
ಸಾಂದರ್ಭಿಕ ಚಿತ್ರ
ಬೆಂಗಳೂರು: ಏಳು ಶಾಸಕರಿಗೆ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಅವರ ವಾಸಕ್ಕೆ ನೀಡಲು ಸದ್ಯಕ್ಕೆ ಸರ್ಕಾರಿ ಬಂಗಲೆಗಳು ಖಾಲಿಯಿಲ್ಲ.
ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಯ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ 23 ಸರ್ಕಾರಿ ಬಂಗಲೆಗಳಿದ್ದು, ಅವುಗಳನ್ನು ಮಂತ್ರಿಗಳು, ನ್ಯಾಯಾಧೀಶರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗಿದೆ.
ರೇಸ್ ಕೋರ್ಸ್ ರಸ್ತೆ, ಕುಮಾರ ಕೃಪಾ ರಸ್ತೆ, ಜಯಮಹಲ್ ಮತ್ತು ರಾಜ್ಯ ರಾಜಧಾನಿಯ ಇತರ ಸ್ಥಳಗಳಲ್ಲಿ ಈ ಬಂಗಲೆಗಳಿವೆ. ಸಿಎಂಗೆ ‘ಕೃಷ್ಣ’ ಮತ್ತು ‘ಕಾವೇರಿ’ ಬಂಗಲೆಗಳನ್ನು ಮಂಜೂರು ಮಾಡಲಾಗಿದ್ದರೆ, ವಸಂತನಗರದ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ಸೇರಿದಂತೆ ಇತರ ಅಧಿಕೃತ ಬಂಗಲೆ ನೀಡಲಾಗಿದೆ.
2019 ರ ಆಗಸ್ಟ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ 17 ಮಂತ್ರಿಗಳ ಪೈಕಿ ಕೆಲವರಿಗೆ ಬಂಗಲೆ ನೀಡಲಾಯಿತು. 2020 ರ ಫೆಬ್ರವರಿಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವರಿಗೆ ರಾಜ್ಯ ಸರ್ಕಾರವು ಅವುಗಳನ್ನು ಒದಗಿಸಲು ಸಾಧ್ಯವಾಯಿತು. ಅದರಲ್ಲಿ ಬಿಸಿ ಪಾಟೀಲ್ ಮತ್ತು ಸುಧಾಕರ್ ಅವರಿಗೆ ಬಂಗಲೆ ನೀಡಲಾಗಿದೆ. ಆದರೆ ಗೋಪಾಲಯ್ಯ ಅವರಿಗೆ ಸಿಗಲಿಲ್ಲ, ಹೀಗಾಗಿ ವಿಧಾನ ಸೌಧಕ್ಕೆ ಹತ್ತಿರದಲ್ಲಿ ಮನೆ ನೋಡುತ್ತಿದ್ದೇನೆ, ಆದರೆ ಕೊರೋನಾ ಸಾಂಕ್ರಾಮಿಕ ದಿಂದ ಸಾಧ್ಯವಾಗದೇ ಶಾಸಕರ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಎಲ್ಲಾ ಸರ್ಕಾರ ಬಂಗಲೆಗಳು ತುಂಬಿ ಹೋಗಿರುವ ಕಾರಣ ನಾನು, ಬಾಡಿಗೆ ಮನೆ ನೋಡುತ್ದಿದ್ದೇನೆ ಎಂದು ಸಣ್ಣ ನೀರಾವರಿ ಸಚಿವ ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ. ಯಾವುದೇ ಸರ್ಕಾರಿ ಬಂಗಲೆಗಳು ಸದ್ಯಕ್ಕೆ ಖಾಲಿಯಿಲ್ಲ, ಹೀಗಾಗಿ ಸಚಿವರು ವಾಸ ಮಾಡುವ ಬಾಡಿಗೆ ಮನೆಗೆ ಸರ್ಕಾರ ಪ್ರತಿ ತಿಂಗಳು 1.5 ಲಕ್ಷ ರು ಹಣ ನೀಡಲಿದೆ.
ಅತಿ ಹೆಚ್ಚು ವ್ಯಾಪಾರ ವಹಿವಾಟು ಹೊಂದಿರುವ ಈ ಪ್ರದೇಶಗಳಲ್ಲಿ ಬಾಡಿಗೆ ಕೂಡ ಹೆಚ್ಚಿಗೆ ಇರುತ್ತದೆ. ಹಲವು ವರ್ಷಗಳಿಂದ ಭತ್ಯೆಯನ್ನು ಪರಿಷ್ಕರಿಸಲಾಗಿಲ್ಲ, ’’ ಎಂದು ಸಚಿವರೊಬ್ಬರ ಸಿಬ್ಬಂದಿ ಹೇಳಿದರು.
ಸದ್ಯ ಹೊಸ ಸಚಿವರಿಗೆ ಟಯೊಟೋ ಇನ್ನೋವಾ ನೀಡಲಾಗಿದೆ, ನಿಗಮ-ಮಂಡಳಿ ಅಧ್ಯಕ್ಷರಿಗೂ ಕಾರು ನೀಡಬೇಕಾಗಿದೆ. ಇದರ ಜೊತೆಗೆ ಹೊಸ ಸಚಿವರುಗಳಿಗೂ ಕಾರು ಕೊಡಬೇಕಾಗಿದೆ. ಹಣಕಾಸು ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಹೊಸ ಕಾರು ಖರೀದಿ ಮಾಡುವುದು ಸರಿಯಲ್ಲ, ಸಚಿವರುಗಳಿಗೆ ಹೈಎಂಡ್ ಕಾರು ನೀಡಬೇಕಾಗಿದೆ ಎಂದು, ಸಿಎಂ ಕಚೇರಿಯಿಂದ ಆದೇಶ ಬಂದರೆ ನಾವು ಹೊಸ ಕಾರು ಖರೀದಿ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.