ಎಲ್ಲಾ ಭ್ರಷ್ಟಾಚಾರಗಳಿಗೆ ಮುನ್ನುಡಿ ಬರೆದವರು ಸಿದ್ದರಾಮಯ್ಯ: ಎಎಪಿ
ಮುಂಬರುವ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಬಿಬಿಎಂಪಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ಸಜ್ಜಾಗಿದೆ ಎಂದು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹೇಳಿದ್ದಾರೆ.
Published: 23rd January 2021 12:28 PM | Last Updated: 23rd January 2021 12:58 PM | A+A A-

ಸಂಜಯ್ ಸಿಂಗ್
ಬೆಂಗಳೂರು: ಮುಂಬರುವ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಬಿಬಿಎಂಪಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ಸಜ್ಜಾಗಿದೆ ಎಂದು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹೇಳಿದ್ದಾರೆ.
ಸಾಕಷ್ಟು ಅಭ್ಯರ್ಥಿಗಳು ಮತ್ತು ಯುವ ಜನತೆ ಪಕ್ಷದ ಕಡೆ ಆಕರ್ಷಿತರಾಗುತ್ತಿದ್ದಾರೆ , ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಪ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯಲ್ಲೂ ಗೆಲುವು ಸಾಧಿಸಲಿದ್ದೇವೆ ಎಂದು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಮಾದರಿಗೆ ರಾಷ್ಟ್ರದ ಜನತೆ ಮನ ಸೋತಿದ್ದಾರೆ. ಬಿಜಪಿ, ಕಾಂಗ್ರೆಸ್ ಹೊರತಾಗಿ ಪರ್ಯಾಯ ರಾಜಕೀಯ ಪಕ್ಷಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇಡೀ ದೇಶದಲ್ಲಿ 2011-12ರ ಹೊತ್ತಿಗೆ ಜನ ಲೋಕಪಾಲ್ ಕಾಯ್ದೆ ಜಾರಿಗೆ ಬರಬೇಕು ಎಂದು ಪ್ರಬಲ ಹೋರಾಟ ನಡೆಯುತ್ತಿತ್ತು, ಆಗ ನಾನು ಕರ್ನಾಟಕದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಲನದಲ್ಲಿ ಭಾಗವಹಿಸಿದ್ದೆ. ಆಗ ಕರ್ನಾಟಕದ ಬಗ್ಗೆ ಹೆಮ್ಮೆ ಪಟ್ಟಿದ್ದೆ, ಈಗ ಪರಿಸ್ಥಿತಿ ನೋಡಿದರೇ ನಿಜಕ್ಕೂ ಬೇಸರವಾಗುತ್ತದೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಇಂದು ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರಗಳಿಗೆ ಮುನ್ನುಡಿ ಬರೆದರು. ಅದಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮರಳಿ ಲೋಕಾಯುಕ್ತವನ್ನು ತರುವುದಾಗಿ ಹೇಳಿದ್ದ ಯಡಿಯೂರಪ್ಪ, ಲೋಕಯುಕ್ತವನ್ನೆ ಬಳಸಿಕೊಂಡು ತಮ್ಮ ಮೇಲಿದ್ದ ಭೂ ಹಗರಣವನ್ನೇ ಖುಲಾಸೆಗೊಳಿಸಿದರು ಎಂದು ಆರೋಪಿಸಿದ್ದಾರೆ.