸಡ್ಡೆ ತೋರುವ ಕೆಲವರನ್ನು ಕೆಳಗಿಳಿಸಲು  ನಾವು ಪ್ರಯತ್ನಿಸುತ್ತಿದ್ದೇವೆ. ’’ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷವು ತನ್ನ ಭದ್ರಕೋಟೆಗಳಲ್ಲಿ ಸಮರ್ಥ ಹೋರಾಟ ನೀಡಿದ ನಂತರ ಈಗ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳ ಮೇಲೆ  ಗಮನ ಕೇಂದ್ರೀಕರಿಸುತ್ತದೆ.

"ಈ ಸಭೆಯು ಕೋರ್ ಸಮಿತಿಯನ್ನು ಒಗ್ಗೂಡಿಸುವುದಕ್ಕಾಗಿ ಮುಖ್ಯವಾಗಿದೆ. . ನಾವು ಜಿಲ್ಲಾ ಮತ್ತು ರಾಜ್ಯ ಘಟಕಗಳನ್ನು ಪುನರ್ರಚಿಸುತ್ತೇವೆ. ಅಧಿವೇಶನ ಮುಗಿದ ನಂತರ ಫೆಬ್ರವರಿ 5 ರ ನಂತರ ನಾನು ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ”  ಎಚ್ ಕೆ ಕುಮಾರಸ್ವಾಮಿ, ಹೇಳಿದರು. ಪಕ್ಷವು 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ತನ್ನನ್ನು ತಾನು ಮರುಸಂಘಟಿಸಿಕೊಳ್ಲಲು ಪ್ರಯತ್ನಿಸುತ್ತಿದ್ದು ಆ ಚುನಾವಣೆಯಲ್ಲಿ  ಪ್ರಮುಖ ಪಾತ್ರ ವಹಿಸಲು ಪ್ರಯತ್ನಿಸುತ್ತದೆ, ಕಳೆದ ಚುನಾವಣೆಗಳಲ್ಲಿ ಪಕ್ಷವು 30ಕ್ಕೂ ಹೆಚ್ಚಿನ ಸ್ಥಾನವನ್ನು  2,000 ಮತಗಳ ಅಂತರದಿಂದ ಕಳೆದುಕೊಂಡಿದ್ದಾಗಿ ಗಮನಿಸಿದೆ. ಸಭೆಯಲ್ಲಿ ಬಂಡಾಯ ನಾಯಕರಾದ ಜಿಟಿ ದೇವೇಗೌಡ ಹಾಗೂ ಇತರರ ಬಗೆಗೆ ಚರ್ಚೆ ನಡೆಯಬಹುದು.

“ನಾವು ಪಕ್ಷದ ಬೈಲಾಗಳಲ್ಲಿ ಕೆಲವು ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ, ಇದಕ್ಕಾಗಿ ನಮಗೆ ಚುನಾವಣಾ ಆಯೋಗದ ಅನುಮತಿ ಬೇಕು. ನಾವು ಆ ವಿಷಯದ ಬಗ್ಗೆಯೂ ಚರ್ಚಿಸುತ್ತೇವೆ. ”  ಎಚ್ ಡಿ ಕುಮಾರಸ್ವಾಮಿ, ಹೇಳಿದ್ದಾರೆ.

“ಜೆಡಿಎಸ್ ಬಗ್ಗೆ ಆತಂಕಕ್ಕೆ ಒಂದು ಪ್ರಮುಖ ಕಾರಣ ಅಲ್ಪಸಂಖ್ಯಾತರ ಬೆಂಬಲದ ಸವಕಳಿ, . ಪಂಚಾಯತ್ ಚುನಾವಣೆಗೆ ಮುಂಚಿತವಾಗಿ ಬಿ ಎಸ್ ಯಡಿಯೂರಪ್ಪ ಅವರಿಗೆ ಎಚ್ ಡಿ ಕುಮಾರಸ್ವಾಮಿ ಅವರ ಸ್ನೇಹಪರ ಮಾತು ಹಾಗೂ ಅದಕ್ಕೆ ದೇವೇಗೌಡರು ನೀಡಿದ ಪ್ರತ್ಯುತ್ತರವನ್ನು ನಾವಿಲ್ಲಿ ನೆನೆಯಬೇಕು. ಹಳೆ ಮೈಸೂರು ಬಾಗದಲ್ಲಿ ಈಗ ಬಿಜೆಪಿ ಒಕ್ಕಲಿಗೆ ನಾಯಕರನ್ನು ಸೆಳೆಯುತ್ತಿದೆ.  ಒಕ್ಕಲಿಗರು ಜೆಡಿಎಸ್ ನ ಪ್ರಮುಖ ಮತದಾರರಾದ ಕಾರಣ ಪಕ್ಷ ಆ ನಿಟ್ಟಿನಲ್ಲಿ ಚಿಂತಿಸಬೇಕು,   ದೀರ್ಘಾವಧಿಯಲ್ಲಿ, ಬಿಜೆಪಿ ಜೆಡಿಎಸ್ ಮತದಾರರ ಮೇಲೆ ಕಣ್ಣಿಟ್ಟಿದೆ. ಇದನ್ನು ಗ್ರಹಿಸಿದ ದೇವೇಗೌಡ ಹಾಗೂ ಕುಮಾರಸ್ವಾಮಿ  ಪಕ್ಷವನ್ನು ಒಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಕಾರ್ಯಕರ್ತರು ಮತ್ತು ಮತದಾರರನ್ನು ಆಕರ್ಷಿಸುವಲ್ಲಿ ಅವರ ಅಸಮರ್ಥತೆಯಿಂದಾಗಿ ಅವರು ತಮ್ಮ ಸಾಂಪ್ರದಾಯಿಕ ಬೆಂಬಲ ಸಿಕ್ಕುವ ನೆಲೆಯನ್ನು ಭದ್ರವಾಗಿರಿಸಲು ಯತ್ನಿಸಿದ್ದಾರೆ" ರಾಜಕೀಯ ವಿಶ್ಲೇಷಕ ಬಿ ಎಸ್ ಮೂರ್ತಿ ಹೇಳಿದ್ದಾರೆ. 
 


Stay up to date on all the latest ರಾಜಕೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp