ಗೂಂಡಾ ಸಂಸ್ಕೃತಿ ಹಿನ್ನೆಲೆಯವರಿಗೆ ಆದ್ಯತೆ: ರೌಡಿ ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷ, ಯುವ ಕಾಂಗ್ರೆಸ್ ಗೆ 'ಗೂಂಡಾಧ್ಯಕ್ಷರು'

2022 ರ ಜನವರಿಗೆ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಯುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ಡಿಕೆ ಶಿವಕುಮಾರ್ ಮತ್ತು ಮೊಹಮದ್ ನಲಪಾಡ್
ಡಿಕೆ ಶಿವಕುಮಾರ್ ಮತ್ತು ಮೊಹಮದ್ ನಲಪಾಡ್

ಬೆಂಗಳೂರು: 2022 ರ ಜನವರಿಗೆ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಯುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯ ಮತ್ತು  ಡಿಕೆ ಶಿವಕುಮಾರ್ ನಡುವೆ ನಡೆದ ಕದನದಿಂದಾಗಿ ಯುವ ಕಾಂಗ್ರೆಸ್‌ ಅಧ್ಯಕ್ಷರ ಅವಧಿ ಮೊಟಕುಗೊಳಿಸಿ ಜನವರಿ ನಂತರ ಕ್ರಿಮಿನಲ್‌ ಹಿನ್ನಲೆಯ ವ್ಯಕ್ತಿಗೆ ಪಟ್ಟಕಟ್ಟುವುದಕ್ಕೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಿರ್ಧರಿಸಿದೆ ಎಂದು ಟ್ವೀಟ್ ಮಾಡಿದೆ. 

ಗೂಂಡಾ ಸಂಸ್ಕೃತಿಯ ಹಿನ್ನೆಲೆಯವರಿಗೆ ಮಾತ್ರ ಮಣೆ ಹಾಕುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಬಿಜೆಪಿ ಆರೋಪಿಸಿದೆ. 31 ಜನವರಿ 2022 ರ ನಂತರ ಹೊಸ ಸಾಧನೆ ಮಾಡಲಿದೆ. ರೌಡಿ ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷ,  ಕ್ರಿಮಿನಲ್ ಹಿನ್ನಲೆಯ ವ್ಯಕ್ತಿ ಯುವ ಕಾಂಗ್ರೆಸ್‌ ಅಧ್ಯಕ್ಷ ಎಂದು ಬಿಜೆಪಿ ಟಾಂಗ್ ನೀಡಿದೆ. 

ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ, ನೋಟು ಅಮಾನ್ಯೀಕರಣ ವೇಳೆ ನಗದು ವಿಲೇವಾರಿ, ಭೂ ಹಗರಣ, ಆದಾಯಕ್ಕೆ ಮೀರಿದ ಆಸ್ತಿ ಸಂಗ್ರಹ, ಪೂರ್ವಾಶ್ರಮದಲ್ಲಿ ರೌಡಿ - ಇದು ಕೆಪಿಸಿಸಿ ಅಧ್ಯಕ್ಷರ ಸಾಧನೆ. ಇಂತವರಿಗೆ ಮೊಹ್ಮದ್ ನಲಪಾಡ್ ಅವರಂಥಹ ಗೂಂಡಾಗಳು ಮೇಧಾವಿಗಳಂತೆ ಕಾಣುವುದರಲ್ಲಿ ಯಾವುದೇ ಅತಿಶಯವಿಲ್ಲ ಎಂದು ಲೇವಡಿ ಮಾಡಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com