'ನಿಮಗೆ ಮುಕ್ತ ಸ್ವಾತಂತ್ರ್ಯವಿದೆ, ಚೆನ್ನಾಗಿ ಆಡಳಿತ ನಡೆಸಿ, ಪಕ್ಷದೊಳಗಿನ ಸಮಸ್ಯೆ ಬಗೆಹರಿಸಿ': ಸಿಎಂ ಯಡಿಯೂರಪ್ಪ ಗೆ ಅಮಿತ್ ಶಾ

ನಿಮಗೆ ಆಡಳಿತ ನಡೆಸಲು ಮುಕ್ತ ಸ್ವಾತಂತ್ರ್ಯವಿದೆ. ನೀವು ಪಕ್ಷವನ್ನು ಮುನ್ನಡೆಸಿ ಪಕ್ಷದೊಳಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ, ಇದು ಎರಡು ದಿನಗಳ ರಾಜ್ಯ ಭೇಟಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ನೀಡಿರುವ ಸ್ಪಷ್ಟ ಸಂದೇಶ.

Published: 18th January 2021 08:02 AM  |   Last Updated: 18th January 2021 12:24 PM   |  A+A-


Amit Shah

ಅಮಿತ್ ಶಾ

Posted By : Sumana Upadhyaya
Source : The New Indian Express

ಬೆಂಗಳೂರು: ನಿಮಗೆ ಆಡಳಿತ ನಡೆಸಲು ಮುಕ್ತ ಸ್ವಾತಂತ್ರ್ಯವಿದೆ. ನೀವು ಪಕ್ಷವನ್ನು ಮುನ್ನಡೆಸಿ ಪಕ್ಷದೊಳಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ, ಇದು ಎರಡು ದಿನಗಳ ರಾಜ್ಯ ಭೇಟಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ನೀಡಿರುವ ಸ್ಪಷ್ಟ ಸಂದೇಶ.

ಇತ್ತೀಚೆಗೆ ರಾಜ್ಯ ಸಚಿವ ಸಂಪುಟಕ್ಕೆ ಏಳು ನೂತನ ಸಚಿವರ ಸೇರ್ಪಡೆ ನಂತರ ಒಂದಷ್ಟು ಗೊಂದಲಗಳು, ಅಸಮಾಧಾನಗಳು ಭುಗಿಲೆದ್ದವು. ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರಲ್ಲಿ ಕೆಲವರು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆ ಟೀಕಿಸಿದರು. ಅಮಿತ್ ಶಾ ಅವರ ಬಳಿ ಮುಖ್ಯಮಂತ್ರಿ ವಿರುದ್ಧ ದೂರು ಸಲ್ಲಿಸಬೇಕು ಎಂಬ ಆಲೋಚನೆಯಲ್ಲಿ ನಾಯಕರಿದ್ದರು. ಈ ಸಮಯದಲ್ಲಿ ಅಮಿತ್ ಶಾ ಭೇಟಿ ಮಹತ್ವದ್ದಾಗಿತ್ತು. ಇದೀಗ ಯಡಿಯೂರಪ್ಪನವರ ಆಡಳಿತವನ್ನು ಹಾಡಿಹೊಗಳಿದ ಅಮಿತ್ ಶಾ ಅವರು ಹೈಕಮಾಂಡ್ ಅವರ ಪರವಾಗಿದೆ, ಪಕ್ಷದಲ್ಲಿ ಎಲ್ಲರೂ ಸಾಮರಸ್ಯದಿಂದ ನಡೆದುಕೊಂಡು ಹೋಗಬೇಕು ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಪಕ್ಷದಲ್ಲಿ ನಾಯಕರಿಗೆ ಏನೇ ಅಸಮಾಧಾನ, ಅತೃಪ್ತಿ ಇದ್ದರೂ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳಬಾರದು, ಪಕ್ಷದೊಳಗೆ ಅದನ್ನು ಬಗೆಹರಿಸಿಕೊಳ್ಳಬೇಕು ಎಂದಿರುವುದು ಯಡಿಯೂರಪ್ಪನವರ ಮೇಲೆ ಹೈಕಮಾಂಡ್ ಗೆ ಹೆಚ್ಚು ನಂಬಿಕೆ, ವಿಶ್ವಾಸ ಬಂದಿದೆ, ಅವರು ಇನ್ನೂ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಉಳಿಯುವುದು ಖಚಿತ ಎಂಬುದು ಕಾಣುತ್ತಿದೆ. ಅಲ್ಲದೆ ಪಕ್ಷದೊಳಗಿನ ಅತೃಪ್ತ ಶಾಸಕರನ್ನು ಅವರು ಸಮಾಧಾನಪಡಿಸಬೇಕೆಂದು ಅಮಿತ್ ಶಾ ಅವರು ಹೇಳಿದಂತಿದೆ.

ಕಳೆದ ಶನಿವಾರ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿತ್ತು. ಯಡಿಯೂರಪ್ಪ ವಿರುದ್ಧದ ಸಾರ್ವಜನಿಕ ಆರೋಪಗಳು ಮತ್ತು ಟೀಕೆಗಳು ಕೇಳಿಬರುತ್ತಿರುವ ಬಗ್ಗೆ ನಿಧಿ ಹಂಚಿಕೆ, ಭ್ರಷ್ಟಾಚಾರ, ಆಡಳಿತದಲ್ಲಿ ಹಸ್ತಕ್ಷೇಪ, ಮುಖ್ಯಮಂತ್ರಿ ಕಚೇರಿಗೆ ಸುಲಭವಾಗಿ ಪ್ರವೇಶ ಸಿಗುತ್ತಿಲ್ಲ  ಎಂಬ ಕೆಲವರ ಆರೋಪ, ಮಂಡಳಿಗಳು ಮತ್ತು ನಿಗಮಗಳು ಸೇರಿದಂತೆ ಹುದ್ದೆಗಳ ಆಯ್ಕೆಗಳ ಬಗ್ಗೆ ಶಾಸಕರು ಎತ್ತಿದ ಕಳವಳಗಳ ಬಗ್ಗೆ ಅಮಿತ್ ಶಾ ಅವರು ಮೌಲ್ಯಮಾಪನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp