ಕಾಂಗ್ರೆಸ್ ಹೇಳೋದನ್ನು ನಂಬಬೇಡಿ, ಸರದಿ ಬಂದಾಗ ಲಸಿಕೆ ಪಡೆಯಿರಿ: ಅಮಿತ್ ಶಾ

ಭಾರತದಲ್ಲಿ ಅಭಿವೃದ್ಧಿಪಡಿಸಿದ ಎರಡೂ ಕೋವಿಡ್ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಜನರಿಗೆ ಭರವಸೆ ನೀಡಿದ್ದಾರೆ. 

Published: 18th January 2021 09:04 AM  |   Last Updated: 18th January 2021 12:38 PM   |  A+A-


ಅಮಿತ್ ಶಾ

Posted By : Raghavendra Adiga
Source : The New Indian Express

ಬೆಳಗಾವಿ: ಭಾರತದಲ್ಲಿ ಅಭಿವೃದ್ಧಿಪಡಿಸಿದ ಎರಡೂ ಕೋವಿಡ್ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಕೇಂದ್ರ  ಗೃಹ ಸಚಿವ ಅಮಿತ್ ಶಾ ದೇಶದ ಜನರಿಗೆ ಭರವಸೆ ನೀಡಿದ್ದಾರೆ. ಎರಡು ಲಸಿಕೆಗಳಾದ ಕೋಬ್ಯಾಕ್ಸೀನ್ ಹಾಗೂ ಕೋವಿಶೀಲ್ಡ್ ಪ್ರಯೋಗಗಳು ಯಶಸ್ವಿಯಾದ ನಂತರ ಅವುಗಳ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ದೇಶಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿರುವ ಈ ಸಮಯದಲ್ಲಿ ಈ ಎರಡೂ ಲಸಿಕೆಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಭಾನುವಾರ ಸಂಜೆ ಇಲ್ಲಿ ಬಿಜೆಪಿಯ ಜನಸೇವಕ್ ಸಮಾವೇಶ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಚಿವ ಶಾ "ಜನರು ಕಾಂಗ್ರೆಸ್ ನವರು ಹೇಳಿದುದನ್ನು ಕೇಳಿ ಲಸಿಕೆ ಬಗೆಗೆ ಯಾವುದೇ ಅಪನಂಬಿಕೆ ತಾಳಬಾರರು.ಯಾವುದೇ ಭಯವಿಲ್ಲದೆ ವ್ಯಾಕ್ಸಿನೇಷನ್ ಮಾಡಿಕೊಳ್ಳಿ ಎಂದರು. ವ್ಯಾಕ್ಸಿನೇಷನ್ ಡ್ರೈವ್ ಅನ್ನು ವಿರೋಧಿಸಿಸುತ್ತಿರುವ ಕಾಂಗ್ರೆಸ್ ಕುರಿತು ವಾಗ್ದಾಳಿ ನಡೆಸಿದ ಸಚಿವರು "ಕಾಂಗ್ರೆಸ್ಸಿಗೆ  ಏನೂ ಮಾಡಲು ಸಾಧ್ಯವಿಲ್ಲ ಎಂದು ನಮಗೆ (ಬಿಜೆಪಿ) ತಿಳಿದಿದೆ. ಆದರೆ ಅದು ಜನರಿಗೆ ಏನಾದರೂ ಒಳ್ಳೆಯದನ್ನು ಮಾಡುತ್ತಿರುವ ವ್ಯಕ್ತಿನ್ನು ತಡೆಯಲು ಯತ್ನಿಸಬಾರದು.ವ್ಯಾಕ್ಸಿನೇಷನ್ ಡ್ರೈವ್ ಯಶಸ್ವಿಯಾಗಲು ಪ್ರಧಾನಿ ಮೋದಿ ಅವರೇ ಕಾರಣವಾಗಿದ್ದಾರೆ., ”ಎಂದು ಅವರು ಹೇಳಿದರು.

“ಕಾಂಗ್ರೆಸ್ ಹೇಳುವುದನ್ನು ನಂಬಬೇಡಿ. ನಿಮ್ಮ ಸರದಿ ಬಂದಾಗ, ದಯವಿಟ್ಟು ಲಸಿಕೆ ಪಡೆಯಿರಿ ಮತ್ತು ಭಾರತ ಶೀಘ್ರದಲ್ಲೇ ಕೊರೋನಾಮುಕ್ತ ದೇಶವಾಗಲಿದೆ, ”ಎಂದು ಅವರು ಹೇಳಿದರು. ಕೋವಿಡ್ ಬಿಕ್ಕಟ್ಟು ದೇಶವನ್ನು ಆವರಿಸಿದಾಗ , ಆರಂಭದಲ್ಲಿ 130 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂತಹ ದೇಶಅದನ್ನು ಹೇಗೆ ನಿಭಾಯಿಸುತ್ತದೆ ಎಂಬ ಬಗ್ಗೆ ವಿಶ್ವದಾದ್ಯಂತ  ಚರ್ಚೆ ನಡೆದಿತ್ತು. ಮೋದಿಯವರ ನಾಯಕತ್ವದಲ್ಲಿ, ಕೋವಿಡ್ ಬಿಕ್ಕಟ್ಟು ಎಷ್ಟು ಪರಿಣಾಮಕಾರಿಯಾಗಿ ನಿರ್ವಹಣೆಯಾಗಿದೆ ಎಂದರೆ ಕನಿಷ್ಠ ಸಾವುಗಳನ್ನು ದಾಖಲಿಸಿದ ಅನೇಕ ರಾಷ್ಟ್ರಗಳ ಪೈಕಿ ಭಾರತ ಸಹ ಒಂದಾಗಿದೆ. ಅದೇ ವೇಳೆ ಚೇತರಿಕೆಯ ಪ್ರಮಾಣವು ಉತ್ತಮವಾಗಿದೆ"ಅವರು ಹೇಳಿದರು.  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ  ಅವರನ್ನು ಅಭಿನಂದಿಸಿದ ಶಾ ರಾಜ್ಯದಲ್ಲಿ ಕೋವಿಡ್  ಪರಿಸ್ಥಿತಿಯನ್ನು  ಪರಿಣಾಮಕಾರಿಯಾಗಿ ನಿಭಾಯಿಸಿದ ಕಾರಣಕ್ಕೆ ಅವರು ಶ್ಲಾಘನೀಯರೆಂದಿದ್ದಾರೆ.

ರಾಜ್ಯದ ಅಭಿವೃದ್ಧಿಯ ಮುಂಚೂಣಿಯಲ್ಲಿರಲು  ಯಡಿಯೂರಪ್ಪ ಅವರ ಕೆಲವು ಪ್ರಮುಖ ಉಪಕ್ರಮಗಳು ಕಾರಣವೆಂದು  ಮೆಚ್ಚುಗೆ ವ್ಯಕ್ತಪಡಿಸುತ್ತಾ, ಕೊಪ್ಪಳದಲ್ಲಿ ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಬರಲಿರುವುದನ್ನು ಶಾ ಪ್ರಸ್ತಾಪಿಸಿದ್ದಾರೆ. "ದೇಶಾದ್ಯಂತ ಮಕ್ಕಳು ಕೊಪ್ಪಳ ಆಟಿಕೆಗಳೊಂದಿಗೆ ಆಡುತ್ತಾರೆ ಮತ್ತು ನಾವು ಚೀನಾದಿಂದ  ಆಟಿಕೆ ಖರೀದಿಸುವುದು ನಿಲ್ಲಿಸಬಹುದು." ಅವರು ಹೇಳಿದರು. 2014 ರಿಂದ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಕೆಲವು ಪ್ರಮುಖ ಉಪಕ್ರಮಗಳನ್ನು ನೆನಪಿಸಿಕೊಂಡ ಶಾ, “ಕಳೆದ 70 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ತೆಗೆದುಹಾಕಲು ಯಾರೂ ಧೈರ್ಯ ಮಾಡಲಿಲ್ಲ. ಕೊನೆಗೆ ಇದನ್ನು ಬಿಜೆಪಿ ಸರ್ಕಾರ ಸಾಧಿಸಿದೆ. ” ಎಂದರು.

ರಾಮಮಂದಿರದ 550 ವರ್ಷಗಳ ಹಳೆಯ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರಕ್ಕೆ ಸಾಧ್ಯವಾಗಿದೆ ಎಂದು ಶಾ ಹೇಳಿದರು. "ಮುಂದಿನ ಕೆಲವು ವರ್ಷಗಳಲ್ಲಿ ಅಯೋಧ್ಯೆಯಲ್ಲಿ ಬೃಹತ್ ರಾಮ ಮಂದಿರ ನಿರ್ಮಾಣವಾಗಲಿದೆ. ಎಂದು ನಾನು ಈ ದೇಶದ ಜನರಿಗೆ ಭರವಸೆ ನೀಡುತ್ತೇನೆ," ಎಂದು ಅವರು ಹೇಳಿದರು. 2022 ರ ವೇಳೆಗೆ ದೇಶದ ಪ್ರತಿ ನಿವಾಸಿಗೆ  ಮನೆಗಳನ್ನು ಒದಗಿಸಲು ಕೇಂದ್ರ ಬದ್ದವಾಗಿದೆ.  ದೇಶದ ಎಲ್ಲಾ 130 ಕೋಟಿ ಜನ ದೇಶದಲ್ಲಿ ತಯಾರಾದ ಎಲ್ಲಾ ಉತ್ಪನ್ನಗಳನ್ನು  ಬಳಸಿಕೊಳ್ಳಲು ಸಂಕಲ್ಪ ಮಾಡಬೇಕೆಂದು ಅವರು ಮನವಿ ಮಾಡಿದರು. ಈ ಮೂಲಕ ಪ್ರಧಾನಮಂತ್ರುಗಳ ಆತ್ಮ ನಿರ್ಭರ್ ಕನಸು ಸಾಕಾರಗೊಳಿಸಿ ಎಂದು ಶಾ ಕರೆ ಕೊಟ್ಟರು.
 

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp