ನನ್ನ ಹಾಗೂ ಪಕ್ಷದ ತಂಟೆಗೆ ಬಂದರೆ ಹುಷಾರ್: ಮುಖ್ಯಮಂತ್ರಿ ಬಿಎಸ್ ವೈಗೆ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ!

ಜೆಡಿಎಸ್ ಪಕ್ಷದ ಸುದ್ದಿಗೆ ಬರಬೇಡಿ.ನನ್ನ ಸುದ್ದಿಗೆ ಬಂದರೆ ಸರಿ ಇರುವುದಿಲ್ಲ. ಹೇಗೋ ಸುಭದ್ರವಾಗಿದ್ದೀರಿ. ನಾನು ಕೈ ಹಾಕಿದರೆ ಸರಿ ಇರಲ್ಲ.ನನ್ನ ತಂಟೆಗೆ ಬಂದರೆ ಹುಷಾರ್.’ಹೀಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

Published: 19th January 2021 12:23 AM  |   Last Updated: 19th January 2021 12:19 PM   |  A+A-


HDKumaraswamy1

ಎಚ್ ಡಿ ಕುಮಾರಸ್ವಾಮಿ

Posted By : Nagaraja AB
Source : UNI

ಬೆಂಗಳೂರು: ಜೆಡಿಎಸ್ ಪಕ್ಷದ ಸುದ್ದಿಗೆ ಬರಬೇಡಿ.ನನ್ನ ಸುದ್ದಿಗೆ ಬಂದರೆ ಸರಿ ಇರುವುದಿಲ್ಲ. ಹೇಗೋ ಸುಭದ್ರವಾಗಿದ್ದೀರಿ. ನಾನು ಕೈ ಹಾಕಿದರೆ ಸರಿ ಇರಲ್ಲ. ನನ್ನ ತಂಟೆಗೆ ಬಂದರೆ ಹುಷಾರ್.’ಹೀಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಲಕ್ಷಾಂತರ ಕಾರ್ಯಕರ್ತರ ಶಕ್ತಿ ಇರುವ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕೂಲ ಪರಿಸ್ಥಿತಿ ಎದುರಿಸಬೇಕಾಗುತ್ತದೆ.ಜೆಡಿಎಸ್ ಮುಗಿಸಲು ಯಡಿಯೂರಪ್ಪ ಇನ್ನೊಂದು ಜನ್ಮ ಹುಟ್ಟಿಬಂದರೂ ಆಗುವುದಿಲ್ಲ.ಈವ ರೆಗೆ ನನ್ನ ಪಕ್ಷದ ತಂಟೆಗೆ ಬಂದಿಲ್ಲ.ನನ್ನ ತಂಟೆಗೆ ಬಂದರೆ ಹುಷಾರ್.ನಿಮ್ಮ ಬಂಡವಾಳ ನನ್ನ ಕೈಯಲ್ಲಿದೆ ಎಂದು ಟೀಕಾಪ್ರಹಾರ ನಡೆಸಿದರು.

೨೦೦೮ರಲ್ಲಿಯೇ ಜೆಡಿಎಸ್ ಮುಗಿಸುತ್ತೇನೆ, ಅಪ್ಪ-ಮಗನನ್ನು ಮುಗಿಸುವುದಾಗಿ ಹೇಳಿದ್ದರು. ಬಳಿಕ ರಾಜ ಕಾರಣ ಏನಾಯಿತು ಗೊತ್ತಿದೆಯಾ? ಮೂವರು ಮುಖ್ಯಮಂತ್ರಿ ಬದಲಾದರು. ಜೆಡಿಎಸ್ ನಿರ್ನಾಮ ಮಾಡುತ್ತೇವೆ ಎಂದು ಹೇಳಿದವರು ಎಲ್ಲೆಲ್ಲೋ ಹೋಗಿದ್ದಾರೆ.ನನ್ನ ಪಕ್ಷದ ಲಘುವಾಗಿ ಮಾತನಾಡಬೇಡಿ.ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ.ಮುಂದಿನ ಬಾರಿಯೂ ನಾವೇ ಎಂದು ಬೀಗುತ್ತಿದ್ದಾರೆ.ಈ ಹಿಂದೆ ಇದೇ ಯಡಿಯೂರಪ್ಪ ೧೦ ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ ಎಂದಿದ್ದರು.ಆಮೇಲೆ ಅವರು ಎಲ್ಲಿ ಹೋದರು ಎಂದು ವ್ಯಂಗ್ಯವಾಡಿದರು.

Stay up to date on all the latest ರಾಜಕೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp