ರಾಜಭವನ ಚಲೋ, ರೈತ ವಿರೋಧಿ ಸರ್ಕಾರದ ಅಂತ್ಯಕ್ಕೆ ಮುನ್ನುಡಿ: ಪ್ರಿಯಾಂಕ್ ಖರ್ಗೆ
ಕೇಂದ್ರ ಕೃಷಿ ಕಾಯಿದೆಗಳ ವಿರುದ್ದ ರೈತರು ನಡೆಸುತ್ತಿರುವ ಹೋರಾಟ ಹಾಗೂ ಕಾಂಗ್ರೆಸ್ ಪಕ್ಷದಿಂದ ನಡೆಸಲಾಗುತ್ತಿರುವ ರಾಜಭವನ ಚಲೋ ಪ್ರತಿಭಟನೆ ಬಿಜೆಪಿ ಸರ್ಕಾರ ತನ್ನ ಅಹಂಕಾರಕ್ಕೆ ಅತೀ ಶೀಘ್ರದಲ್ಲಿಯೇ ತಕ್ಕ ಪ್ರತಿಫಲ ಅನುಭವಿಸಲಿದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
Published: 20th January 2021 04:14 PM | Last Updated: 20th January 2021 05:59 PM | A+A A-

ಪ್ರಿಯಾಂಕ್ ಖರ್ಗೆ
ಕಲಬುರಗಿ: ಕೇಂದ್ರ ಕೃಷಿ ಕಾಯಿದೆಗಳ ವಿರುದ್ದ ರೈತರು ನಡೆಸುತ್ತಿರುವ ಹೋರಾಟ ಹಾಗೂ ಕಾಂಗ್ರೆಸ್ ಪಕ್ಷದಿಂದ ನಡೆಸಲಾಗುತ್ತಿರುವ ರಾಜಭವನ ಚಲೋ ಪ್ರತಿಭಟನೆ ಬಿಜೆಪಿ ಸರ್ಕಾರ ತನ್ನ ಅಹಂಕಾರಕ್ಕೆ ಅತೀ ಶೀಘ್ರದಲ್ಲಿಯೇ ತಕ್ಕ ಪ್ರತಿಫಲ ಅನುಭವಿಸಲಿದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ರೈತರ ಈ ಹೋರಾಟ ಕಠಿಣವಾದ ಕೃಷಿ ಕಾಯಿದೆಗಳನ್ನು ವಾಪಸ್ಸು ಪಡೆಯುವವರೆಗೆ ನಿಲ್ಲುವುದಿಲ್ಲ ಎಂದು ಎಚ್ಚರಿಸಿರುವ ಅವರು, ರಾಜಭವನ ಚಲೋ ಕಾರ್ಯಕ್ರಮ ರೈತವಿರೋಧಿ ಸರಕಾರ ಕೊನೆಗಾಣಿಸಲು ಮುನ್ನುಡಿಯಾಗಲಿದೆ ಎಂದು ಬರೆದಿದ್ದಾರೆ. ಈ ಮೂಲಕ ರಾಜಭವನ ಚಲೋ ಪ್ರತಿಭಟನೆಯ ಫೋಟೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.