ಮುಖ್ಯಮಂತ್ರಿ ವಿರೋಧಿ ಗುಂಪಿನಿಂದ ಅತೃಪ್ತ ಶಾಸಕರಿಗೆ ಆಮಿಷ: ಬಿಎಸ್ ವೈ ಆಪ್ತ ಮೂಲಗಳು!

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟ ಪುನರ್ ರಚನೆಯಲ್ಲಿ ತಲೆಕೆಡಿಸಿಕೊಂಡು ಐದು ದಿನಗಳಲ್ಲಿ ನಾಲ್ಕು ಬಾರಿ ಖಾತೆಗಳನ್ನು ಬದಲಾವಣೆ ಮಾಡಿದರೆ ಬಿಜೆಪಿಯ ಒಂದು ವರ್ಗ ಒಳಗೊಳಗೆ ಖುಷಿಪಡುತ್ತಿದೆ.

Published: 27th January 2021 08:18 AM  |   Last Updated: 27th January 2021 02:04 PM   |  A+A-


CM_BSYediyurappa1

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

Posted By : Nagaraja AB
Source : The New Indian Express

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟ ಪುನರ್ ರಚನೆಯಲ್ಲಿ ತಲೆಕೆಡಿಸಿಕೊಂಡು ಐದು ದಿನಗಳಲ್ಲಿ ನಾಲ್ಕು ಬಾರಿ ಖಾತೆಗಳನ್ನು ಬದಲಾವಣೆ ಮಾಡಿದರೆ ಬಿಜೆಪಿಯ ಒಂದು ವರ್ಗ ಒಳಗೊಳಗೆ ಖುಷಿಪಡುತ್ತಿದೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಿನಿಂದಲೂ ಅವರ ವಿರುದ್ಧವಾಗಿರುವ ಈ ಗುಂಪು ಹಾಗೂ ಅದರ ಸದಸ್ಯರು, ಪ್ರಬಲ ವ್ಯಕ್ತಿಯ ಗೊಂದಲಕಾರಿ ಮಾರ್ಗದಿಂದ ಸಂತೋಷಗೊಂಡಿದ್ದಾರೆ ಎಂದು ಯಡಿಯೂರಪ್ಪ ಆಪ್ತ ಮೂಲಗಳು ಹೇಳಿವೆ.

ಅತೃಪ್ತ ಶಾಸಕರ ಜೊತೆಗೆ ಸಂಪುಟ ಪುನರ್ ರಚನೆ ವೇಳೆ ಸ್ಥಾನ ಸಿಗದೆ ಅಸಂತೋಷಗೊಂಡವರ ಕೋಪ ಮತ್ತಷ್ಟು ಹೆಚ್ಚಾಗಬಹುದೆಂದು  ಮುಖ್ಯಮಂತ್ರಿಯ ಕಡೆಯವರು ಆತಂಕ ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗ, ಕಾಂಗ್ರೆಸ್ ಹಾಗೂ ಜೆಡಿಎಸ್  ತೊರೆದು ಬಂದ 17 ಮಂದಿ ಬಂಡಾಯ ಶಾಸಕರಿಗೆ ಸಚಿವ ಸ್ಥಾನದ ಜೊತೆಗೆ ಒಂದಿಷ್ಟು ಆಮಿಷವೊಡ್ಡಿ ಮೈತ್ರಿ ಮಾಡಿಕೊಳ್ಳಲಾಗಿತ್ತು.

ಇದೀಗ ಎಲ್ಲರಿಗೂ ಸಚಿವ ಸ್ಥಾನ ನೀಡಿಲ್ಲ. ಆದ್ದರಿಂದ ಯಡಿಯೂರಪ್ಪ ಮೇಲೆ ತೀವ್ರ ಒತ್ತಡ ಹಾಕಲಾಗುತ್ತಿದೆ. ಪ್ರತಾಪ್ ಗೌಡ ಪಾಟೀಲ್ ಹೊರತುಪಡಿಸಿದಂತೆ ಉಳಿದ ಎಲ್ಲಾ ಬಂಡಾಯಗಾರರು ಶಾಸಕರಾಗಿದ್ದಾರೆ. ಪ್ರತಾಪ್ ಗೌಡ ಪಾಟೀಲ್  ಕೂಡಾ ಶೀಘ್ರದಲ್ಲಿಯೇ  ಚುನಾವಣೆ ಎದುರಿಸಲಿದ್ದಾರೆ.

ಯಡಿಯೂರಪ್ಪ ವಿರೋಧಿ ಗುಂಪು ಸಂಪುಟದಲ್ಲಿ ಸ್ಥಾನ ಪಡೆಯದಿರುವ ಬಂಡಾಯ ಶಾಸಕರನ್ನು ಸಂಪರ್ಕಿಸಿದೆ. ಈ ಅಸಂತುಷ್ಟ ಮುಖಂಡರು ಸರ್ಕಾರವನ್ನು ಅಸ್ಥಿರಗೊಳಿಸದಂತೆ ನಿಗಾ ವಹಿಸಲಾಗಿದೆ ಎಂದು ಯಡಿಯೂರಪ್ಪ ಬೆಂಬಲಿಗರು ಹೇಳಿದ್ದಾರೆ.

Stay up to date on all the latest ರಾಜಕೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp