ಮಹತ್ವದ ಖಾತೆಗಳ ಪಡೆದುಕೊಳ್ಳುವ ಮೂಲಕ ವ್ಯಾಪಾರಕ್ಕೆ ನಿಂತಿದ್ದಾರಾ?: ಎಂ.ಪಿ. ರೇಣುಕಾಚಾರ್ಯ

ಕೆಲವರು ಎರಡು ಮೂರು ಖಾತೆ ಬೇಕೆಂದು ಒತ್ತಾಯಿಸುತ್ತಿದ್ದಾರೆ.. ವ್ಯಾಪಾರಕ್ಕಾಗಿ ಸಚಿವ ಸ್ಥಾನ ಬೇಕಾ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ. 

Published: 29th January 2021 11:35 PM  |   Last Updated: 30th January 2021 12:38 PM   |  A+A-


renukacharya

ರೇಣುಕಾಚಾರ್ಯ

Posted By : Srinivasamurthy VN
Source : UNI

ಬೆಂಗಳೂರು:  ಕೆಲವರು ಎರಡು ಮೂರು ಖಾತೆ ಬೇಕೆಂದು ಒತ್ತಾಯಿಸುತ್ತಿದ್ದಾರೆ.. ವ್ಯಾಪಾರಕ್ಕಾಗಿ ಸಚಿವ ಸ್ಥಾನ ಬೇಕಾ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ. 

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲವರು ಎರಡು ಮೂರು ಖಾತೆ ಬೇಕು ಎಂದು ಮುಖ್ಯಮಂತ್ರಿ ಬಳಿ ಲಾಭಿ ಮಾಡುತ್ತಾ ಕುಳಿತಿದ್ದಾರೆ. ಅಂದು ಹಮಾಲಿ ಕೆಲಸ ಮಾಡಿದ್ದು ನಾವು. ಇಂದು ಕೆಲವರು ಲಾಭಕ್ಕಾಗಿ ಹುದ್ದೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿ ಕಾರಿದರು.

ಸರ್ಕಾರ, ನಾಯಕತ್ವ ವಿರುದ್ಧ ನಮ್ಮ ಹೋರಾಟ ಅಲ್ಲ. ಕೆಲವರು ಇಂತದ್ದೇ ಖಾತೆ ಬೇಕು ಅಂತ ಕುಳಿತಿದ್ದಾರೆ. ವ್ಯಾಪಾರಕ್ಕಾಗಿ ದೊಡ್ಡ ಸಚಿವ ಸ್ಥಾನ ಬೇಕಾ?. ಮಂತ್ರಿಗಳು ಹಾಗೂ ಸರ್ಕಾರದ ವರ್ಚಸ್ಸು ಕಡಿಮೆಯಾಗಲಿದೆ. ಎಲ್ಲಾ ಸಚಿವರು ಅಂತ ಹೇಳಲ್ಲ, ಕೆಲವರು ಈ ರೀತಿ ಮಾಡ್ತಿದ್ದಾರೆ. ಕೆಲವರು ಬಹಳ ಉದ್ಧಟತನ ಮಾಡ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬರಬೇಕು ಅಂತ ಸಂಘಟನೆ ಮಾಡಿತ್ತು. ಅಧಿಕಾರ ಬೇರೆಯವರು ಅನುಭವಿಸುತ್ತಿದ್ದಾರೆ. ಸಚಿವ ಸ್ಥಾನ ಕೊಡುವುದು ಗೌರವಕ್ಕಾಗಿ, ದೊಡ್ಡ ಖಾತೆ ಯಾಕೆ? ನಮ್ಮ ಪೂರ್ವಜರು ತೆಂಗಿನ ಮರ ನೆಟ್ಟಿದ್ರು, ಬೇರೆಯವರು ಎಳನೀರು ಕುಡಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಹಿರಿಯ ಶಾಸಕರು ಸಭೆ ಸೇರಿದ್ದಾರೆನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ನೇತೃತ್ವದಲ್ಲಿ ಅಂತ ಇಲ್ಲ, ನಾವೆಲ್ಲಾ ಸಮಾನ ಮನಸ್ಕರು. ಬಹಳ ಜನ ಬಿಜೆಪಿ ಶಾಸಕರಿದ್ದೇವೆ. ಪಕ್ಷ ಹಾಗೂ ಮುಖ್ಯಮಂತ್ರಿಗೆ ಮುಜುಗರ ಆಗಬಾರದು ಅಂತ ಸುಮ್ಮನೆ ಇದ್ದೇವೆ. ಇನ್ನೂ ಎರಡು ವರ್ಷ ಸ್ಥಿರ ಸರ್ಕಾರ ನೀಡಬೇಕು. ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು, ಬಂದ್ರೆ ಅದರ ವಿರುದ್ಧ ನಿಲ್ಲುತ್ತೇನೆ. ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಬೇಕು ಅನ್ನೋ ಅಪೇಕ್ಷೆ ಇದೆ. ಮೊದಲು ರಾಜಿನಾಮೆ ಕೊಟ್ಟು ಬಂದಿದ್ದು ಆನಂದ್ ಸಿಂಗ್. ಅವರಿಗೆ ನಿಮ್ಮ ಪರವಾಗಿ ಇರೋದಾಗಿ ಹೇಳಿದ್ದೆವು ಎಂದು ರೇಣಕಾಚಾರ್ಯ ಸ್ಪಷ್ಟಪಡಿಸಿದರು.

ಬೇರೆ ಪಕ್ಷದಿಂದ ಬಂದವರಿಗೆ ಗೌರವ
ನನ್ನ ಕ್ಷೇತ್ರ ಜನತೆ ಕಾಯುತ್ತಿದ್ದಾರೆ, ಮೂರು ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಅಬಕಾರಿ ಖಾತೆ ಕೊಟ್ಟಾಗ ಉತ್ತಮವಾಗಿ ನಿಭಾಯಿಸಿದ್ದೇನೆ. ಕಳೆದ ವಾರ ನಡೆದ ಘಟನೆ ನನಗೆ ನೋವು ತಂದಿದೆ. ಬೇರೆ ಪಕ್ಷದಿಂದ ಬಂದವರನ್ನು ಗೌರವಿಸುತ್ತಾರೆ. ನಾವು ಹಿರಿಯರಲ್ವಾ, ನಮಗಿಂತ ಹಿರಿಯರಿಲ್ವಾ? ನಾನು ಬಹಿರಂಗವಾಗಿ ಹೇಳಿಕೆ ನೀಡಲ್ಲ. ಸಿಎಂ ಯಡಿಯೂರಪ್ಪ ಅವರು ಶಾಸಕಾಂಗ ಪಕ್ಷದ ಸಭೆ ಕರೆದಾಗ, ನೇರವಾಗಿ ಅಲ್ಲಿಯೇ ಹೇಳುತ್ತೇನೆ. ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಅವರ ಬಳಿ ಹೇಳುತ್ತೇನೆ ಎಂದು ಹೇಳಿದರು.
 


Stay up to date on all the latest ರಾಜಕೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp