ರಾಜ್ಯದ ನೂತನ ರಾಜ್ಯಪಾಲರಾಗಿ ಗೆಹ್ಲೋಟ್ ಪ್ರಮಾಣ ವಚನ ಇಂದು: ರಾಜಭವನ ಹೆಚ್ಚು ಸಕ್ರಿಯವಾಗುವ ನಿರೀಕ್ಷೆ

ಮಾಜಿ ಕೇಂದ್ರ ಸಚಿವ ತಾಮರ್ ಚಂದ್ ಗೆಹ್ಲೋಟ್ ಭಾನುವಾರ ಕರ್ನಾಟಕದ ರಾಜ್ಯಪಾಲರಾಗಿ ಭಾನುವಾರ ಬೆಳಿಗ್ಗೆ ರಾಜಭವನದಲ್ಲಿ  ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ ಅವರು ಶನಿವಾರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೆಹ್ಲೋಟ್ ಅವರನ್ನು ಸ್ವಾಗತಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ ಅವರು ಶನಿವಾರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೆಹ್ಲೋಟ್ ಅವರನ್ನು ಸ್ವಾಗತಿಸಿದ್ದಾರೆ.

ಬೆಂಗಳೂರು: ಮಾಜಿ ಕೇಂದ್ರ ಸಚಿವ ತಾಮರ್ ಚಂದ್ ಗೆಹ್ಲೋಟ್ ಭಾನುವಾರ ಕರ್ನಾಟಕದ ರಾಜ್ಯಪಾಲರಾಗಿ ಭಾನುವಾರ ಬೆಳಿಗ್ಗೆ ರಾಜಭವನದಲ್ಲಿ  ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾರ್ಯಕರ್ತರಾಗಿ ರಾಜಕೀಯ ಪ್ರವೇಶಿಸಿ ಇದೀಗ ರಾಜ್ಯದ ರಾಜ್ಯಪಾಲ ಹುದ್ದೆಗೇರಿದ ವ್ಯಕ್ತಿ, ಗೆಹ್ಲೋಟ್‌ರ ನಿಲುವು ಹೆಚ್ಚು ಕಾರ್ಯಪ್ರವೃತ್ತವಾಗಲಿದೆ ಎಂದು ಊಹಿಸಲಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಪಕ್ಷದಲ್ಲಿ ಬೇರೂರಿರುವ ಒಬ್ಬ ನುರಿತ ರಾಜಕಾರಣಿಯಾಗಿರುವ ರಾಜ್ಯಪಾಲರೊಬ್ಬರನ್ನು  ಬಿಜೆಪಿ ಎದುರು ನೋಡುತ್ತಿದೆ. ಮತ್ತೊಂದೆಡೆ, ಆಡಳಿತ ವಿಕೇಂದ್ರೀಕರಣ  ಆದ್ಯತೆಯ ನಡೆ ಬಗ್ಗೆ ಕಾಂಗ್ರೆಸ್ ಸಂಶಯ ವ್ಯಕ್ತಪಡಿಸಿದೆ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಗೆಹ್ಲೋಟ್ ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

ಆದಾಗ್ಯೂ, ಎರಡೂ ಪಕ್ಷಗಳು ರಾಜಭವನವು ಗೆಹ್ಲೋಟ್ ಅವರ ಪ್ರವೇಶದೊಂದಿಗೆ ಹೆಚ್ಚು ಸಕ್ರಿಯವಾಗಲಿದೆ ಎಂಬ ಭರವಸೆ ಹೊಂದೊದೆ. "ಗೆಹ್ಲೋಟ್ಸಮಗ್ರತೆಯ ವ್ಯಕ್ತಿ ಮತ್ತು ಸಾಕಷ್ಟು ಅನುಭವದೊಂದಿಗೆ ಬರುತ್ತಿದ್ದಾರೆ. ರಾಜಭವನದಲ್ಲಿ ಸಮಸ್ಯೆಗಳನ್ನು ಸರಿಯಾಗಿ ಪರಿಹರಿಸುವ ಸಾಮರ್ಥ್ಯ ಅವರದಾಗಿದೆ. ಈಗ ಸುಮಾರು 10 ವರ್ಷಗಳಿಂದ - ರಾಜಭವನ ನಿಷ್ಕ್ರಿಯವಾಗಿ ಕೊಳೆಯುತ್ತಿದೆ.ಗೆಹ್ಲೋಟ್ ಸಮಸ್ಯೆಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ ಎಂದು ನನಗೆ ವಿಶ್ವಾಸವಿದೆ, "ಎಂದು ಬಿಜೆಪಿ ಎಂಎಲ್ಸಿ ಲೆಹರ್ ಸಿಂಗ್ ಸಿರೋಯಾ ಹೇಳಿದರು.

ಎಚ್ ಆರ್ ಭಾರದ್ವಾಜ್ ಮತ್ತು ವಜುಭಾಯಿ ವಾಲಾ  ಅವರು ರಾಜ್ಯಪಾಲರಾಗಿದ್ದಾಗ ಸಿರೋಯಾ ಎಂಎಲ್ ಸಿ ಆಗಿದ್ದರು - ಎರಡೂ ಬಾರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಹೆಣಗಿತ್ತು.ಕರ್ನಾಟಕದ ರಾಜಭವನವು  ರಾಜ್ಯದ ಮತದಾರರು ಭಿನ್ನ ಆದೇಶವನ್ನು ನೀಡಿದಾಗೆಲ್ಲಾ  ಪ್ರಮುಖ ಪಾತ್ರ ವಹಿಸಿದೆ ವಾಸ್ತವವಾಗಿ, ಗೆಹ್ಲೋಟ್ ಕರ್ನಾಟಕಕ್ಕೆ ಹೊಸಬರಲ್ಲ.2006 ರಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅವರನ್ನು ಪಕ್ಷದ ಕರ್ನಾಟಕ ಉಸ್ತುವಾರಿ ಎಂದು ಹೆಸರಿಸಲಾಗಿತ್ತು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೂ ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ವರ್ಷ ಅದಾಗಿತ್ತು.

ಭಾರದ್ವಾಜ್ ಅವರನ್ನು ಕಾಂಗ್ರೆಸ್ ‘ಬಿಕ್ಕಟ್ಟು ವ್ಯವಹಾರಸ್ಥ’ ಎಂದು ಕರೆಯಲಾಗುತ್ತಿತ್ತು ಮತ್ತು ಕರ್ನಾಟಕಕ್ಕೆ ಗೆಹ್ಲೋಟ್ ಅವರನ್ನು ಗವರ್ನರ್ ಆಗಿ ನೇಮಕ ಮಾಡಲಾಗಿದ್ದು, ಕರ್ನಾಟಕದ ಬಿಜೆಪಿ ಆತ್ಮಾವಲೋಕನಕ್ಕೆ  ತುತ್ತಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ  ಅವರ ಆಪ್ತ ಗೆಹ್ಲೋಟ್  ಅವರ ನೇಮಕವು ಕರ್ನಾಟಕದಲ್ಲಿ ಬಿಜೆಪಿಗೆ ತನ್ನ ಬೇರು ಹೊಂದಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

"ಪ್ರಸ್ತುತ ಆದೇಶವು ದೇಶದ ಎಲ್ಲಾ ರಾಜಭವನಗಳನ್ನು ಬಿಜೆಪಿಯ ಬಲವರ್ಧನೆಯಾಗಿಸಿದೆ. ಬಿಜೆಪಿ ಅಲ್ಲದೆ ಬೇರೆ ಸರ್ಕಾರಗಳಲ್ಲಿ  ರಾಜ್ಯಪಾಲರು ರಾಜಕೀಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಗೆಹ್ಲೋಟ್ ಅವರು ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ಬದಿಗಿಟ್ಟು ತಮ್ಮ ಕಚೇರಿಯ ಜವಾಬ್ದಾರಿಗಳನ್ನು ನ್ಯಾಯಯುತವಾಗಿ ನಿರ್ವಹಿಸಬಹುದೆಂದು ನಾನು ಭಾವಿಸುತ್ತೇನೆ, ಆದರೆ ನನಗೆ ಆ ಕುರಿತು ಬಹಳ ವಿಶ್ವಾಸವಿಲ್ಲ ”ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com