ಕುಮಾರಸ್ವಾಮಿ ಸುಮ್ಮನೆ ಕ್ಷೇತ್ರದಲ್ಲಿ ಸುತ್ತು ಹಾಕಿ, ಸಚಿವರ ಮನೆಗೆ ಭೇಟಿ ನೀಡುತ್ತಿದ್ದಾರೆ: ಯೋಗೇಶ್ವರ್ ಲೇವಡಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಮ್ಮನೆ ಕ್ಷೇತ್ರದಲ್ಲಿ ಸುತ್ತು ಹಾಕುತ್ತಿದ್ದು, ಸಚಿವರ ಮನೆಗೆ ಓಡಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಅವರ ಬಗ್ಗೆ ಆಯ್ಯೋ ಪಾಪ ಅನಿಸುತ್ತದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ. 

Published: 22nd January 2021 01:10 AM  |   Last Updated: 22nd January 2021 01:48 PM   |  A+A-


SHWAR_KUMARASWAMY1

ಸಚಿವ ಯೋಗೇಶ್ವರ್, ಕುಮಾರಸ್ವಾಮಿ

Posted By : Nagaraja AB
Source : Online Desk

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಮ್ಮನೆ ಕ್ಷೇತ್ರದಲ್ಲಿ ಸುತ್ತು ಹಾಕುತ್ತಿದ್ದು,ಸಚಿವರ ಮನೆಗೆ ಓಡಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಅವರ ಬಗ್ಗೆ ಆಯ್ಯೋ ಪಾಪ ಅನಿಸು ತ್ತದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ. 

ರಾಮನಗರ, ಚನ್ನಪಟ್ಟಣ ಎರಡು ಕಣ್ಣುಗಳು ಇದ್ದಂತೆ ಎಂಬ ಹೇಳಿಕೆಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿರುಗೇಟು ನೀಡಿದ ಅವರು, ಪಾಪ ಕುಮಾರಸ್ವಾಮಿ ಆಗಾಗ್ಗೆ ಈ ರೀತಿ ಹೇಳುತ್ತಾನೆ ಇರುತ್ತಾರೆ.ಮೊದಲು ಬಿಜೆಪಿಯನ್ನು ಪ್ರೀತಿ ಮಾಡುತ್ತಿದ್ದರು.ಈಗ ನಮ್ಮ ಮುಖ್ಯಮಂತ್ರಿಗಳ ವಿರುದ್ಧವೇ ಮಾತನಾಡುತ್ತಾರೆ .ಅವರ ಜತೆ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಬಾರದು ಎಂದು ನಮ್ಮ ನಾಯಕರಿಗೆ ಹೇಳಿದ್ದೆ.ನಾನು ಮೊದ ಲಿನಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದೇನೆ.ಕುಮಾರ ಸ್ವಾಮಿ ಅವರಿಗೆ ಆತಂಕ ಎದುರಾಗಿದ್ದು,ಮು ಖ್ಯಮಂತ್ರಿಯಾಗಿದ್ದ ವೇಳೆ ಯಾವುದೇ ಕೆಲಸ ಮಾಡಲಿಲ್ಲ.ಈಗ ಸುಮ್ಮನೆ ಕ್ಷೇತ್ರದಲ್ಲಿ ಸುತ್ತು ಹಾಕುತ್ತಿದ್ದಾರೆ.ಸಚಿ ವರ ಮನೆಗಳಿಗೆ ಓಡಾಡುತ್ತಿದ್ದಾರೆ.ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನೆಗೂ ಹೋಗಿದ್ದರು ಎಂದು ಲೇ ವಡಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ಸಮಾನ ಶತ್ರುಗಳು.ನಾನು ಸಚಿವನಾಗಿರುವುದರಿಂದ ಅವರಿಗೆ ಭಯ ಆಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ನೀಡಿರುವ ಖಾತೆ ಬಗ್ಗೆ ಖುಷಿ ಇದೆ.ನಾನು ಮೂಲತಃ ಕೃಷಿಕ ಕುಟುಂಬದಿಂದ ಬಂದವನು. ನೀರಾವರಿ ಇಲಾಖೆ ನನಗೆ ಇಷ್ಟವಾದ ಖಾತೆ.ನನಗೆ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ .ನೀರಾವರಿ ವಿಚಾರದಲ್ಲಿ ನಮ್ಮ ತಾಲೂಕು ಇಡೀ ರಾಜ್ಯಕ್ಕೆ ಮಾದರಿ ಎಂದು ತಿಳಿಸಿದರು. 


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp