ಬಂಡಾಯ ಶಾಸಕರಿಗೆ ಪಕ್ಷ ತಕ್ಕ ಪಾಠ ಕಲಿಸಲಿದೆ: ಬಿಎಸ್'ವೈ ಪರ ಈಶ್ವರಪ್ಪ ಬ್ಯಾಟಿಂಗ್

ಬಿಜೆಪಿಯಲ್ಲಿ ಹೆಚ್ಚಾಗಿ ಮಾತನಾಡುತ್ತಿರುವ ಬಸನಗೌಡಪಾಟೀಲ ಯತ್ನಾಳ್, ಸಿ.ಪಿ‌.ಯೋಗೇಶ್ವರ್, ರೇಣುಕಾಚಾರ್ಯ ಹಾಗೂ ಇತರರಿಗೆ ಯಾವಾಗ, ಹೇಗೆ ಬುದ್ಧಿ ಕಲಿಸಬೇಕು ಎಂಬುದು ಪಕ್ಷಕ್ಕೆ ಗೊತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಗುರುವಾರ ಹೇಳಿದ್ದಾರೆ.
ಈಶ್ವರಪ್ಪ
ಈಶ್ವರಪ್ಪ

ಮೈಸೂರು: ಬಿಜೆಪಿಯಲ್ಲಿ ಹೆಚ್ಚಾಗಿ ಮಾತನಾಡುತ್ತಿರುವ ಬಸನಗೌಡಪಾಟೀಲ ಯತ್ನಾಳ್, ಸಿ.ಪಿ‌.ಯೋಗೇಶ್ವರ್, ರೇಣುಕಾಚಾರ್ಯ ಹಾಗೂ ಇತರರಿಗೆ ಯಾವಾಗ, ಹೇಗೆ ಬುದ್ಧಿ ಕಲಿಸಬೇಕು ಎಂಬುದು ಪಕ್ಷಕ್ಕೆ ಗೊತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಗುರುವಾರ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಮ್ಮ‌ ಪಕ್ಷದಲ್ಲಿ ಅಪ್ಪ‌ ಅಮ್ಮ ಇದ್ದಾರೆ. ಅದಕ್ಕಾಗಿಯೇ ವರಿಷ್ಠರು ಎಲ್ಲರ ಅಭಿಪ್ರಾಯ ಆಲಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಕುರಿತು ಅನೇಕರು ಹೇಳಿಕೆ ನೀಡಿದಾಗ್ಯೂ, ಆ ಪಕ್ಷದ ಹೈಕಮಾಂಡ್ ಬಂದು ಸಮಸ್ಯೆ ಆಲಿಸಿಲ್ಲ ಎಂದು ಹರಿಹಾಯ್ದಿದ್ದಾರೆ. 

ಬಿಜೆಪಿ ಶಿಸ್ತಿನ ಪಕ್ಷವಾಗಿದೆ. ಸ್ವಪಕ್ಷಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಳನಾಯಕರಿದ್ದಂತೆ. ಪಕ್ಷದೊಳಗೆ ಇದ್ದುಕೊಂಡು ಸಿದ್ದರಾಮಯ್ಯ ಆಟ ಆಡುತ್ತಿದ್ದಾರೆ. ಇದೆ ಛಾಯೆ ವಿಶ್ವನಾಥ್ ಅವರಲ್ಲೂ ಉಳಿದುಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ. 

‘ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ತಾನು ಸೊಸೆ ಕೀಲಿ ಕೈ ನನ್ನ ಕೈಯಲ್ಲಿ ಇದೆ ಎನ್ನುತ್ತಾರೆ. ಹಾಗಾದರೆ, ಅವರು ಯಾವ ಪಕ್ಷಕ್ಕೆ ಮಗ ಎಂದು ಪ್ರಶ್ನಿಸಿದ ಈಶ್ವರಪ್ಪ, ನಾವು ಪಕ್ಷವನ್ನು ತಾಯಿ ಅಂದುಕೊಂಡಿದ್ದೇವೆ. ನಮ್ಮ ತಾಯಿಗೆ ಕಿಂಚಿತ್ ತೊಂದರೆಯಾದರೂ ನಾವು ವಿರೋಧಿಸಿ ನಿಲ್ಲುತ್ತೇವೆ. ಸಿದ್ದರಾಮಯ್ಯ ತಾವು ಯಾವ ಪಕ್ಷಕ್ಕೆ ನಿಷ್ಠಾವಂತ ಎಂದು ತಿಳಿಸಬೇಕು’ ಎಂದು ಒತ್ತಾಯಿಸಿದರು.

ಬಳಿಕ ಕಾಂಗ್ರೆಸ್ ಪಕ್ಷದ ಪ್ರಚಾರದ ವಾಹನದ ಮೇಲೆ ವಿರೋಧ ಪಕ್ಷದ ನಾಯಕರ ಫೋಟೋವನ್ನು ತೆಗೆದುಹಾಕಿರುವುದರ ಕುರಿತು ಮಾತನಾಡಿರುವ ಅವರು, ಇದು ಕಾಂಗ್ರೆಸ್ ಪಕ್ಷದಲ್ಲಿರುವ ಒಗ್ಗಟ್ಟನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 

ಇದೇ ವೇಳೆ ಸಿದ್ದರಾಮಯ್ಯ,‌ ಪರಮೇಶ್ವರ ಇಬ್ಬರೂ ಯಾವುದಾದರೂ ದಲಿತರ ಬೀದಿಗೆ ಹೋಗಲಿ. ಸಿದ್ದರಾಮಯ್ಯರನ್ನು ಸೋಲಿಸಲು ನಾನು ಪ್ರಯತ್ನ ಮಾಡಿಲ್ಲವೆಂದು ಪರಮೇಶ್ವರ್ ಹೇಳಲಿ, ಪರಮೇಶ್ವರರನ್ನು ಸೋಲಿಸಲು ನಾನು ಪ್ರಯತ್ನ ಮಾಡಿಲ್ಲವೆಂದು ಸಿದ್ದರಾಮಯ್ಯ ಆಣೆ ಮಾಡಿ ಹೇಳಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಸವಾಲೆಸೆದಿದ್ದಾರೆ. 

ಕಾಂಗ್ರೆಸ್ ನಲ್ಲಿ ಐವರು ಸ್ವಯಂ ಘೋಷಿತ ಮುಖ್ಯಮಂತ್ರಿಗಳಿದ್ದಾರೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷವಿದೆ. ಒಂದೊಂದು ಸಮುದಾಯಕ್ಕೆ ಒಬ್ಬೊಬ್ಬ ನಾಯಕ ಸಿಎಂ ಆಗಬೇಕು ಎಂದು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. 

17 ಮಂದಿ ಕಾಂಗ್ರೆಸ್ ಗೆ ಮತ್ತೆ ಸೇರಿಕೊಳ್ಳುವ ವಿಚಾರದಲ್ಲಿ ಡಿ ಕೆ ಶಿವಕುಮರ್, ಸಿದ್ದರಾಮಯ್ಯ ನಡುವೆ ಕಿತ್ತಾಟ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವವೇ ಇಲ್ಲ. ನಿಮ್ಮ ಪಕ್ಷ  ನಿಮ್ಮ ಶಾಸಕರನ್ನ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಕ್ಕೂ ಕಾಂಗ್ರೆಸ್ ಬರಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೊಸೆ ಎನ್ನುತ್ತಾರೆ. ಬಾದಾಮಿಯಲ್ಲಿ ನಿಂತು ಅಲ್ಲಿಯೂ ಸೊಸೆ ಎನ್ನುತ್ತಾರೆ. ಕೀಲಿ ಕೈ ನನ್ನ ಕೈಯಲ್ಲಿ ಇದೆ ಎನ್ನುತ್ತಾರೆ. ಹಾಗಾದರೆ ನೀವು ಯಾವ ಪಕ್ಷಕ್ಕೆ ಮಗ ಹೇಳಿ ಎಂದು ಸಿದ್ದರಾಮಯ್ಯ ಅವರ ಸೊಸೆ ಹೇಳಿಕೆಗೆ ಈಶ್ವರಪ್ಪ ಲೇವಡಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com