ಬೆದರಿಕೆ, ಒತ್ತಡ ತಂತ್ರಗಳಿಗೆ ಸಿಎಂ ಯಡಿಯೂರಪ್ಪ ಮಣಿಯುತ್ತಿದ್ದಾರೆಯೇ? ಬಿಜೆಪಿ ಹಳೆಯ ನಾಯಕರಿಗೆ ಹೆಚ್ಚಿದ ಆತಂಕ 

ರಾಜ್ಯ ಸಚಿವ ಸಂಪುಟದ ನೂತನ ಸಚಿವರ ಪ್ರಮಾಣ ವಚನ ನಂತರ ಖಾತೆ ಹಂಚಿಕೆಯಲ್ಲಿನ ಸಂಗೀತ ಖುರ್ಚಿಯಾಟದಿಂದ ಪ್ರತಿಯೊಬ್ಬರ ಬಾಯಿಗೆ ಆಹಾರವಾದಂತಾಗಿದ್ದಾರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರ.

Published: 27th January 2021 11:54 AM  |   Last Updated: 27th January 2021 11:54 AM   |  A+A-


Minor Irrigation Minister J C Madhuswamy at the Republic Day celebrations in Tumakuru on Tuesday

ನಿನ್ನೆ ತುಮಕೂರಿನಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ

Posted By : Sumana Upadhyaya
Source : The New Indian Express

ಬೆಂಗಳೂರು: ರಾಜ್ಯ ಸಚಿವ ಸಂಪುಟದ ನೂತನ ಸಚಿವರ ಪ್ರಮಾಣ ವಚನ ನಂತರ ಖಾತೆ ಹಂಚಿಕೆಯಲ್ಲಿನ ಸಂಗೀತ ಖುರ್ಚಿಯಾಟದಿಂದ ಪ್ರತಿಯೊಬ್ಬರ ಬಾಯಿಗೆ ಆಹಾರವಾದಂತಾಗಿದ್ದಾರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಕಚೇರಿಯ ಕಾರ್ಯದಕ್ಷತೆಯನ್ನು ಅವರ ಸಂಪುಟದ ಸಹೋದ್ಯೋಗಿಗಳು ಮತ್ತು ಪಕ್ಷದ ಕಾರ್ಯಕರ್ತರೇ ಪ್ರಶ್ನಿಸುವಂತಾಗಿದೆ. ಹಲವು ಸಚಿವರುಗಳ ಖಾತೆಗಳು ನಾಲ್ಕೈದು ದಿನಗಳಲ್ಲಿ ಹಲವು ಬಾರಿ ಬದಲಾವಣೆಯಾಗಿದೆ. ಮುಖ್ಯಮಂತ್ರಿಗಳ ವರ್ತನೆ ಹಲವರಿಗೆ ಸಿಟ್ಟು, ಬೇಸರ ತರಿಸಿದೆ.

ನನ್ನ ಖಾತೆಯನ್ನು ಎರಡು ಬಾರಿ ಬದಲಾವಣೆ ಮಾಡಲಾಯಿತು, ಆದರೂ ನಾನು ಸುಮ್ಮನಾಗಿದ್ದೇನೆ. ಮೂರನೇ ಬಾರಿ ಬದಲಾಯಿಸಿದಾಗ ನನಗೆ ಅವಮಾನವಾದಂತಾಯಿತು. ಕೊನೆಗೆ ಮುಖ್ಯಮಂತ್ರಿಗಳಿಗೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದೆ. ಆಗ ನನಗೆ ಹಿರಿಯರು ಬಂದು ಸಮಾಧಾನ ಮಾಡಿ ಮನವೊಲಿಸಿದರು ಎನ್ನುತ್ತಾರೆ ಜೆ ಸಿ ಮಾಧುಸ್ವಾಮಿ, ಅವರಿಗೆ ಕಳೆದ ಸೋಮವಾರ ರಾತ್ರಿ ಸಣ್ಣ ನೀರಾವರಿ ಖಾತೆ ನೀಡಲಾಯಿತು.

ಕಳೆದ ಜನವರಿ 21ರಿಂದ 25ರವರೆಗೆ ಮಾಧುಸ್ವಾಮಿಯವರ ಖಾತೆ ನಾಲ್ಕು ಬಾರಿ ಬದಲಾಗಿದೆ. ಅದು ಸಣ್ಣ ನೀರಾವರಿಯಿಂದ ಹಿಡಿದು ಕಾನೂನು, ಸಂಸದೀಯ, ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೈದ್ಯಕೀಯ ಶಿಕ್ಷಣ, ಹಜ್ ಮತ್ತು ವಕ್ಫ್ ಖಾತೆ, ಪ್ರವಾಸೋದ್ಯಮ, ಪರಿಸರ ಖಾತೆಗಳಿಗೆಲ್ಲಾ ಹೋಗಿ ಸುತ್ತಾಡಿಕೊಂಡು ಬಂದು ಸಣ್ಣ ನೀರಾವರಿ ಇಲಾಖೆಯಲ್ಲಿ ನಿಂತಿತು. ಮುಖ್ಯಮಂತ್ರಿಗಳ ಈ ವರ್ತನೆ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಮಾತ್ರವಲ್ಲದೆ ಲಿಂಗಾಯತ ಮಠಗಳ ಶ್ರೀಗಳವರೆಗೆ ಹೋಗಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಧುಸ್ವಾಮಿ ಮಧ್ಯೆ ಲಿಂಗಾಯತ ಸ್ವಾಮಿಗಳು ಸಂಧಾನ ನಡೆಸಿದರು ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

ಈ ಮಧ್ಯೆ, ಸಚಿವರಾದ ಆನಂದ್ ಸಿಂಗ್, ನಾರಾಯಣ ಗೌಡ, ಎಂಟಿಬಿ ನಾಗರಾಜ್ ಪಕ್ಷದ ಹಿರಿಯ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ. ಇನ್ನೂ ಸಚಿವನಾಗಿ ಒಂದು ವರ್ಷವೇ ಆಗಿಲ್ಲ, ಆಗಲೇ ಖಾತೆ ಬದಲಾವಣೆ ಮಾಡಿದರೆ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಆನಂದ್ ಸಿಂಗ್ ಬಿಜೆಪಿಯ ರಾಷ್ಟ್ರೀಯ ನಾಯಕರೊಬ್ಬರಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಡಾ ಕೆ ಸುಧಾಕರ್, ರಮೇಶ್ ಜಾರಕಿಹೊಳಿ ಮತ್ತು ಇತರ ಕೆಲವು ನಾಯಕರಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಳಬರನ್ನು ದೂರ ಸರಿಸಲಾಗಿದೆ.ಪಕ್ಷಕ್ಕೆ ಮತ್ತು ಯಡಿಯೂರಪ್ಪನವರ ನಿಷ್ಠಾವಂತರನ್ನು ಸಹ ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಕೂಡ ಬಿಜೆಪಿಯ ಹಳಬರಲ್ಲಿದೆ. ಮುಖ್ಯಮಂತ್ರಿಗಳು ಒತ್ತಡ ತಂತ್ರಗಳಿಗೆ ಸಿಲುಕಿದ್ದಾರೆ, ಪ್ರತಿಭಟನೆ, ಬೆದರಿಕೆ ಹೆಸರಿನಲ್ಲಿ ಅವರನ್ನು ಹೆದರಿಸಲಾಗುತ್ತಿದೆ ಎಂದು ಕೇಂದ್ರ ನಾಯಕರಿಗೆ ಕೆಲವರು ದೂರು ನೀಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. 


Stay up to date on all the latest ರಾಜಕೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp