ದುಡಿದು ಬಾಳುವುದು ಮಹಿಳಾ ಸಬಲೀಕರಣವೋ? ಹೊಡೆದು ಬಾಳುವುದೋ? 

ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಪೇದೆಯ ಮೇಲೆ ಹಲ್ಲೆ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಸಚಿವ ಶ್ರೀರಾಮುಲು ಹಾಗೂ ಶಾಸಕಿ ಸೌಮ್ಯ ರೆಡ್ಡಿ ನಡುವೆ ಜಟಾಪಟಿ ನಡೆದಿದೆ.

Published: 22nd January 2021 09:17 AM  |   Last Updated: 22nd January 2021 09:17 AM   |  A+A-


Sowmya Reddy

ಸೌಮ್ಯಾ ರೆಡ್ಡಿ

Posted By : Shilpa D
Source : Online Desk

ಬೆಂಗಳೂರು: ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಪೇದೆಯ ಮೇಲೆ ಹಲ್ಲೆ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಸಚಿವ ಶ್ರೀರಾಮುಲು ಹಾಗೂ ಶಾಸಕಿ ಸೌಮ್ಯ ರೆಡ್ಡಿ ನಡುವೆ ಜಟಾಪಟಿ ನಡೆದಿದೆ.

ನನ್ನ ಮನೆಯ ಹೆಣ್ಣುಮಕ್ಕಳು ಪ್ರಬುದ್ಧರು. ರೈತರ ಪರವಾಗಿರುವ ಕೃಷಿ ಕಾಯ್ದೆಯ ವಿರುದ್ಧ ಹೋರಾಟ ಮಾಡುವವರಲ್ಲ.‌ ಪೊಲೀಸರು ಹೊಡೆದರು ಎಂದು ಆರೋಪಿಸುವ ನೀವು, ರಾಜಕಾರಣಿಯಾಗಿ ಕಾನೂನು ಕ್ರಮ ಕೈಗೊಳ್ಳಬಹುದಿತ್ತಲ್ಲ? ನಮ್ಮ ಸಂವಿಧಾನದ ಮೇಲೆ ಇಷ್ಟು ಬೇಗ ನಂಬಿಕೆ ಕಳೆದುಕೊಂಡುಬಿಟ್ಟಿರೇನು? ಪೊಲೀಸರಿಗೆ ಹೊಡೆದ ಅಪ್ರಬುದ್ಧ ವರ್ತನೆಗೆ ಕ್ಷಮೆಯಾಚಿಸಿ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದರು.

ಒಬ್ಬ ಶಾಸಕಿಯಾಗಿ, ಹೆಣ್ಣುಮಗಳಾಗಿ, ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಬೇಕು. ಅದು ಬಿಟ್ಟು ಇನ್ನೊಬ್ಬ ಹೆಣ್ಣುಮಗಳ ಮೇಲೆ ಕೈ ಮಾಡುವುದು ಸರಿಯೇ  ಸೌಮ್ಯ ರೆಡ್ಡಿಯವರೇ? ದುಡಿದು ಬಾಳುವುದು ಮಹಿಳಾ ಸಬಲೀಕರಣವೋ? ಹೊಡೆದು ಬಾಳುವುದೋ?  ಟ್ವೀಟ್ ಮಾಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ, ಇಷ್ಟೆಲ್ಲಾ ಮಾತಾಡುವ ನೀವು ಧೈರ್ಯವಿದ್ದರೆ ಅದೇ ಪೊಲೀಸರು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ, 20 ನಿಮಿಷಕ್ಕೂ ಹೆಚ್ಚು ಸಮಯ ಬಲವಂತವಾಗಿ ಹಿಡಿದು ಎಳೆದಾಡಿದ ವಿಡಿಯೋ ಹಂಚಿಕೊಳ್ಳಿ. 

ನನ್ನ ಜಾಗದಲ್ಲಿ ನಿಮ್ಮದೇ ಮಗಳೋ, ತಂಗಿಯೋ ಇದ್ದಿದರೆ ಇದೇ ಮಾತು ಹೇಳ್ತಿದ್ರಾ ಎಂದು ಪ್ರಶ್ನಿಸಿದ್ದಾರೆ. ರೈತರಿಗಾಗಿ ಹೋರಾಡುವ ಮಹಿಳೆಯರೊಂದಿಗೆ ನಿಮ್ಮ ಸರ್ಕಾರ ಇಷ್ಟು ಅಮಾನುಷವಾಗಿ ನಡೆದುಕೊಂಡಿದ್ದು ಸರಿಯೇ? ನಾನು ಇತ್ತೀಚಿಗೆ ಭೇಟಿ ನೀಡಿದ ಸಿಂಘು ನತ್ತು ಟಿಕ್ರಿ ಗಡಿ ಪ್ರದೇಶದಲ್ಲಿ ಮಹಿಳೆಯರನ್ನು ಹೆಚ್ಚು ಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು. ಮಹಿಳಾ ಪ್ರತಿಭಟನಾಕಾರರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ತಿಳಿಯದ ನಿಮ್ಮದು ಯಾವ ಸೀಮೆಯ ಬೇಟಿ ಬಚಾವೋ? ಎಂದು ತಿರುಗೇಟು ನೀಡಿದ್ದಾರೆ.

ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬುಧವಾರ ಕಾಂಗ್ರೆಸ್ ಬೆಂಗಳೂರಿನಲ್ಲಿ ಪ್ರತಿಭಟನೆ ಹಾಗೂ ರಾಜಭವನ ಚಲೋ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ರಾಜಭವನ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. 

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp