ರಾಜಕೀಯ ಆತ್ಮಹತ್ಯೆಯಂತಹ ಪರಿಸ್ಥಿತಿಯಲ್ಲಿ ಗೆದ್ದು ಬಂದಿದ್ದೇವೆ: ಖಾತೆ ಬದಲಾವಣೆಗೆ ಸುಧಾಕರ್ ಅಸಮಾಧಾನ

ವೈದ್ಯಕೀಯ ಶಿಕ್ಷಣ ಖಾತೆಯನ್ನು ವಾಪಸ್ ಪಡೆದ ನಂತರ ಮೌನಕ್ಕೆ ಶರಣಾಗಿದ್ದ ಆರೋಗ್ಯ ಸಚಿವ ಡಾ. ಸುಧಾಕರ್ ಕಡೆಗೂ ಮೌನ ಮುರಿದಿದ್ದು, ವಲಸಿಗ ಸಚಿವರ ಖಾತೆ ಬದಲಾವಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Published: 23rd January 2021 01:13 AM  |   Last Updated: 23rd January 2021 12:22 PM   |  A+A-


DrKSudhakar1

ಡಾ. ಕೆ. ಸುಧಾಕರ್

Posted By : Nagaraja AB
Source : UNI

ಬೆಂಗಳೂರು: ವೈದ್ಯಕೀಯ ಶಿಕ್ಷಣ ಖಾತೆಯನ್ನು ವಾಪಸ್ ಪಡೆದ ನಂತರ ಮೌನಕ್ಕೆ ಶರಣಾಗಿದ್ದ ಆರೋಗ್ಯ ಸಚಿವ ಡಾ. ಸುಧಾಕರ್ ಕಡೆಗೂ ಮೌನ ಮುರಿದಿದ್ದು, ವಲಸಿಗ ಸಚಿವರ ಖಾತೆ ಬದಲಾವಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಆತ್ಮಹತ್ಯೆಯಂತಹ ಪರಿಸ್ಥಿಯಲ್ಲಿ ಗೆದ್ದು ಬಂದಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶೇಕಡಾ ಮೂರರಷ್ಟು ಮತ ಪಡೆದಿರಲಿಲ್ಲ. ಅಂತದ್ದರಲ್ಲಿ ಶ್ರಮಪಟ್ಟು ಪಕ್ಷವನ್ನು ಸಂಘಟಿಸುತ್ತಿರುವುದಾಗಿ ಅವರು ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡು ಖಾತೆ ಯಾರಿಗೆ ಬೇಕಾದರು ಕೊಡಲಿ ಆದರೆ ಒಬ್ಬರಿಗೆ ಕೊಡಿ ಅನ್ನೋ‌ದು ತಮ್ಮ ಮನವಿಯಾಗಿದೆ.

ವೈದ್ಯಕೀಯ ಶಿಕ್ಷಣ ಒಂದು ವಿಶೇಷ ಸಬ್ಜೆಕ್ಟ್, ಮೆಡಿಕಲ್ ಎಜುಕೇಶನ್, ಆರೋಗ್ಯ ಇಲಾಖೆ ಒಂದಕ್ಕೊಂದು ಪೂರಕವಾದದು. ಈಗ ಖಾತೆ ಹೊಂದಾಣಿಕೆ ಇಲ್ಲದಿದ್ದರೆ ಗೊಂದಲ ಸಾಧ್ಯತೆ ಇದೆ. ಈ ನಿರ್ಧಾರ ಲಸಿಕೆ ಹಂಚಿಕೆಗೆ ಗೊಂದಲ ಉಂಟಾಗಬಾರದು ಎನ್ನುವ ಉದ್ದೇಶ ತಮ್ಮದಾಗಿದೆ ಎಂದರು. 

ಗೋಪಾಲಯ್ಯ, ನಾರಾಯಣಗೌಡ, ಎಂಟಿಬಿ ನಾಗರಾಜ್ ಗೆ ಅನ್ಯಾಯ ಆಗಿದೆ. ಗೋಪಾಲಯ್ಯ ಅವರ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ಎಂಟಿಬಿ ಅವರ ರಕ್ಷಣೆ ನಮ್ಮ ಕರ್ತವ್ಯ. ಈಗ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ನಮಗೆ ಪಕ್ಷದ ಶಿಸ್ತು  ಅತ್ಯಂತ ಮುಖ್ಯವಾದದು.ಇಲ್ಲಿ ವೈಯಕ್ತಿಕ ಆಸೆ ಆಕಾಂಕ್ಷೆ ಮುಖ್ಯವಲ್ಲ ಎಂದು ಅಸಮಾಧಾನವನ್ನು ಬಹಿರಂಗಪಡಿಸಿದರು.

Stay up to date on all the latest ರಾಜಕೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp