ನೂತನ ಸಚಿವರಿಗೆ ಖಾತೆ ಹಂಚಿಕೆ; ಹಲವು ಬದಲಾವಣೆ; ರಾಜ್ಯಪಾಲರ ಗ್ರೀನ್ ಸಿಗ್ನಲ್ 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದರ ಜೊತೆಗೆ ಕೆಲವು ಖಾತೆಗಳನ್ನು ಸಚಿವರಿಗೆ ಮರು ಹಂಚಿಕೆ ಮಾಡಿದ್ದಾರೆ.

Published: 21st January 2021 11:35 AM  |   Last Updated: 21st January 2021 03:00 PM   |  A+A-


Yedyurappa

ಯಡಿಯೂರಪ್ಪ

Posted By : Shilpa D
Source : Online Desk

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದರ ಜೊತೆಗೆ ಕೆಲವು ಖಾತೆಗಳನ್ನು ಸಚಿವರಿಗೆ ಮರು ಹಂಚಿಕೆ ಮಾಡಿದ್ದಾರೆ. ಈ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿಕೊಡಲಾಗಿದ್ದು ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ. 

ನೂತನ ಸಚಿವರ  ಖಾತೆ ಹಂಚಿಕೆ ವಿವರ ಇಂತಿದೆ:

 • ಸಿಎಂ ಯಡಿಯೂರಪ್ಪ, ಬೆಂಗಳೂರು ಅಭಿವೃದ್ಧಿ ಮತ್ತು ಇಂಧನ
 • ಉಮೇಶ್ ಕತ್ತಿ - ಆಹಾರ ಮತ್ತು ನಾಗರಿಕ ಪೂರೈಕೆ
 • ಬಸವರಾಜ ಬೊಮ್ಮಾಯಿ - ಗೃಹ ಮತ್ತು ಕಾನೂನು
 • ಜೆ.ಸಿ. ಮಾಧುಸ್ವಾಮಿ - ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
 • ಸಿ.ಪಿ.ಯೋಗೇಶ್ವರ್ – ಸಣ್ಣ ನೀರಾವರಿ
 • ಆರ್. ಶಂಕರ್ – ಪೌರಾಡಳಿತ ಮತ್ತು ರೇಷ್ಮೆ
 • ಎಂಟಿಬಿ ನಾಗರಾಜ್ – ಅಬಕಾರಿ
 • ಮುರುಗೇಶ್ ನಿರಾಣಿ – ಗಣಿಗಾರಿಕೆ
 • ಎಸ್. ಅಂಗಾರ - ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
 • ಅರವಿಂದ ಲಿಂಬಾವಳಿ - ಅರಣ್ಯ ಖಾತೆ
 • ನಾರಾಯಣಗೌಡ - ಯುವಜನ ಮತ್ತು ಕ್ರೀಡೆ
 • ಸಿ. ಗೋಪಾಲಯ್ಯ - ತೋಟಗಾರಿಕೆ ಇಲಾಖೆ
 • ಆನಂದ್ ಸಿಂಗ್ - ಪ್ರವಾಸೋದ್ಯಮ ಮತ್ತು ಪರಿಸರ
 • ಶಿವರಾಂ ಹೆಬ್ಬಾರ್ - ಕಾರ್ಮಿಕ
 • ಪ್ರಭು ಚವ್ಹಾಣ್ - ಪಶುಸಂಗೋಪನೆ
 • ಕೆ.ಸುಧಾಕರ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
 • ಸಿ.ಸಿ. ಪಾಟೀಲ್ - ಸಣ್ಣ ಕೈಗಾರಿಕೆ
 • ಕೋಟ ಶ್ರೀನಿವಾಸ ಪೂಜಾರಿ - ಮುಜರಾಯಿ

ಉಮೇಶ್ ಕತ್ತಿ ಅವರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ, ಅಂಗಾರ ಅವರಿಗೆ ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಖಾತೆ, ಜೆ.ಸಿ.ಮಾಧುಸ್ವಾಮಿ ಅವರ ಬಳಿಯಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಗೃಹ ಸಚಿವ ಬೊಮ್ಮಾಯಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.

ಜೆ.ಸಿ.ಮಾಧುಸ್ವಾಮಿ ಅವರಿಗೆ ಡಾ.ಕೆ.ಸುಧಾಕರ್ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದ್ದು, ಇದರ ಜೊತೆ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನೂ ನೀಡಲಾಗಿದೆ.

ಸಿ.ಸಿ.ಪಾಟೀಲ್ ಅವರಿಗೆ ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ನೀಡಲಾಗಿದೆ.

ಅರವಿಂದ ಲಿಂಬಾವಳಿಗೆ ಅರಣ್ಯ ಖಾತೆ, ಮುರುಗೇಶ್ ನಿರಾಣಿ ಅವರಿಗೆ ಗಣಿ ಮತ್ತು ಭೂವಿಜ್ಞಾನ ಖಾತೆ ನೀಡಲಾಗಿದೆ. ಎಂಟಿಬಿ ನಾಗರಾಜ್ ಅವರಿಗೆ ಅಬಕಾರಿ, ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೊಣೆ ನೀಡಲಾಗಿದೆ.

ಡಾ.ಕೆ.ಸುಧಾಕರ್ ಅವರಿಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆನಂದ ಸಿಂಗ್ ಅವರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ವಿಜ್ಞಾನ ಖಾತೆ, ಸಿ.ಪಿ.ಯೋಗೇಶ್ವರ್ ಅವರಿಗೆ ಸಣ್ಣ ನೀರಾವರಿ ಖಾತೆ ಹಂಚಿಕೆ ಮಾಡಲಾಗಿದೆ.

ಪ್ರಭು ಚೌಹಾಣ್ ಅವರಿಗೆ ಪಶುಸಂಗೋಪಣೆ ಖಾತೆ, ಅರಬಾವಿ ಹೆಬ್ಬಾರ್ ಶಿವರಾಂ ಅವರಿಗೆ ಕಾರ್ಮಿಕ ಖಾತೆ, ಆರ್.ಶಂಕರ್ ಅವರಿಗೆ ಪೌರಾಡಳಿ, ರೇಷ್ಮೆ, ಕೆ.ಗೋಪಾಲಯ್ಯ ಅವರಿಗೆ ತೋಟಗಾರಿಕೆ, ಸಕ್ಕರೆ ಖಾತೆ, ಕೆ.ಸಿ.ನಾರಾಯಣಗೌಡ ಅವರಿಗೆ ಯುವ ಜನ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್ ಖಾತೆ ಹಂಚಿಕೆ ಮಾಡಲಾಗಿದೆ.


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp