ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ: ಶ್ರೀನಿವಾಸ್ ಪ್ರಸಾದ್ ಗೆ ಪರ್ಯಾಯ ನಾಯಕ ಧ್ರುವನಾರಾಯಣ್?
ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಪಕ್ಷ ಸಂಘಟನೆಯಲ್ಲಿ ಬೆಂಬಲ ನೀಡುವ ಸಲುವಾಗಿ ಮತ್ತಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಿದೆ.
Published: 21st January 2021 09:18 AM | Last Updated: 21st January 2021 12:27 PM | A+A A-

ಧುೃವ ನಾರಾಯಣ್ ಮತ್ತು ಶ್ರೀನಿವಾಸ್ ಪ್ರಸಾದ್
ಮೈಸೂರು: ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಪಕ್ಷ ಸಂಘಟನೆಯಲ್ಲಿ ಬೆಂಬಲ ನೀಡುವ ಸಲುವಾಗಿ ಮತ್ತಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಿದೆ.
ರಾಮಲಿಂಗಾ ರೆಡ್ಡಿ ಮತ್ತು ಮಾಜಿ ಸಂಸದ ಧ್ರುವ ನಾರಾಯಣ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ ಮುಂದಿನ ಮೂರು ವರ್ಷಗಳಲ್ಲಿ ಯಾವುದೇ ದೊಡ್ಡ ಚುನಾವಣೆಗಳಿಲ್ಲದಿದ್ದರೂ ಇವರ ನೇಮಕ ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ದಲಿತ ನಾಯಕನನ್ನುಆರಸಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ ನಲ್ಲಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ಪರ್ಯಾಯ ನಾಯಕನಾಗಿಸಲು ಧ್ರುವ ನಾರಾಯಣ್ ಅವರಿಗೆ ದೊಡ್ಡ ಟಾಸ್ಕ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಮತ್ತೊಬ್ಬ ಕಾಂಗ್ರೆಸ್ ದಲಿತ ನಾಯಕ ಮತ್ತು ಸಿದ್ದರಾಮಯ್ಯ ಆಪ್ತ ಎಚ್.ಸಿ ಮಹಾದೇವಪ್ಪ ಕೆಲ ದಿನಗಳಿಂದ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೋಳ್ಳದೇ ದೂರ ಉಳಿದಿದ್ದಾರೆ.
ಯೂತ್ ಕಾಂಗ್ರೆಸ್ ನಿಂದ ತಮ್ಮ ಪ್ರಯಾಣ ಆರಂಭಿಸಿರುವ ಧ್ರುವನಾರಾಯಣ ಅವರಿಗೆ ಲಿಂಗಾಯತ ಮುಖಂಡ ಎಂ ರಾಜಶೇಖರ್ ಮೂರ್ತಿ ಅವರ ಕಟ್ಟಾ ಅನುಯಾಯಿ ಆಗಿದ್ದು ಬಿಜೆಪಿ ಸೇರಿದ್ದರು. ಸಂತೇಮರಹಳ್ಳಿಯಿಂದ ಸ್ಪರ್ಧಿಸಿ ಜೆಡಿಎಸ್ ನ ಎ.ಆರ್ ಕೃಷ್ಣಮೂರ್ತಿ ವಿರುದ್ಧ ಸೋತಿದ್ದರು. ನಂತರ ಮತ್ತೆ ಕಾಂಗ್ರೆಸ್ ಸೇರಿದ್ದ ಧೃವ ನಾರಾಯಣ್ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ ಒಂದೇ ಒಂದು ಮತದಿಂದ ಗೆಲುವು ಸಾಧಿಸಿದ್ದರು.
ಚಾಮರಾಜನಗರದಿಂದ ಎರಡು ಬಾರಿ ಸಂಸದರಾಗಿದ್ದ ನಾರಾಯಣ್ ಅವರ ನೇಮಕಾತಿ ದಲಿತರನ್ನು ಕಾಂಗ್ರೆಸ್ ಮಡಿಲಿಗೆ ತರಲು ಸಾಕಷ್ಟು ಅವಕಾಶವನ್ನು ನೀಡುತ್ತದೆ. ಅನುಭವಿ ನಾಯಕರಾದ ಸಿದ್ದರಾಮಯ್ಯ ಮತ್ತು ಮಹಾದೇವಪ್ಪ ಅವರ ವೃತ್ತಿಜೀವನದ ಮುಂದಿನ ದಿನಗಳಲ್ಲಿ ಹಳೆಯ ಮೈಸೂರು ಭಾಗವನ್ನು ಸ್ವೀಪ್ ಮಾಡಲು ಮತ್ತು ಅಹಿಂದಾ ಮತಗಳನ್ನು ಕ್ರೋಡೀಕರಿಸಲು ಪಕ್ಷಕ್ಕೆ ಅವರ ಬೆಂಬಲ ಬೇಕಾಗುತ್ತದೆ, ಜೊತೆಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳನ್ನು ಗೆಲ್ಲಲು ಸಹಾಯವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಧೃವ ನಾರಾಯಣ ಅವರಿಗೆ ಮಣೆ ಹಾಕಲಾಗಿದೆ.