ವಲಸಿಗರಿಗೆ ಡಮ್ಮಿ ಖಾತೆ ನೀಡಿ ಯೂಸ್ ಅಂಡ್ ಥ್ರೋ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್
ವಲಸಿಗರಿಗೆ ಡಮ್ಮಿ ಖಾತೆ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಯೂಸ್ ಅಂಡ್ ಥ್ರೋ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
Published: 22nd January 2021 02:08 PM | Last Updated: 22nd January 2021 02:14 PM | A+A A-

ಡಿ.ಕೆ ಶಿವಕುಮಾರ್
ಬೆಂಗಳೂರು: ವಲಸಿಗರಿಗೆ ಡಮ್ಮಿ ಖಾತೆ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಯೂಸ್ ಅಂಡ್ ಥ್ರೋ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವೇಳೆ ಜೆಡಿಎಸ್-ಕಾಂಗ್ರೆಸ್ ನಿಂದ ಹೋಗಿ ಬಿಜೆಪಿ ಸೇರಿರುವ ಶಾಸಕರಿಗೆ ಅನ್ಯಾಯ ಮಾಡಿದ್ದಾರೆ. ವಲಸಿಗ ಸಚಿವರಿಗೆ ಡಮ್ಮಿ ಖಾತೆ ನೀಡಿದ್ದಾರೆ.
ನಾನು ವಿಧಾನಸಭೆಯಲ್ಲಿ ಈ ಮೊದಲೇ ಹೇಳಿದ್ದೆ ನೀವೆಲ್ಲ ರಾಜಕೀಯವಾಗಿ ಸಮಾಧಿ ಆಗುತ್ತಿದ್ದರೆಂದು. ಈಗ ನೋಡಿ ಯಾವ್ಯಾವ ಖಾತೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಐಸಿಯು, ವೆಂಟಿಲೇಟರ್ನಲ್ಲಿ ನಡೆಯುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಗೋಪಾಲಯ್ಯ, ಎಂಟಿಬಿ ನಾಗರಾಜ್, ನಾರಾಯಣಗೌಡ, ರೋಷನ್ ಬೇಗ್ ಅವರ ಕಥೆ ಈಗ ಏನಾಗಿದೆ ನೋಡಿ. ಎಂಟಿಬಿ ನಾಗರಾಜ್ಗೆ ಈ ಮೊದಲು ವಸತಿ ಖಾತೆ ಇತ್ತು. ಪಾಪ ಈಗ ಅಬಕಾರಿ ಖಾತೆ ಕೊಟ್ಟಿದ್ದಾರೆ. ವಲಸಿಗರನ್ನೆಲ್ಲ ಯೂಸ್ ಅಂಡ್ ಥ್ರೋ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.