ಎಪಿಎಂಸಿ ಮುಚ್ಚುವ ಹೇಳಿಕೆ: ಜಗದೀಶ್ ಶೆಟ್ಟರ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಕೃಷಿ ಕಾನೂನುಗಳ ವಿರುದ್ಧ ಮಂಗಳವಾರ ದೇಶಾದ್ಯಂತ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ, ಆದರೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯ ಬಗ್ಗೆ ನೀಡಿದ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ.
Published: 27th January 2021 11:31 AM | Last Updated: 27th January 2021 12:56 PM | A+A A-

ಜಗದೀಶ್ ಶೆಟ್ಟರ್
ಬೆಂಗಳೂರು: ಕೃಷಿ ಕಾನೂನುಗಳ ವಿರುದ್ಧ ಮಂಗಳವಾರ ದೇಶಾದ್ಯಂತ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ, ಆದರೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯ ಬಗ್ಗೆ ನೀಡಿದ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ.
ಈ ಸಂಬಂಧ ಹರಿಹಾಯ್ದಿರುವ ಕಾಂಗ್ರೆಸ್ ಸತಿವರ ಹೇಳಿಕೆ, ಎಂಪಿಎಂಸಿಗಳನ್ನು ಮುಚ್ಚಿಸಿ, ದೊಡ್ಡ ದೊಡ್ಡ ಕಂಪನಿಗಳ ಮರ್ಜಿಗೆ ರೈತರನ್ನ ಒಳಪಡಿಸುವ ಯೋಜನೆ ಇದಾಗಿದೆ ಇಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಹೊರಗೆ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದಾದರೆ ಎಪಿಎಂಸಿ ಮುಚ್ಚಿದರೆ ಏನಾಗುತ್ತದೆ? ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದರು.
ಯಾವ ಸ್ಥಳದಲ್ಲಿ ಕೃಷಿ ಉತ್ಪನ್ನಗಳು ಮಾರಾಟವಾಗುತ್ತವೆ ಎಂಬುದು ಮುಖ್ಯವಲ್ಲ. ರೈತರಿಗೆ ನ್ಯಾಯಯುತ ಬೆಲೆ ಸಿಗುವುದು ಮುಖ್ಯ. ಎಪಿಎಂಸಿ ಮುಚ್ಚಿದರೆ ರೈತರು ಬಂಡವಾಳ ಶಾಹಿಗಳ ಕಪಿಮುಷ್ಠಿಗೆ ಸಿಲುಕುತ್ತಾರೆ ಎಂಬುದು ತಪ್ಪು ಕಲ್ಪನೆ ಎಂದು ತಿಳಿಸಿದರು.
ರೈತರು ಬೆಳೆದ ಕೃಷಿ ಉತ್ಪನ್ನಗಳಿಂದ ಇಷ್ಟುವರ್ಷ ಎಪಿಎಂಸಿಯಲ್ಲಿ ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದರು. ತಿದ್ದುಪಡಿ ಕಾಯ್ದೆಯಿಂದ ಹೊರಗಡೆ ವಹಿವಾಟು ನಡೆಸಲು ಅವಕಾಶ ಇದೆ. ಇದರ ಲಾಭ ನೇರವಾಗಿ ರೈತರಿಗೆ ಸಿಗಲಿದೆ.
ಎಪಿಎಂಸಿಯಲ್ಲಿ ಮಧ್ಯವರ್ತಿಗಳ ಹಿತಬೇಕೋ, ಹೊರಗಡೆ ರೈತರ ಪ್ರಗತಿ ಬೇಕೋ ಎಂದು ರೈತರೇ ನಿರ್ಧರಿಸಲಿ ಎಂದು ಹೇಳಿದ್ದರು.