ಯತ್ನಾಳ್ ಹಾದಿ ಹಿಡಿದ ನಿರಾಣಿ, ರೇಣುಕಾಚಾರ್ಯ: ಬಿಜೆಪಿ ನಾಯಕರು ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ?

ಬಿಜೆಪಿ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಗೆ ತೆರಳಿ ಬಿಜೆಪಿ ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಿದ ನಂತರ ಸಚಿವ ಮುರುಗೇಶ್ ನಿರಾಣಿ ಕೂಡ ಶುಕ್ರವಾರ ದೆಹಲಿಗೆ ತೆರಳಿದ್ದಾರೆ.
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಬೆಂಗಳೂರು: ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯಗಳು ದಿನನಿತ್ಯ ಬೆಂಗಳೂರಿನಿಂದ ನವದೆಹಲಿಗೆ ಶಿಫ್ಟ್ ಆಗುತ್ತಿದೆ.  

ಬಿಜೆಪಿ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಗೆ ತೆರಳಿ ಬಿಜೆಪಿ ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಿದ ನಂತರ ಸಚಿವ ಮುರುಗೇಶ್ ನಿರಾಣಿ ಕೂಡ ಶುಕ್ರವಾರ ದೆಹಲಿಗೆ ತೆರಳಿದ್ದಾರೆ. 10 ದಿನಗಳ ಹಿಂದೆ ಸಿಪಿ ಯೋಗೇಶ್ವರ್ ದೆಹಲಿಗೆ ಹೋಗಿ ಬಂದಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂಸದ ರೇಣುಕಾಚಾರ್ಯ ಅವರು ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಪ್ರತಿನಿಧಿಗಳೊಂದಿಗೆ ದೆಹಲಿಗೆ ತೆರಳಲಿದ್ದಾರೆ. ಪಕ್ಷದ ಹೈಕಮಾಂಡ್ ಮತ್ತು ಭಿನ್ನಮತೀಯರು ರಾಜ್ಯ ನಾಯಕತ್ವ ಮತ್ತು ಸಿಎಂ ವಿರುದ್ಧ ಹೇಳಿಕೆ ನೀಡುವ ಬಗ್ಗೆ ಮುಖಂಡರಿಗೆ ತಿಳಿಸುವುದಾಗಿ ಹೇಳಿದ್ದಾರೆ.

ಈಗ ಎದ್ದಿರುವ ಪ್ರಶ್ನೆ ಎಂದರೇ ಎಲ್ಲರೂ ಏಕೆ ದೆಹಲಿಗೆ ತೆರಳುತ್ತಿದ್ದಾರೆ, ಅವರು ಯಾರನ್ನು ಭೇಟಿ ಮಾಡುತ್ತಿದ್ದಾರೆ ಎಂಬ ಕುತೂಹಲ ಮೂಡಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಭೇಟಿ ನೀಡಿ ತೆರಳಿದ ಕೆಲವೇ ವಾರಗಳ ನಂತರ ಈ ಚಟುವಟಿಕೆ ಆರಂಭವಾಗಿದೆ. 

ಕೇಂದ್ರ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಯಡಿಯೂರಪ್ಪ ತಂಡವು ದೆಹಲಿಗೆ ತೆರಳಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡುತ್ತಿದೆ. ದೆಹಲಿಗೆ ತೆರಳುವ ನಾಯಕರು ಮುಖ್ಯವಾಗಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಅಥವಾ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಬಯಸುತ್ತಾರೆ ಆದರೆ ಆ ಮೂವರು ಪ್ರವೇಶವನ್ನು ನಿರಾಕರಿಸಿದಾಗ, ಅರುಣ್ ಸಿಂಗ್ ಅಥವಾ ದೆಹಲಿಯ ಹಿರಿಯ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ, ಅವರು ತಮ್ಮ ಕುಂದುಕೊರತೆಗಳನ್ನು ತಿಳಿಸಲು ಪ್ರಯತ್ನಿಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎರಡು ವರ್ಷಗಳಿಂದ ಪಕ್ಷವು ಶಾಸಕಾಂಗ ಪಕ್ಷದ ಸಭೆಗೆ ಕರೆ ನೀಡಿಲ್ಲ, ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಆಡಳಿತದಲ್ಲಿ ಹಸ್ತಕ್ಷೇಪ  ಸಂಬಂಧ ಹಲವು ಕುಂದುಕೊರತೆಗಳನ್ನು ಹಲವು ಬಾರಿ ಎತ್ತಲಾಗಿದೆ. 

ಯತ್ನಾಳ್, ಯೋಗೀಶ್ವರ, ಅರವಿಂದ್ ಬೆಲ್ಲದ್ ಮತ್ತು ಎ.ಎಚ್. ವಿಶ್ವನಾಥ್ ಪರಸ್ಪರ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ, ಆದರೆ ಮುರುಗೇಶ್ ನಿರಣಿ ಒಂಟಿಯಾಗಿ ಕಾಣಿಸಿಕೊಂಡಿದ್ದಾರೆ, ನಿರಾಣಿ ಅಮಿತ್ ಶಾ ಮತ್ತು ಇತರ ದೆಹಲಿ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆಂದು ಹೇಳಲಾಗುತ್ತದೆ. 

ಮೂವರೂ ಲಿಂಗಾಯತ ಪಂಚಮ ಶಾಲಿಗಳಾಗಿದ್ದರಿಂದ ನಿರಾಣಿ ಯತ್ನಾಳ್ ಮತ್ತು ಬೆಲ್ಲದ್ ಅವರನ್ನು ಪ್ರತಿಸ್ಪರ್ಧಿಗಳಾಗಿ ನೋಡುತ್ತಾರೆ. ತೇರದಾಳ್ ಬಿಜೆಪಿ ಶಾಸಕ ಸಿದ್ದು ಸವದಿ ಅವರನ್ನೂ ದೆಹಲಿಯ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಕಾಣಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com