ರಾಜ್ಯಪಾಲ ವಾಜುಭಾಯ್ ವಾಲಾರ ಭಾಷಣ ಸುಳ್ಳಿನ ಕಂತೆ: ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರದ್ದು ಸ್ಪಷ್ಟತೆಯಿಲ್ಲದ ಧ್ಯೇಯ ಧೋರಣೆ ಮುನ್ನೋಟಗಳಿಲ್ಲದ ದೂರದೃಷ್ಟಿಯಿಲ್ಲದ ಹಿಂದೆಂದೂ ಇತಿಹಾಸದಲ್ಲಿ ಕೇಳಿರದ ಕಳಪೆ ಭಾಷಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

Published: 28th January 2021 03:48 PM  |   Last Updated: 28th January 2021 03:48 PM   |  A+A-


siddaramaiah

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

Posted By : Vishwanath S
Source : UNI

ಬೆಂಗಳೂರು: ರಾಜ್ಯಪಾಲರದ್ದು ಸ್ಪಷ್ಟತೆಯಿಲ್ಲದ ಧ್ಯೇಯ ಧೋರಣೆ ಮುನ್ನೋಟಗಳಿಲ್ಲದ ದೂರದೃಷ್ಟಿಯಿಲ್ಲದ ಹಿಂದೆಂದೂ ಇತಿಹಾಸದಲ್ಲಿ ಕೇಳಿರದ ಕಳಪೆ ಭಾಷಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ವಿಧಾನಸೌಧದಲ್ಲಿಂದು ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯಪಾಲರ ಮೂಲಕ ಸರ್ಕಾರ ಭಾಷಣ ಮಾಡಿಸಿದೆ. ರಾಜ್ಯಪಾಲರು ಸರ್ಕಾರ ಬರೆದುಕೊಟ್ಟಿದನ್ನು ಓದುತ್ತಾರೆ. ಭಾಷಣದಲ್ಲಿ ಸ್ಪಷ್ಟತೆ.ಇರಬೇಕು. ಸರ್ಕಾರದ.ನಿಲುವು. ಯೋಜನೆಗಳು, ಧ್ಯೆಯ ಧೊರಣೆಗಳು, ಮುನ್ನೋಟ ಇರಬೇಕು. ಆದರೆ, ಈ ಭಾಷಣ ನೋಡಿದಾಗ ಯಾವುದೂ ಕಾಣಿಸುವುದಿಲ್ಲ. ಇದೊಂದು ಸುಳ್ಳಿನ ಕಂತೆ ಎಂದರು.

ರಾಜ್ಯಪಾಲರ ಬಾಯಿಂದ ಸರ್ಕಾರ ಸುಳ್ಳು ಹೇಳಿಸಿದೆ. ನಮ್ಮ ಸರ್ಕಾರದ ಸಾಧನೆ ಗಳನ್ನೆ ಪುನರುಚ್ಚಾರ ಮಾಡಿಸಿದ್ದಾರೆ. ಭಾಷಣಕ್ಕೆ ಗೊತ್ತು ಗುರಿ ಏನು ಇಲ್ಲ. ಒಂದು ದೂರದೃಷ್ಟಿ ಇರಬೇಕು. ಇನ್ನು ಎರಡು ವರ್ಷ ಇದೆ. ಯಾವುದೇ ದೂರದೃಷ್ಟಿ ಇವರ ಭಾಷಣದಲ್ಲಿಲ್ಲ ಎಂದರು.

ರಾಜ್ಯಪಾಲರು ಭಾಷಣದಲ್ಲಿ ಎಲ್ಲಿಯೂ ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರಾಜ್ಯ ಅಭಿವೃದ್ಧಿಯಲ್ಲಿ 10 ವರ್ಷ ಹಿಂದೆ ಹೋಗಿದೆ. ಅನುದಾನ ಹಂಚಿಕೆಗೆ ಹಣ ಕೇಳಿದರೆ ಸರ್ಕಾರ ಕೊರೋನಾ ನೆಪ ಹೇಳುತ್ತಿದೆ. ಕೊರೊನಾ, ನಿರಾವರಿ ಯೋಜನೆಗಳಿಗೆ ಹಣ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದು ಒಂದು ವರ್ಷ ಏಳು ತಿಂಗಳಾಯಿತು. ಇಷ್ಟು ದಿನದಲ್ಲಿ ಇವರ ಸಾಧನೆ ಏನು ಅಂತ ಹೇಳಲಿಲ್ಲ. ಈ ಸರ್ಕಾರದ ಸಾಧನೆ ಶೂನ್ಯ. ಇದು ಯಾವುದೇ ರಾಜ್ಯದ ಪ್ರಗತಿಯ ದೂರ ದೃಷ್ಟಿಇಲ್ಲದ ಕಳಪೆ ಭಾಷಣ ಎಂದು ಟೀಕಿಸಿದರು.

