ಖಾತೆ ಬದಲಾವಣೆಯಾದಾಗ ಅಸಮಾಧಾನ ಸಹಜ, ಆದರೆ ನನಗೆ ಅಸಮಾಧಾನ‌ ಇಲ್ಲ: ಸಚಿವ ಆನಂದ್ ಸಿಂಗ್

ಸಚಿವ ಸ್ಥಾನ ಬದಲಿಸಿದಾಗ ಅಸಮಾಧಾನ ಸಹಜ.ಆದರೆ ನನಗೆ ಅಸಮಾಧಾನ ಇಲ್ಲ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದರು.

Published: 29th January 2021 11:50 PM  |   Last Updated: 30th January 2021 12:37 PM   |  A+A-


MLA Anand Singh

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಬೆಂಗಳೂರು: ಸಚಿವ ಸ್ಥಾನ ಬದಲಿಸಿದಾಗ ಅಸಮಾಧಾನ ಸಹಜ.ಆದರೆ ನನಗೆ ಅಸಮಾಧಾನ ಇಲ್ಲ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಆನಂದ್ ಸಿಂಗ್ ಅವರು, ಎಲ್ಲರಿಗೂ ಸಮಾಧಾನ ಮಾಡಲು ಬದಲಾವಣೆ ಸಹಜ. ಖಾತೆ ದೊಡ್ಡದು, ಚಿಕ್ಕದು ಅಂತ ಇಲ್ಲ. ಮುಖ್ಯಮಂತ್ರಿ ಜೊತೆ ಮಾತುಕತೆ ಮಾಡಿದ್ದೇನೆ. ಯಾವುದೇ ಖಾತೆ ಕೊಟ್ರು ನಿಭಾಯಿಸಿ ಮುಖ್ಯಮಂತ್ರಿಗೆ ಸಹಕಾರ ಕೊಡಬೇಕು. ಸರ್ಕಾರಿ ಕೆಲಸ ದೇವರ ಕೆಲಸ ಅಂತ ವಿಧಾನಸೌಧದಲ್ಲಿ ಬರೆದಿದ್ದಾರೆ ಎಂದು ಹೇಳಿದ್ದಾರೆ. 

ಮುಂದೆ ಮತ್ತೆ ರೀ ಷಫಲ್ ಆಗಲಿದೆ ಅಂತ ಹೇಳ್ತಿದ್ದಾರೆ. ಅರಣ್ಯ ಇಲಾಖೆ ಖಾತೆ ನೀಡಿದ್ದಾಗ ಅನೇಕ ಕೆಲಸ ಮಾಡಿದ್ದೇನೆ. ಡೀಮ್ಡ್ ಫಾರೆಸ್ಟ್ ಮಾಡಲಾಗಿದೆ. ಲಿಂಬಾವಳಿ ಓಡಾಡಿದ್ರೆ, ಒಂದುವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಪರಿಸರ ಖಾತೆಕೊಟ್ಟಿದ್ದು,ಅದನ್ನೂ ನಿಭಾಯಿಸಿದ್ದೆ. ಹಜ್ ಮತ್ತು ವಕ್ಫ್ ಖಾತೆಯನ್ನೂ ನೀಡಿದ್ದಾರೆ. ಅದನ್ನ ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನೆಯಾಗಬೇಕು. ಆಗ ಇತರರಿಗೂ ಖಾತೆ ನೀಡಬೇಕು. ಆಗ ಬೇರೆ ಖಾತೆ ನೀಡಿದ್ರೂ ನಿಭಾಯಿಸುತ್ತೇನೆ. ಇಲ್ಲ ಬೇರೆಯವರಿಗೆ ಬಿಟ್ಟುಕೊಡಲು ಸೂಚಿಸಿದ್ರೂ, ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ. ಯುವಕರಿಗೂ ಸ್ಥಾನ ನೀಡಬೇಕಿದೆ ಎಂದು ತಿಳಿಸಿದರು. 

ಖಾತೆ ಸಿಗದಿರುವ ಬಗ್ಗೆ ನಮ್ಮ ಪಕ್ಷದ ಹಿರಿಯ ಸದಸ್ಯರು ಸಭೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಿರಿಯರಿಗೂ ಸಚಿವ ಸ್ಥಾನ ನೀಡಬೇಕು. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಬೇಕು. ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನೆಯಾಗಬೇಕು. ಆಗ ಇತರರಿಗೂ ಖಾತೆ ನೀಡಬೇಕು. ಆಗ ಬೇರೆ ಖಾತೆ ನೀಡಿದರೂ ನಿಭಾಯಿಸುತ್ತೇನೆ. ಅಥವಾ ಸಚಿವ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಲು ಸೂಚಿಸಿದರೂ ನಾನು ಸಿದ್ಧನಿದ್ದೇನೆ. ಹಿರಿಯರ ಜೊತೆಗೆ ಯುವಕರಿಗೂ ಸಚಿವ ಸ್ಥಾನ ನೀಡಬೇಕಿದೆ. ಎಲ್ಲರೂ ನನ್ನಂತೆಯೇ ಇರಬೇಕು ಅಂತೇನಿಲ್ಲ. ನನಗೆ ಯಾವುದೇ ಅಸಮಾಧಾನ ಇಲ್ಲ. ಯಾವುದೇ ಖಾತೆ ನೀಡಿದ್ರೂ ಅಸಮಾಧಾನ ಇಲ್ಲ. ಇಂದೇ ಹೊಸ ಖಾತೆಯ ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದ ಆನಂದ್ ಸಿಂಗ್ ಖಾತೆ ಬದಲಾವಣೆಯ ನಂತರ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಖಾತೆಗಿಂತಲೂ ಶಾಸಕ ಸ್ಥಾನವೇ ದೊಡ್ಡದು ಎನ್ನುವ ಮೂಲಕ ಮೂಲಸೌಕರ್ಯ, ವಕ್ಫ್ ಇಲಾಖೆಯ ಜವಾಬ್ದಾರಿ ನೀಡಿದ್ದಕ್ಕೆ ಬೇಸರ ಹೊರಹಾಕಿದ್ದರು. ಅಲ್ಲದೆ, ರಾಜೀನಾಮೆ ಬಗ್ಗೆ ನಾಳೆಯವರೆಗೂ ಕಾದು ನೋಡಿ ಎನ್ನುವ ಮೂಲಕ ಸಸ್ಪೆನ್ಸ್​ ಕಾಯ್ದುಕೊಂಡಿದ್ದರು.
 


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp