ಮಹಿಳೆಯ ಬಗ್ಗೆ ಹಗುರ ಮಾತು ಸರಿಯಲ್ಲ.. ಮೈಶುಗರ್ ಕಾರ್ಖಾನೆ ಬಗ್ಗೆ ಸಿಎಂ ಆಗಿದ್ದಾಗ ಏಕೆ ಮಾತನಾಡಲಿಲ್ಲ: ಎಚ್ ಡಿಕೆ ವಿರುದ್ಧ ಸಂಸದೆ ಸುಮಲತಾ

ಕೃಷ್ಣ ರಾಜ ಸಾಗರ ಅಣೆಕಟ್ಟು ಬಿರುಕು ವಿಚಾರವಾಗಿ ತಮ್ಮ ವಿರುದ್ಧ ಮಾತನಾಡಿರುವ ಮಾಜಿ ಸಿಎಂ ಎಚ್ ಡಿ ಕುಮಾರ ಸ್ವಾಮಿ ಅವರ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಅಂಬರಿಷ್ ಅವರು ವಾಗ್ದಾಳಿ ನಡೆಸಿದ್ದು, ಮಹಿಳೆಯ ಬಗ್ಗೆ ಹೀಗೆಲ್ಲಾ ಹಗುರವಾಗಿ ಮಾತನಾಡುವುದು ಸರಿಯೇ?.. ಮೈಶುಗರ್  ಕಾರ್ಖಾನೆ ಬಗ್ಗೆ ಸಿಎಂ ಆಗಿದ್ದಾಗ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್

ಬೆಂಗಳೂರು: ಕೃಷ್ಣ ರಾಜ ಸಾಗರ ಅಣೆಕಟ್ಟು ಬಿರುಕು ವಿಚಾರವಾಗಿ ತಮ್ಮ ವಿರುದ್ಧ ಮಾತನಾಡಿರುವ ಮಾಜಿ ಸಿಎಂ ಎಚ್ ಡಿ ಕುಮಾರ ಸ್ವಾಮಿ ಅವರ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಅಂಬರಿಷ್ ಅವರು ವಾಗ್ದಾಳಿ ನಡೆಸಿದ್ದು, ಮಹಿಳೆಯ ಬಗ್ಗೆ ಹೀಗೆಲ್ಲಾ ಹಗುರವಾಗಿ ಮಾತನಾಡುವುದು ಸರಿಯೇ?.. ಮೈಶುಗರ್  ಕಾರ್ಖಾನೆ ಬಗ್ಗೆ ಸಿಎಂ ಆಗಿದ್ದಾಗ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ಎಚ್‌ಡಿಕೆ ಅವರ ಮಾತುಗಳಿಂದ ಅವರ ಸಂಸ್ಕಾರ ಗೊತ್ತಾಗ್ತಿದೆ. ಅವರ ವ್ಯಕ್ತಿತ್ವ ಎಂತದ್ದು ಎನ್ನುವುದನ್ನು ಅವರೇ ಬಿಚ್ಚಿಟ್ಟುಕೊಳ್ತಿದ್ದಾರೆ. ಕೆಆರ್ ಎಸ್ ಬಗ್ಗೆ ನಾನು ಕಾಳಜಿ ವಹಿಸ್ತಿದ್ದೇನೆ, ಇವರಿಗೆ ಯಾಕೆ ಸಮಸ್ಯೆ ಆಗ್ತಿದೆ. ಮಂಡ್ಯದಲ್ಲಿ ಏನೇನು ನಡೆಯುತ್ತಿದೆ ಎಲ್ಲ ಗೊತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್ ಎಸ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ
ಕೆಆರ್ ಎಸ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ವಿಚಾರವನ್ನು ಅಲ್ಲಿನ ರೈತರು ನನ್ನ ಮುಂದೆ ಹೇಳಿದ್ದಾರೆ. ನಾನು ಕೆಅರ್ ಎಸ್ ಬಗ್ಗೆ ಸಂಸತ್ ನಲ್ಲಿ ಮಾತನಾಡಿದ್ದೇನೆ. ಅಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದೇನೆ. ಮುರುಗೇಶ್ ನಿರಾಣಿಯವರಿಗೆ ಅದನ್ನು ತೋರಿಸಿದ್ದೇನೆ. ಅಕ್ರಮ ಗಣಿಗಾರಿಕೆ ಬಗ್ಗೆ ಎಕ್ಸ್ ಫೋಸ್ ಮಾಡಿದ್ದೇನೆ. ಇದಕ್ಕೆ ಬ್ರೇಕ್ ಹಾಕಿದರೆ ಸಾವಿರಾರು ಕೋಟಿ ಸರ್ಕಾರಕ್ಕೆ ಆದಾಯ ಬರುತ್ತೆ. ಈ ಆದಾಯ ಸರ್ಕಾರಕ್ಕೆ ತಾನೇ ಬರೋದು, ಈಗ ಯಾಕೆ ಮುತುವರ್ಜಿ ವಹಿಸಿ ಬರ್ತಾರೋ ಗೊತ್ತಿಲ್ಲ ಎಂದು ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ಸುಮಲತಾ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಆಗಿದ್ದಾಗ ಏಕೆ ಮಾತನಾಡಲಿಲ್ಲ
ರೈತರ ಕಾಳಜಿಗಾಗಿ ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಆರಂಭಿಸುವಂತೆ ನಾನು ಸರ್ಕಾರಕ್ಕೆ ಒತ್ತಾಯಿಸಿದ್ದೆ. ಅಂತಹದರಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ನಾನು ಒತ್ತಾಯಿಸಿದ್ದೇನೆ ಎಂದು ಆರೋಪಿಸುತ್ತಿರುವುದು ಸರಿಯಲ್ಲ. 400 ಕೋಟಿ ರೂ.ನಷ್ಟು  ಅದರಲ್ಲಿ ಭ್ರಷ್ಟಾಚಾರವಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ ಹಿಂದೆ ಸಿಎಂ ಆಗಿದ್ದಾಗ ಏಕೆ ಈ ಬಗ್ಗೆ ಮಾತನಾಡಲಿಲ್ಲ. ಈಗ ಏಕೆ ಆರೋಪ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಕಾರ್ಖಾನೆಯನ್ನು ಯಾವುದೇ ಮಾಡೆಲ್ ನಲ್ಲಿ ಬೇಕಾದರೂ ತೆರೆಯಲಿ. ಅದರ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು, ಸರ್ಕಾರವೇ ಅದನ್ನು ಪ್ರಾರಂಭ  ಮಾಡಲೆಂದು ನಾನು ಒತ್ತಾಯ ಮಾಡುತ್ತಲೇ ಇದ್ದೇನೆ. ನಾನು ಖಾಸಗಿಕರಣದಲ್ಲೇ ಆಗಬೇಕೆಂದು ಹೇಳಿಲ್ಲ. ನನಗೆ ಯಾವುದೇ ವಿರೋಧವಿಲ್ಲ. ಮೈಶುಗರ್ ಅಧಿಕಾರಿಗಳು ಇದನ್ನು ಸರ್ಕಾರ ನಡೆಸಲು ಕಷ್ಟ ಎಂದಿದ್ದಾರೆ. ನಾನು ಖಾಸಗಿಯವರಿಗೆ ಕೊಡಿ ಎಂದು ಒತ್ತಾಯಿಸಿಲ್ಲ. ಕಾರ್ಖಾನೆ ಪುನಾರಂಭಿಸುವಂತೆ ನಾನು  ಪ್ರತಿನಿತ್ಯ ಒತ್ತಾಯಿಸುತ್ತಲೇ ಇದ್ದೇನೆ ಎಂದು ಹೇಳಿದರು.

ಈ ಹಿಂದೆ ಸುಮಲತಾ ಅವರ ವಿರುದ್ಧ ಕಿಡಿಕಾರಿದ್ದ ಎಚ್ ಡಿ ಕುಮಾರಸ್ವಾಮಿ ಅವರು, 'ಮಂಡ್ಯ ಜಿಲ್ಲೆಗೆ ಅಂತಹ ಸಂಸದರು ಹಿಂದೆಯೂ ಬಂದಿಲ್ಲ, ಮುಂದೆಯೂ ಬರೋದಿಲ್ಲ!. ಕೆಆರ್ ಎಸ್ ನ ಏನೋ ಇವರೇ ರಕ್ಷಣೆ ಮಾಡ್ತಾರಂತಲ್ಲ, ಬಹುಶಃ ಇವರನ್ನೇ ಕೆಆರ್‌ಎಸ್‌ ಡ್ಯಾಮ್ ಬಾಗಿಲಿಗೆ ನೀರು ಹೋಗದ ರೀತಿ ಬಾಗಿಲಿಗೆ ಇವರನ್ನೇ ಮಲಗಿಸಿಬಿಟ್ರೆ ಕಾರ್ಖಾನೆ ಬಿಗಿಯಾಗಿಬಿಡುತ್ತದೆ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com