ಬೆಳಗಾವಿಯಲ್ಲಿ ಎರಡು ಬಾರಿ ಅಧಿವೇಶನ ಮಾಡಬೇಕಿತ್ತು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸ್ಥಾಪನೆ ಬಗ್ಗೆ ಮಾತನಾಡುವ ಸಚಿವ ಉಮೇಶ್ ಕತ್ತಿ ಬೆಳಗಾವಿ ಅಧಿವೇಶನ ಬಗ್ಗೆ ಮಾತನಾಡಿಲ್ಲ. ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಸುವರ್ಣ ಸೌಧ ಕಟ್ಟಿಸಿರುವುದು ಏಕೆ.?ಇವರಿಗೆ ಬದ್ಧತೆ ಇಲ್ಲ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ 5 ವರ್ಷಗಳಲ್ಲಿಯೂ ಬೆಳಗಾವಿ ಅಧಿವೇಶನ ಮಾಡಿದ್ದೆವು. ಬೆಳಗಾವಿಯಲ್ಲಿ ಸರ್ಕಾರ ಅಧಿವೇಶನ ನಡೆಸದೇ ಉತ್ತರ ಕರ್ನಾಟಕದ ಜನರಿಗೆ ದ್ರೋಹ ಮಾಡಿದೆ. ವಿಧಾನಸೌಧದಲ್ಲಿನ ಕೆಲವು ಇಲಾಖೆಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡುವಂತೆ ಪ್ರಸ್ತಾಪ ಮಾಡಿದ್ದನ್ನು ಸರ್ಕಾರ ಪಾಲನೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಅವರು ಮಾತನಾಡುವುದು ಉದ್ಧಟತನ, ಬೇಜವಾಬ್ದಾರಿತನದಿಂದ ಮಾತನಾಡುತ್ತಾರೆ. ಮಹಾಜನ ವರದಿಯೆ ಅಂತಿಮ. ಈಗ ಗಡಿ ಸಮಸ್ಯೆಯೇ ಇಲ್ಲ. ಹೀಗಿದ್ದಾಗ್ಯೂ ಮಹಾರಾಷ್ಟ್ರದ ಮುಖ್ಯಮಂತ್ರಿ ತಮ್ಮ ಅಸ್ತಿತ್ವಕ್ಕಾಗಿ ಮಾತನಾಡುತ್ತಾರೆ.ಅವರ ಉದ್ಧಟತನ ಸಹಿಸಲಾಗದು ಎಂದರು.  ನಾಳೆ ನಡೆಯಲಿರುವ ಉಪ ಸಭಾಪತಿ ಸ್ಥಾನದ ಚುನಾವಣೆಗೆ ಕಾಂಗ್ರೆಸ್ ನಿಂದ ಕೆ.ಸಿ.ಕೊಂಡಯ್ಯ ಅವರನ್ನು ಕಣಕ್ಕಿಳಿಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಆತ್ಮಸಾಕ್ಷಿಯಾಗಿ ಮತಹಾಕುತ್ತಾರೆ ಎಂಬ ವಿಶ್ವಾಸವಿದೆ. ಇದರಲ್ಲಿ ಸೋಲುಗೆಲುವು ಮುಖ್ಯವಲ್ಲ. ಜಾತ್ಯಾತೀತ ಎನ್ನುವ ಜೆಡಿಎಸ್ ಏನು ಮಾಡುತ್ತದೆಯೋ ನೋಡೋಣ. ಉಪಸಭಾಪತಿ ಚುನಾವಣೆ ಮೂಲಕ ಜೆಡಿಎಸ್ ಬಿಜೆಪಿಯ ಬಿ.ಟೀಂ ಹೌದೋ ಅಲ್ಲವೋ ಎಂಬುದು ಸ್ಪಷ್ಟವಾಗಲಿದೆ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ  ನುಡಿದರು.

Stay up to date on all the latest ರಾಜಕೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp