ಹೊಸಬರಿಗೆ ಅವಕಾಶ ನೀಡಿದರೆ 150 ಸ್ಥಾನ ಗೆಲ್ಲಲು ಸಾಧ್ಯ, 6 ಬಾರಿ ಶಾಸಕನಾದ್ರೂ ಮಂತ್ರಿಯಾಗಿಲ್ಲ: ಜಿ.ಎಚ್. ತಿಪ್ಪಾರೆಡ್ಡಿ

ಸರ್ಕಾರ ಬಂದಾಗಲೆಲ್ಲಾ ಪ್ರತಿ ಬಾರಿಯೂ ಸಚಿರಾದವರೇ ಮತ್ತೆ ಸಚಿವರಾಗುತ್ತಿದ್ದಾರೆ. ಹೊಸಬರಿಗೆ ಸಚಿವ ಸ್ಥಾನ ಕೊಟ್ಟರೆ ಮುಂದಿನ ಚುನಾವಣೆಗಳನ್ನು 150 ಸ್ಥಾನ‌ ಗೆಲ್ಲಲು ಅನುಕೂಲವಾಗಲಿದೆ.

Published: 20th January 2021 10:08 AM  |   Last Updated: 20th January 2021 12:29 PM   |  A+A-


Thippa reddy

ತಿಪ್ಪಾ ರೆಡ್ಡಿ

Posted By : Shilpa D
Source : UNI

ಬೆಂಗಳೂರು: ಸರ್ಕಾರ ಬಂದಾಗಲೆಲ್ಲಾ ಪ್ರತಿ ಬಾರಿಯೂ ಸಚಿರಾದವರೇ ಮತ್ತೆ ಸಚಿವರಾಗುತ್ತಿದ್ದಾರೆ. ಹೊಸಬರಿಗೆ ಸಚಿವ ಸ್ಥಾನ ಕೊಟ್ಟರೆ ಮುಂದಿನ ಚುನಾವಣೆಗಳನ್ನು 150 ಸ್ಥಾನ‌ ಗೆಲ್ಲಲು ಅನುಕೂಲವಾಗಲಿದೆ ಎಂದು ಹಿರಿಯ ಶಾಸಕ ತಿಪ್ಪಾರೆಡ್ಡಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ವರ್ತನೆಯನ್ನು ಖಂಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರನೇ ಭಾರಿ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಪ್ರತಿ ಬಾರಿಯೂ ಹಿಂದೆ ಸಚಿವರಾಗಿದ್ದವರೇ ಮತ್ತೆ ಸಚಿವರಾದರೆ ಹೇಗೆ. ಸಚಿವರು ಸಮರ್ಥವಾಗ ಖಾತೆ ನಿಭಾಯಿಸುವ ಶಕ್ತಿ ಇರುವಂತಹವರಿಗೆ ಅವಕಾಶ ಕೊಡಬೇಕು. 

ಮತ್ತೆ ಸಂಪುಟ ಪುನಾರಚನೆ ಮಾಡಿದಾಗ ಅವಕಾಶ ಕಲ್ಪಿಸಬೇಕು. ಹಾಗೆ ಮಾಡಿದ್ದೇ ಆದಲ್ಲಿ 2023ರಲ್ಲಿ ಪಕ್ಷ, ಸರ್ಕಾರಕ್ಕೆ ಹೆಚ್ಚಿನ ವರ್ಚಸ್ಸು ಬರಲಿದೆ. ಆ ಮೂಲಕ 150 ಕ್ಷೇತ್ರಗಳನ್ನು ಗೆಲ್ಲಲು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗೆ ಸಲಹೆ ನೀಡಿದರು.

ನಾನು 1961ನೆ ಇಸವಿಯಿಂದ ರಾಜಕೀಯದಲ್ಲಿದ್ದೇನೆ. ಆರು ಬಾರಿ ಶಾಸಕನಾಗಿದ್ದೇನೆ. ನನಗೆ ಒಂದು ಅವಕಾಶ ನೀಡಿ ಎಂದು ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೆ. ಆದರೆ, ನನಗೆ ಅವಕಾಶ ಸಿಕ್ಕಿಲ್ಲ ಎಂದು  ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ರಾಷ್ಟ್ರೀಯ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ಸಂಬಂಧ ಕೋರ್ ಕಮಿಟಿ ಸಭೆ ನಡೆಸಿದ ಅವರು, ಯಾವ ಶಾಸಕರು ಯಾವುದೆ ರೀತಿಯ ಹೇಳಿಕೆಗಳನ್ನು ಕೊಡಬಾರದು ಎಂದು ಸೂಚನೆ ನೀಡಿದ್ದಾರೆ. ಆದುದರಿಂದ, ನಾವು ಏನನ್ನೂ ಮಾತನಾಡುವುದಿಲ್ಲ. ಪಕ್ಷದ ಆದೇಶ ಮೀರಿ ಕೆಲಸ ಮಾಡುವವರಲ್ಲ ನಾವು. ಏನಿದ್ದರೂ ಪಕ್ಷದ ಚೌಕಟ್ಟಿನಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ ಎಂದು ಅವರು ತಿಳಿಸಿದರು.

ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್ ಮಾಡಿ ಸಚಿವ ಸ್ಥಾನ ಪಡೆಯಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಡಿ ಏನು ಅನ್ನೋದೆ ನನಗೆ ಗೊತ್ತಿಲ್ಲ. ಅದನ್ನು ಯಾವ ರೀತಿ ಬಳಸಬೇಕು ಅಂತಾನೂ ಗೊತ್ತಿಲ್ಲ. ನಾವು ಚಿತ್ರದುರ್ಗದವರು, ಸಿಡಿ ಬಗ್ಗೆಯಲ್ಲ ಗೊತ್ತಿಲ್ಲ. ಯಾರು ಬ್ಲ್ಯಾಕ್‍ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

Stay up to date on all the latest ರಾಜಕೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp