ಕೆಆರ್'ಎಸ್ ಅಣೆಕಟ್ಟು ಬಿರುಕು ವಿಚಾರ: ತಾಂತ್ರಿಕ ಸಮಿತಿ ಅಧ್ಯಯನಕ್ಕೆ ಎಂಎಲ್'ಸಿ ಎಹೆಚ್ ವಿಶ್ವನಾಥ್ ಆಗ್ರಹ

ಕೆಆರ್‍ಎಸ್ ಅಣೆಕಟ್ಟು ಕನ್ನಡಿಗರ ಅಸ್ಮಿತೆ ಹಾಗಾಗಿ ಕೂಡಲೇ ತಾಂತ್ರಿಕ ಸಮಿತಿಯ ತಂಡವನ್ನು ಸ್ಥಳಕ್ಕೆ ರವಾನಿಸಿ ಎಲ್ಲವನ್ನೂ ಪರಿಶೀಲನೆ ನಡೆಸಿ, ಅಣೆಕಟ್ಟು ಸುರಕ್ಷಿತವಾಗಿದೆಯೇ ಎಂಬುದರ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಆಗ್ರಹಿಸಿದ್ದಾರೆ.
ವಿಶ್ವನಾಥ್
ವಿಶ್ವನಾಥ್

ಮೈಸೂರು: ಕೆಆರ್‍ಎಸ್ ಅಣೆಕಟ್ಟು ಕನ್ನಡಿಗರ ಅಸ್ಮಿತೆ ಹಾಗಾಗಿ ಕೂಡಲೇ ತಾಂತ್ರಿಕ ಸಮಿತಿಯ ತಂಡವನ್ನು ಸ್ಥಳಕ್ಕೆ ರವಾನಿಸಿ ಎಲ್ಲವನ್ನೂ ಪರಿಶೀಲನೆ ನಡೆಸಿ, ಅಣೆಕಟ್ಟು ಸುರಕ್ಷಿತವಾಗಿದೆಯೇ ಎಂಬುದರ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೆಆರ್‍ಎಸ್ ಡ್ಯಾಂ ಬಿರುಕು ಬಿಟ್ಟಿರುವ ಕುರಿತು ತಜ್ಞರು ಹೇಳಬೇಕು. ಆದರೆ ಈ ವಿಚಾರವಾಗಿ ರಾಜಕೀಯ ಮಾಡುವುದು ಬೇಡ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಆರ್‍ಎಸ್ ಅಣೆಕಟ್ಟೆ ಕಟ್ಟಿದ್ದರೆ ಈಗಾಗಲೇ ಬಿದ್ದು ಹೋಗುತ್ತಿತ್ತು. ರಾಜಪ್ರಭುತ್ವದಲ್ಲಿ ನಿರ್ಮಾಣ ಮಾಡಿರುವುದಕ್ಕೆ ಇನ್ನೂ ಚೆನ್ನಾಗಿದೆ. ಅದರೊಂದಿಗೆ ನಮಗೆ ಭಾವನಾತ್ಮಕ ಸಂಬಂಧ ಇದೆ ಎಂದು ಹೇಳಿದ್ದಾರೆ. 

ಕೆಆರ್‍ಎಸ್ ವಿಚಾರವಾಗಿ ಇಷ್ಟೊತ್ತಿಗೆ ಸಿಎಂ ಅವರೇ ಸ್ಪಷ್ಟನೆ ನೀಡಿ, ಜನರ ಆತಂಕ ನಿವಾರಣೆ ಮಾಡಬೇಕಿತ್ತು. ಆದರೆ, ಅವರು ಸುಮ್ಮನಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? ಕೆಆರ್ಎಸ್ ಅಣೆಕಟ್ಟು ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಅದನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com