ಸಿದ್ದರಾಮಯ್ಯ ಆರ್ ಎಸ್ಎಸ್ ನಲ್ಲಿದ್ರಾ? ಸಂಘದ ಜವಾಬ್ದಾರಿ ವಹಿಸಿದ್ರಾ? ಬಿಜೆಪಿ ಉಸಾಬರಿ ಅವರಿಗೇಕೆ?

ಸಿದ್ದರಾಮಯ್ಯ ಈ ಹಿಂದೆ ಏನಾದ್ರೂ ಆರ್‌ಎಸ್‌ಎಸ್‌ನಲ್ಲಿ ಇದ್ರಾ..? ಸಂಘದ ಜವಾಬ್ದಾರಿ ವಹಿಸಿದ್ರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

Published: 18th January 2021 09:10 AM  |   Last Updated: 18th January 2021 09:31 AM   |  A+A-


siddaramaiah

ಸಿದ್ದರಾಮಯ್ಯ

Posted By : Shilpa D
Source : The New Indian Express

ಬೆಳಗಾವಿ: ಸಿದ್ದರಾಮಯ್ಯ ಈ ಹಿಂದೆ ಏನಾದ್ರೂ ಆರ್‌ಎಸ್‌ಎಸ್‌ನಲ್ಲಿ ಇದ್ರಾ..? ಸಂಘದ ಜವಾಬ್ದಾರಿ ವಹಿಸಿದ್ರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

ಏಪ್ರಿಲ್‌ ಬಳಿಕ ಬಿಎಸ್‌ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ. ಈ ಬಗ್ಗೆ ನನಗೆ ಆರ್‌ಎಸ್‌ಎಸ್‌ ಮೂಲಗಳು ಮಾಹಿತಿ ನೀಡಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್  ಮುಖ್ಯಮಂತ್ರಿ ಬದಲಾವಣೆ ವಿಚಾರ ಎಲ್ಲೂ ಪ್ರಸ್ತಾಪವಾಗಿಲ್ಲ ಎಂದು  ತಿರುಗೇಟು ನೀಡಿದ್ದಾರೆ.

ಗೋಮಾಂಸ ತಿನ್ನುವವರ ಜೊತೆಗೆ ಆರ್‌ಎಸ್‌ಎಸ್‌ ನಾಯಕರೂ ಮಾತನಾಡಲು ಸಾಧ್ಯವೇ..? ಸಿದ್ದರಾಮಯ್ಯ ಈ ಹಿಂದೆ ಏನಾದ್ರು ಆರ್‌ಎಸ್‌ಎಸ್‌ನಲ್ಲಿ ಇದ್ದರಾ ಅಥವಾ ಸಂಘದ ಜವಾಬ್ದಾರಿ ವಹಿಸಿದ್ರಾ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆ ಫೋನ್‌ನಲ್ಲಿ ಮಾತನಾಡಿದ್ದಾರಾ..? ಸಿದ್ದರಾಮಯ್ಯ ಅವರನ್ನು ರಾಹುಲ್ ಗಾಂಧಿ ಕಾಂಗ್ರೆಸ್‌ನಿಂದ ಹೊರಗೆ ಇಟ್ಟಿದ್ದಾರೆ ಎಂದು ಟೀಕಿಸಿದರು.

ಇನ್ನು, ಇದೇ ವಿಚಾರವಾಗಿ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್‌ ಕೋರೆ, ಸಿದ್ದರಾಮಯ್ಯ ಅವರ ಆರ್‌ಎಸ್‌ಎಸ್‌ ಬೇರೆ ಇರಬಹುದು. ಆದರೆ, ಅಮಿತ್‌ ಶಾ ಅವರೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಟಾಂಗ್‌ ನೀಡಿದರು. 

ಬೆಳಗಾವಿ ಲೋಕಸಭೆ ಉಪ ಚುನಾವಣಗೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಭಾಕರ್ ಕೋರೆ ಭೇಟಿ ಮಾಡಿ ಚರ್ಚಿಸಿದ್ದಾರೆ. ತಮಗೆ ಟಿಕೆಟ್ ನೀಡುವಂತೆ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
 

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp