ಬಿಜೆಪಿ ನಾಯಕರಿಂದ ರೆಸಾರ್ಟ್ ರಾಜಕೀಯ: ಅನುಮಾನ, ಕುತೂಹಲ ಮೂಡಿಸಿದ ಜಾರಕಿಹೊಳಿ-ಸಚಿವರ ಮಾತುಕತೆ
ಕಳೆದ ಶುಕ್ರವಾರ ರಾತ್ರಿ ನೀರಾವರಿ ಇಲಾಖೆ ಸಚಿವ ರಮೇಶ್ ಜಾರಕಿಹೊಳಿ ಕೆಲವು ಸಚಿವರು ಮತ್ತು ಶಾಸಕರೊಂದಿಗೆ ಚಿಕ್ಕಮಗಳೂರಿನ ರೆಸಾರ್ಟ್ ವೊಂದರಲ್ಲಿ ತರಾತುರಿಯ ಸಭೆ ನಡೆಸಿದ್ದರು. ಬಿಜೆಪಿ ನಾಯಕರಿಂದಲೂ ರೆಸಾರ್ಟ್ ರಾಜಕೀಯ ಆರಂಭವಾಯಿತೇ ಎಂಬ ಗುಮಾನಿ ಎದ್ದಿತು.
Published: 24th January 2021 07:15 AM | Last Updated: 24th January 2021 07:30 AM | A+A A-

ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚಿಕ್ಕಮಗಳೂರಿನ ರೆಸಾರ್ಟ್ ನಲ್ಲಿ ಸಭೆ ನಡೆದಿದ್ದಾಗ
ಶಿವಮೊಗ್ಗ: ಕಳೆದ ಶುಕ್ರವಾರ ರಾತ್ರಿ ನೀರಾವರಿ ಇಲಾಖೆ ಸಚಿವ ರಮೇಶ್ ಜಾರಕಿಹೊಳಿ ಕೆಲವು ಸಚಿವರು ಮತ್ತು ಶಾಸಕರೊಂದಿಗೆ ಚಿಕ್ಕಮಗಳೂರಿನ ರೆಸಾರ್ಟ್ ವೊಂದರಲ್ಲಿ ತರಾತುರಿಯ ಸಭೆ ನಡೆಸಿದ್ದರು. ಬಿಜೆಪಿ ನಾಯಕರಿಂದಲೂ ರೆಸಾರ್ಟ್ ರಾಜಕೀಯ ಆರಂಭವಾಯಿತೇ ಎಂಬ ಗುಮಾನಿ ಎದ್ದಿತು.
ಇತ್ತೀಚೆಗೆ ಸಚಿವ ಸಂಪುಟ ವಿಸ್ತರಣೆ ಬಳಿಕ ಕೆಲವು ಸಚಿವರು ಮತ್ತು ಶಾಸಕರು ತಮಗೆ ಸಚಿವ ಸ್ಥಾನ ಸಿಗದಿದ್ದುದಕ್ಕೆ, ಖಾತೆ ಹಂಚಿಕೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ರೆಸಾರ್ಟ್ ರಾಜಕೀಯ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು.
ಅಭಿವೃದ್ಧಿ ಯೋಜನೆಗಳ ಬಗ್ಗೆ ತಾವು ಚರ್ಚೆ ನಡೆಸಿದ್ದೆವು ಎಂದು ರೆಸಾರ್ಟ್ ನಲ್ಲಿ ಸೇರಿದ ಸಚಿವರು ಹೇಳುತ್ತಿದ್ದರೂ ಈ ಸಭೆ ಚರ್ಚೆಯ ವಿಷಯವಾಗಿದೆ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಕಾರಣಕರ್ತರು ರಮೇಶ್ ಜಾರಕಿಹೊಳಿ. ಈಗ ಕೆಲವರಲ್ಲಿ ಅಸಮಾಧಾನದ ಹೊಗೆಯಾಡುತ್ತಿರುವಾಗ ಈ ಸಭೆ ಬಗ್ಗೆ ಸಾಕಷ್ಟು ಅನುಮಾನ ಕಾಡಿದೆ.
ಈ ಸಭೆಯಲ್ಲಿ ನೂತನ ಸಚಿವರುಗಳಾದ ಸಿ ಪಿ ಯೋಗೀಶ್ವರ್, ಅಬಕಾರಿ ಸಚಿವ ಕೆ ಗೋಪಾಲಯ್ಯ, ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಭಾಗವಹಿಸಿದ್ದರು. ಸಭೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗೆ ಸಂಬಂಧಿಸಿದ ನೀರಾವರಿ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದ್ದು ಎತ್ತಿನಹೊಳೆ ಯೋಜನೆ ಬಗ್ಗೆ ಕೂಡ ಚರ್ಚೆ ನಡೆಸಿದೆವು. ಶುಕ್ರವಾರ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸಕಲೇಶಪುರಕ್ಕೆ ಹೋಗಿದ್ದೆವು. ಯೋಜನೆಯನ್ನು ತ್ವರಿತಗೊಳಿಸಿ ಜೂನ್ ಒಳಗೆ ನೀರು ಒದಗಿಸಬೇಕೆಂದು ಚರ್ಚೆ ನಡೆಸಿದ್ದೆವು. ಮರುದಿನ ಬೆಳಿಗ್ಗೆ ನಾವು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆವು ಎಂದಿದ್ದಾರೆ.
ಭೇಟಿಯ ಬಗ್ಗೆ ತಮಗೆ ಯಾವುದೇ ಮಾಹಿತಿಯಿರಲಿಲ್ಲ ಎಂದು ಜಿಲ್ಲೆಯ ಉನ್ನತ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದಾಗ, ತಮ್ಮ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು. “ಅಧಿಕಾರಿಗಳು ರೆಸಾರ್ಟ್ನಿಂದ ಹೊರಬಂದ ನಂತರ ಬೇಕಿದ್ದರೆ ಕೇಳಿ ದೃಢಪಡಿಸಿಕೊಳ್ಳಿ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು. ಖಾಸಗಿ ರೆಸಾರ್ಟ್ ನಲ್ಲಿ ಏಕೆ ಸಭೆ ನಡೆಸಿದರೆ ಎಂದು ಕೇಳಿದಾಗ ನನ್ನ ರಾಜಕೀಯ ಗುರುಗಳಾದ ಎಸ್ ಎಂ ಕೃಷ್ಣ ಅವರ ಅಳಿಯನವರ ರೆಸಾರ್ಟ್ ಈ ಸೆರಾಯ್ ರೆಸಾರ್ಟ್, ದಿವಂಗತ ಸಿದ್ದಾರ್ಥ ಅವರು ನನ್ನ ಉತ್ತಮ ಗೆಳೆಯ. ಈ ಹಿಂದೆ ಕೂಡ ಸಾಕಷ್ಟು ಸಾರಿ ಈ ರೆಸಾರ್ಟ್ ಗೆ ಹೋಗಿದ್ದೆ. ಸಿ ಪಿ ಯೋಗೇಶ್ವರ್ ಮಾತುಕತೆ ನಂತರ ಬೇಲೂರಿಗೆ ಹೊರಟರು ಎಂದಿದ್ದಾರೆ.
ಇನ್ನು ಶಾಸಕ ಕುಮಾರಸ್ವಾಮಿ ಕೂಡ ಜಾರಕಿಹೊಳಿ ನೀಡಿದ ಪ್ರತಿಕ್ರಿಯೆಯನ್ನೇ ಕೊಟ್ಟಿದ್ದಾರೆ. ರಾಜಕೀಯ ವಿಷಯ ನಾವು ಚರ್ಚೆ ಮಾಡಲಿಲ್ಲ. ಇನ್ನು ಸಚಿವ ಸ್ಥಾನ ಸಿಗದಿರುವ ವಿಷಯ ಈಗ ಅಪ್ರಸ್ತುತ ಎಂದು ಹೇಳಿದ್ದಾರೆ.