ಖಾತೆ ಹಂಚಿಕೆ ಅಸಮಾಧಾನ ಸಿಎಂ ಬಗೆಹರಿಸಲಿದ್ದಾರೆ: ರಮೇಶ್ ಜಾರಕಿಹೊಳಿ

ಖಾತೆ ಮರು ಹಂಚಿಕೆ ವಿಚಾರ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ನಿನ್ನೆ ಇಡೀ ದಿನ ವಲಸೆ ಬಿಜೆಪಿ ಸಚಿವರು ಬೆಂಗಳೂರಿನಲ್ಲಿ ಚರ್ಚೆ ನಡೆಸಿದ್ದಾರೆ.  

Published: 23rd January 2021 10:41 AM  |   Last Updated: 23rd January 2021 12:24 PM   |  A+A-


Ramesh jarkiholi

ರಮೇಶ್ ಜಾರಕಿಹೊಳಿ

Posted By : Shilpa D
Source : The New Indian Express

ಬೆಂಗಳೂರು: ಖಾತೆ ಮರು ಹಂಚಿಕೆ ವಿಚಾರ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ನಿನ್ನೆ ಇಡೀ ದಿನ ವಲಸೆ ಬಿಜೆಪಿ ಸಚಿವರು ಬೆಂಗಳೂರಿನಲ್ಲಿ ಚರ್ಚೆ ನಡೆಸಿದ್ದಾರೆ.  ಖಾತೆ ಹಂಚಿಕೆ ಅಸಮಾಧಾನ ಕುರಿತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಡಾ. ಸುಧಾಕರ್ ಮತ್ತು ಮುನಿರತ್ನ ಜೊತೆಗೆ ನಾನು ಜೊತೆಗೆ ಮಾತನಾಡ ಬೇಕಾಗಿತ್ತು. ಆದರೆ ಈಗ ಎತ್ತಿನ ಹೊಳೆ ಯೋಜನೆಯ ಕಾರ್ಯಕ್ರಮ ಇದೆ, ಅಲ್ಲಿಗೆ ಹೋಗುತ್ತಿದ್ದೇನೆ.  ಅವರೊಂದಿಗೆ ಮಾತನಾಡುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲವನ್ನು ಸರಿ ಮಾಡುತ್ತಾರೆ ಎಂದು ಹೇಳಿದ್ದಾರೆ. 

ಖಾತೆ ಹಂಚಿಕೆ ವಿಷಯ ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಹೇಳಿದ್ದಾರೆ. ಜೊತೆಗೆ ವಲಸೆ ಸಚಿವರ ಕುರಿತು ಮಹತ್ವದ ಹೇಳಿಕೆಯನ್ನು ರಮೇಶ್ ಜಾರಕಿಹೊಳಿ ಅವರು ಕೊಟ್ಟಿದ್ದಾರೆ. ನಾವು ಎಲ್ಲಾ ಒಟ್ಟಿಗೆ ಇದ್ದೀವೆ, ನಾವೆಲ್ಲರೂ ಬಿಜೆಪಿಯವರು. ಖಾತೆ ಹಂಚಿಕೆ ಅಸಮಾಧಾನ ಕುರಿತು ಇಲ್ಲಿ ತನಕ ನಾನು ಯಡಿಯೂರಪ್ಪ ಅವರೊಂದಿಗೆ ಮಾತನಾಡಿಲ್ಲ, ಅಗತ್ಯ ಬಿದ್ದಲ್ಲಿ ಮಾತನಾಡುತ್ತೇನೆ. ಖಾತೆ ಬದಲಾವಣೆ ಅನಿವಾರ್ಯ ಈಗ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
 


Stay up to date on all the latest ರಾಜಕೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp